ರಾಜ್ಯದಲ್ಲಿ 29ನೇ ಸ್ಥಾನಕ್ಕೆ ಕುಸಿದ ಅಖಂಡ ಬಳ್ಳಾರಿ ಜಿಲ್ಲೆ

| Published : Apr 11 2024, 12:52 AM IST

ರಾಜ್ಯದಲ್ಲಿ 29ನೇ ಸ್ಥಾನಕ್ಕೆ ಕುಸಿದ ಅಖಂಡ ಬಳ್ಳಾರಿ ಜಿಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಅಖಂಡ ಜಿಲ್ಲೆಯಲ್ಲಿ ಮಾ.1ರಿಂದ ಏ.22ರವರೆಗೆ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ಪರೀಕ್ಷೆಗಳು ಜರುಗಿದ್ದವು.

ಬಳ್ಳಾರಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಗೆ (ಬಳ್ಳಾರಿ-ವಿಜಯನಗರ ಜಿಲ್ಲೆ ಒಳಗೊಂಡಂತೆ) ಶೇ.74.77ರಷ್ಟು ಫಲಿತಾಂಶ ಬಂದಿದೆ. ರಾಜ್ಯದಲ್ಲಿ 29ನೇ ಸ್ಥಾನದಲ್ಲಿದೆ. ಕಳೆದ ವರ್ಷ ಶೇ.69ರಷ್ಟು ಫಲಿತಾಂಶ ಪಡೆದು, 27ನೇ ಸ್ಥಾನದಲ್ಲಿತ್ತು.

ಈ ಬಾರಿಯೂ ನಿರೀಕ್ಷೆಯಂತೆಯೇ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಅಖಂಡ ಜಿಲ್ಲೆಯಲ್ಲಿ ಮಾ.1ರಿಂದ ಏ.22ರವರೆಗೆ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ಪರೀಕ್ಷೆಗಳು ಜರುಗಿದ್ದವು. ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸಬರು, ಪುನರಾವರ್ತಿತ ಮತ್ತು ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 28,026 ವಿದ್ಯಾರ್ಥಿಗಳಲ್ಲಿ 20,955 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.

ಪರೀಕ್ಷೆಗೆ ನೋಂದಣಿಯಾಗಿದ್ದ 25823 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 25073 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಇದರಲ್ಲಿ 18730 ವಿದ್ಯಾರ್ಥಿಗಳು ತೇರ್ಗಡೆ (ಶೇ.74.77) ಹೊಂದಿದ್ದಾರೆ.

ವಿಜ್ಞಾನ, ಕಲಾ ಹಾಗೂ ವಾಣಿಜ್ಯ ವಿಭಾಗಗಳ ಪೈಕಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಶೇಕಡಾವಾರು ಫಲಿತಾಂಶ ಬಂದಿದ್ದು, ನಂತರದ ಸ್ಥಾನದಲ್ಲಿ ವಾಣಿಜ್ಯ ಹಾಗೂ ಕಲಾ ವಿಭಾಗಗಳಿವೆ.

ವಿಜ್ಞಾನ ವಿಭಾಗದಲ್ಲಿ (ರೆಗ್ಯುಲರ್‌) ನೋಂದಣಿಯಾಗಿದ್ದ 9686 ವಿದ್ಯಾರ್ಥಿಗಳ ಪೈಕಿ 9672 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ 8374 ವಿದ್ಯಾರ್ಥಿಗಳು ಪಾಸ್ (ಶೇ.86.58) ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ (ರೆಗ್ಯುಲರ್‌) ನೊಂದಣಿಯಾಗಿದ್ದ 6481 ವಿದ್ಯಾರ್ಥಿಗಳಲ್ಲಿ 6108 ವಿದ್ಯಾರ್ಥಿಗಳು ಪರೀಕ್ಷೆ ಬರೆದು, 4500 ವಿದ್ಯಾರ್ಥಿಗಳು (ಶೇ.73.67) ಉತ್ತೀರ್ಣಗೊಂಡಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ನೋಂದಣಿಯಾಗಿದ್ದ 9656 ವಿದ್ಯಾರ್ಥಿಗಳ ಪೈಕಿ 9293 ಪರೀಕ್ಷೆಗೆ ಹಾಜರಾಗಿದ್ದರು. 5856 ವಿದ್ಯಾರ್ಥಿಗಳು (ಶೇ.63.02) ಉತ್ತೀರ್ಣಗೊಂಡಿದ್ದಾರೆ.

