ವಿಶ್ವಕರ್ಮ ಯೋಜನೆ ಸದುಪಯೋಗ ಪಡೆಯಿ-ಸಂಗಣ್ಣ ಕರಡಿ

| Published : Nov 18 2023, 01:00 AM IST

ಸಾರಾಂಶ

ದೇಶದ ಸಾಮಾಜಿಕ ಭದ್ರತಾ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ವಿಶ್ವಕರ್ಮ ಯೋಜನೆ ಜಾರಿಗೆ ತಂದು ಕರಕುಶಲ ಕಲೆಯಲ್ಲಿ ತೊಡಗಿಕೊಂಡಿರುವ ಕುಶಲಕರ್ಮಿಕರಿಗೆ ಸ್ವಯಂ ಉದ್ಯೋಗಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಒ ದಗಿಸುತ್ತಿದ್ದು, ಆಸಕ್ತರ ಇದರ ಸದುಪಯೋಗ ಪಡೆಯಬೇಕು ಎಂದು ಸಂಸದ ಸಂಗಣ್ಣ ಕರಡಿ. ಕೋವಿಡ್ ವೇಳೆ ಸಾಕಷ್ಟು ಬಡ ಕುಟುಂಬಗಳು ಕೆಲಸವಿಲ್ಲದೇ ಪರದಾಡಿವೆ. ಇದನ್ನರಿತ ಪ್ರಧಾನಿ ಮೋದಿ ನೇಕಾರ, ಅ ಕ್ಕಸಾಲಿಗ, ಕಮ್ಮಾರ, ಬಡಗಿ, ಶಿಲ್ಪ ರಚನಾಕಾರ, ಚಮ್ಮಾರ, ಮೇಸ್ತ್ರಿ, ಬುಟ್ಟಿ, ಗೊಂಬೆ ತಯಾರಿಕ, ದೋಬಿ, ಸವಿತಾ ಸ ಮಾಜ ಸೇರಿ 18 ಸಮುದಾಯಗಳ ಜನತೆ ಆರ್ಥಿಕ ವಾಗಿ ಸದೃಢವಾಗಲು ವಿಶ್ವಕರ್ಮ ಯೋಜನೆಯಡಿ ಸಾಲ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ದೇಶದ ಸಾಮಾಜಿಕ ಭದ್ರತಾ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ವಿಶ್ವಕರ್ಮ ಯೋಜನೆ ಜಾರಿಗೆ ತಂದು ಕರಕುಶಲ ಕಲೆಯಲ್ಲಿ ತೊಡಗಿಕೊಂಡಿರುವ ಕುಶಲಕರ್ಮಿಕರಿಗೆ ಸ್ವಯಂ ಉದ್ಯೋಗಕ್ಕಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ಒ ದಗಿಸುತ್ತಿದ್ದು, ಆಸಕ್ತರ ಇದರ ಸದುಪಯೋಗ ಪಡೆಯಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರ ಧಾನಮಂತ್ರಿ ವಿಶ್ವಕರ್ಮ ಯೋಜನೆ ಸ್ವನಿಧಿಯಿಂದ ಪಿಎಂ ಸುರಕ್ಷದವರೆಗೆ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೋವಿಡ್ ವೇಳೆ ಸಾಕಷ್ಟು ಬಡ ಕುಟುಂಬಗಳು ಕೆಲಸವಿಲ್ಲದೇ ಪರದಾಡಿವೆ. ಇದನ್ನರಿತ ಪ್ರಧಾನಿ ಮೋದಿ ನೇಕಾರ, ಅ ಕ್ಕಸಾಲಿಗ, ಕಮ್ಮಾರ, ಬಡಗಿ, ಶಿಲ್ಪ ರಚನಾಕಾರ, ಚಮ್ಮಾರ, ಮೇಸ್ತ್ರಿ, ಬುಟ್ಟಿ, ಗೊಂಬೆ ತಯಾರಿಕ, ದೋಬಿ, ಸವಿತಾ ಸ ಮಾಜ ಸೇರಿ 18 ಸಮುದಾಯಗಳ ಜನತೆ ಆರ್ಥಿಕ ವಾಗಿ ಸದೃಢವಾಗಲು ವಿಶ್ವಕರ್ಮ ಯೋಜನೆಯಡಿ ಸಾಲ ನೀಡಲಾಗುತ್ತಿದೆ.ಮೊದಲ ಹಂತವಾಗಿ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಶೇ.5 ಬಡ್ಡಿದರದಲ್ಲಿ ₹1ಲಕ್ಷ (18 ತಿಂಗಳ ಮರುಪಾವತಿ), ಎರಡನೇ ಹಂತದಲ್ಲಿ ₹2ಲಕ್ಷ (30 ತಿಂಗಳ ಮರುಪಾವತಿ) ಸಾಲ ನೀಡಲಾಗುತ್ತದೆ. ವಿಶ್ವಕರ್ಮ ಯೋಜನೆಗೆ ಕೇಂದ್ರ ಸರ್ಕಾರ ₹13 ಸಾವಿರ ಕೋಟಿ ಮೀಸಲಿಟ್ಟಿದ್ದು, ಆಸಕ್ತರು ಸಾಮಾನ್ಯ ಸೇವಾಕೇಂದ್ರದ ಪಿಎಂ ವಿಶ್ವಕರ್ಮ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪಿಎಂ ವಿಶ್ವ ಕರ್ಮ ಯೋಜನೆ ಸೌಲಭ್ಯ ಪಡೆಯಲು ಕುಶಲಕರ್ಮಿಗಳು ಪಿಎಂ ವಿಶ್ವಕರ್ಮ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಂಡರೆ, ನುರಿತ ಕುಶಲಕರ್ಮಿಗಳಿಗೆ ವಿಶ್ವಕರ್ಮ ಪ್ರಮಾ ಣಪತ್ರ, ಗುರುತಿನ ಚೀಟಿ‌‌ ನೀಡಲಾಗುತ್ತದೆ. ಹಾಗೇ ಕೌಶಲ ವರ್ಧನೆಗೆ ತರಬೇತಿ ನೀಡಲಿದ್ದು, ತರಬೇತಿ ಹಂತದಲ್ಲಿ ₹ 15 ಸಾವಿರ ಗೌರವಧನ ನೀಡಲಾಗುತ್ತದೆ. ಈ ಸೌಲಭ್ಯ ಎಲ್ಲರೂ ಪಡೆಯಬೇಕು ಎಂದರು.ಮಾಜಿ ಶಾಸಕ ಜಿ.ವೀರಪ್ಪ, ಕಾಡ ಮಾಜಿ ಅಧ್ಯಕ್ಷ ಗಿರೆಗೌಡ, ವಿರೂಪಾಕ್ಷಪ್ಪ ಸಿಂಗನಾಳ, ಜಿ‌ಪಂ ಮಾಜಿ ಸದಸ್ಯ ಸಿದ್ದರಾ ಮಸ್ವಾಮಿ, ಕಳಕಪ್ಪ ಜಾಧವ್, ವೀರಭದ್ರಪ್ಪ ನಾಯಕ, ಹನುಮಂತಪ್ಪ ನಾಯಕ, ಚೆನ್ನಪ್ಪ ಮಳಗಿ, ಕಾಶಿನಾಥ ಚಿತ್ರಗಾರ ಸೇರಿ ಬಿಜೆಪಿ ಕಾರ್ಯಕರ್ತರು ಇದ್ದರು.