ಈ ಬಾರಿ ಅಖಂಡ ಬಳ್ಳಾರಿ ಜಿಲ್ಲೆಯ ಫಲಿತಾಂಶ ಟಾಪ್ 10 ರೊಳಗೆ ತರಲು ಪದವಿಪೂರ್ವ ಶಿಕ್ಷಣ ಇಲಾಖೆ ಶತಾಯಗತಾಯ ಪ್ರಯತ್ನಿಸಿತ್ತು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳತ್ತ ವಿಶೇಷ ಗಮನ ಹಾಗೂ ನಿರಂತರ ಫಲಿತಾಂಶ ಕುಸಿಯುತ್ತಿರುವ ಕಾಲೇಜುಗಳತ್ತ ವಿಶೇಷ ಗಮನ ಹರಿಸಲಾಗಿತ್ತು. ಫಲಿತಾಂಶ ಉತ್ತಮಗೊಳಿಸಲು ಕಿರು ಪರೀಕ್ಷೆಗಳು, ಸಿದ್ಧತಾ ಪರೀಕ್ಷೆಗಳು, "ಕನಿಷ್ಠ ವಿಷಯ ಗರಿಷ್ಠ ಅಭ್ಯಾಸ " ಯೋಜನೆ ಜಾರಿ, ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆ ಕುರಿತು ಮನವರಿಕೆ ಸೇರಿದಂತೆ ನಾನಾ ಕಸರತ್ತುಗಳನ್ನು ನಡೆಸಲಾಗಿತ್ತು. ಇಷ್ಟಾಗಿಯೂ ಜಿಲ್ಲೆಯ ಫಲಿತಾಂಶ ನಿರೀಕ್ಷಿತ ಸುಧಾರಣೆ ಕಂಡು ಬಂದಿಲ್ಲ.

ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು

ಕಲಾ ವಿಭಾಗ:

ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕವಿತಾ ಬಿ.ವಿ. (596 ಅಂಕ) ಜಿಲ್ಲೆಗೆ ಮೊದಲನೇ ಸ್ಥಾನ ಮತ್ತು ರಾಜ್ಯಕ್ಕೆ ಮೊದಲನೇ ರ್‍ಯಾಂಕ್.

ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶಶಿಧರ.ಡಿ (594 ಅಂಕ) ಜಿಲ್ಲೆಗೆ 2ನೇ ಸ್ಥಾನ ಮತ್ತು ರಾಜ್ಯಕ್ಕೆ ಮೂರನೇ ರ್‍ಯಾಂಕ್.

ಹಡಗಲಿಯ ಎಸ್‍ಎಂಎಂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ.ಬಿ.ಎ (594 ಅಂಕ) ಜಿಲ್ಲೆಗೆ 2ನೇ ಸ್ಥಾನ ಮತ್ತು ರಾಜ್ಯಕ್ಕೆ ಮೂರನೇ ರ್‍ಯಾಂಕ್.

ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಎಂ.ಪಿ.ಬೀರೇಶ್ (593 ಅಂಕ) ಜಿಲ್ಲೆಗೆ 3ನೇ ಸ್ಥಾನ ಮತ್ತು ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್.

ಇಟಗಿಯ ಪಂಚಮಸಾಲಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪಿ.ವಿರೇಶ್ (592 ಅಂಕ) ಜಿಲ್ಲೆಗೆ 4ನೇ ಸ್ಥಾನ ಮತ್ತು ರಾಜ್ಯಕ್ಕೆ ಐದನೇ ರ್‍ಯಾಂಕ್.

ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನಸ.ಎನ್ (592 ಅಂಕ) ಜಿಲ್ಲೆಗೆ 4ನೇ ಸ್ಥಾನ ಮತ್ತು ರಾಜ್ಯಕ್ಕೆ ಐದನೇ ರ್‍ಯಾಂಕ್.

ಕೊಟ್ಟೂರು ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅನುಷಾ.ಎ (592 ಅಂಕ) ಜಿಲ್ಲೆಗೆ 4ನೇ ಸ್ಥಾನ ಮತ್ತು ರಾಜ್ಯಕ್ಕೆ ಐದನೇ ರ್‍ಯಾಂಕ್ವಾಣಿಜ್ಯ ವಿಭಾಗ:

ಬಳ್ಳಾರಿಯ ಬಿಪಿಎಸ್‍ಸಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮಾನಸ್ವಿನಿ (592 ಅಂಕ) ಜಿಲ್ಲೆಗೆ ಮೊದಲನೇ ಸ್ಥಾನ. ಇದೇ ಕಾಲೇಜಿನ ವಿದ್ಯಾರ್ಥಿಗಳಾದ ಮೋಕ್ಷಾ (591 ಅಂಕ) ಜಿಲ್ಲೆಗೆ 2ನೇ ಸ್ಥಾನ. ನಂದಿನಿ (590 ಅಂಕ) ಮತ್ತು ಆದಿತ್ಯ ಲುಂಕರ್ (590 ಅಂಕ) ಇಬ್ಬರೂ ಕ್ರಮವಾಗಿ ಜಿಲ್ಲೆಗೆ 3 ನೇ ಪಡೆದಿದ್ದಾರೆ.

ವಿಜ್ಞಾನ ವಿಭಾಗ:

ಹಗರಿಬೊಮ್ಮನಹಳ್ಳಿಯ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಯಶ್ವಂತ್ (592 ಅಂಕ) ಜಿಲ್ಲೆಗೆ ಮೊದಲನೇ ಸ್ಥಾನ.

ಬಳ್ಳಾರಿಯ ಜ್ಞಾನಾಮೃತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದೇವರಾಜ (590 ಅಂಕ) ಜಿಲ್ಲೆಗೆ 2 ನೇ ಸ್ಥಾನ.

ಕೊಟ್ಟೂರಿನ ಸನ್ನಿಧಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಶರತ್ ಕುಮಾರ್.ಕೆ.ಎಂ (587 ಅಂಕ) ಮತ್ತು ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಮೃತ.ಹೆಚ್.ಎಸ್ (587 ಅಂಕ) ಅವರು ಕ್ರಮವಾಗಿ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.