ಎಷ್ಟೇ ಶಕ್ತಿಗಳು ಒಂದಾದರೂ ಮತದಾರರು ನನ್ನ ಕೈ ಬಿಡಲ್ಲ: ಬಿ.ವೈ.ರಾಘವೇಂದ್ರ

| Published : Apr 11 2024, 12:52 AM IST

ಎಷ್ಟೇ ಶಕ್ತಿಗಳು ಒಂದಾದರೂ ಮತದಾರರು ನನ್ನ ಕೈ ಬಿಡಲ್ಲ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ನಿಮ್ಮ ರಾಘಣ್ಣನ ಜಾತಕದಲ್ಲಿ ಹಾಗೆ ಇದೆಯೇನೋ ಗೊತ್ತಿಲ್ಲ. ಅಂತಹ ಎಂತಹ ಸಂದರ್ಭ ಬಂದರೂ ಈ ಕ್ಷೇತ್ರದ ಮತದಾರರು ನನ್ನ ಕೈ ಬಿಟ್ಟಿಲ್ಲ. ಈ ಬಾರಿಯೂ ಬೇರೆಗಳು ಒಂದಾಗಿವೆ ಎಂದರು

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಳೆದ ಚುನಾವಣೆಗಳಂತೆ ಈ ಚುನಾವಣೆಯಲ್ಲೂ ರಾಘಣ್ಣನನ್ನು ಸೋಲಿಸಬೇಕು ಎಂದು ಎಲ್ಲ ಶಕ್ತಿಗಳು ಒಂದಾಗಿವೆ. ಎಷ್ಟೇ ಶಕ್ತಿಗಳು ಇದ್ದರೂ ಈ ಕ್ಷೇತ್ರದ ಮತದಾರರು ನನ್ನ ಕೈ ಹಿಡಿದಿದ್ದಾರೆ. ಈ ಬಾರಿಯೂ ಅದೇ ವಿಶ್ವಾಸ ಇದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂಗಳವಾರ ಯುಗಾದಿ ಹಬ್ಬದ ಇದ್ದುದ್ದರಿಂದ ಕೇವಲ ಸಭೆಗಳಿಗೆ ಅಷ್ಟೇ ಆದ್ಯತೆ ಕೊಟ್ಟಿದ್ದೆವು. ಮರಳಿ ಬಂದು ಯುಗಾದಿ, ಮರಳಿ ಬರಲಿ ಮೋದಿ ಎಂದು ಮಹಿಳಾ ಕಾರ್ಯಕರ್ತರ ಕಾರ್ಯಕ್ರಮ ಮಾಡಿದ್ದಾರೆ. ನಾನು ಎದುರಿಸಿದ ನಾಲ್ಕು ಚುನಾವಣೆಯಲ್ಲೂ ಎಲ್ಲ ಪಕ್ಷದವರು ಒಂದಾಗಿ ಚುನಾವಣೆ ಮಾಡಿದ್ದರು. ನಿಮ್ಮ ರಾಘಣ್ಣನ ಜಾತಕದಲ್ಲಿ ಹಾಗೆ ಇದೆಯೇನೋ ಗೊತ್ತಿಲ್ಲ. ಅಂತಹ ಎಂತಹ ಸಂದರ್ಭ ಬಂದರೂ ಈ ಕ್ಷೇತ್ರದ ಮತದಾರರು ನನ್ನ ಕೈ ಬಿಟ್ಟಿಲ್ಲ. ಈ ಬಾರಿಯೂ ಬೇರೆಗಳು ಒಂದಾಗಿವೆ. ಜೊತೆಗೆ ಬೇರೆ ಶಕ್ತಿಯೂ ಒಂದಾಗಿದೆ. ಈ ನಡುವೆಯೂ ಮತದಾರರು, ಕಾರ್ಯಕರ್ತರ ಆಶೀರ್ವಾದದ ಜೊತೆಗೆ ನರೇಂದ್ರ ಮೋದಿಗಾಗಿ ಜನರು ಈ ಬಾರಿ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್‌ ಅಭ್ಯರ್ಥಿ ನಿನ್ನೆ ಮೊನ್ನೆ ಕಾಂಗ್ರೆಸ್‌ಗೆ ಬಂದಿದ್ದಾರೆ. ಹಿಂದೆ ನಾವೇನೂ ಮಾಡಿದ್ದೆವು. ಮುಂದೆ ಏನೂ ಮಾಡಬೇಕು ಎನ್ನುವ ವಿಚಾರ ಇಟ್ಟುಕೊಂಡು ಪ್ರಚಾರ ಮಾಡುವುದನ್ನು ಬಿಟ್ಟು ಬಿಜೆಪಿ ಸಿದ್ದಾಂತವನ್ನು ಪ್ರಶ್ನೆ ಮಾಡುವುದು ಸರಿಯಲ್ಲ. ನೆಹರು ಕಾಲದಿಂದಲೂ ಕಾಂಗ್ರೆಸ್‌ ನಾಯಕರು ಇದೇ ರೀತಿ ಭಾಷಣ ಮಾಡಿದರ ಪರಿಣಾಮ ಇವತ್ತು ಕಾಂಗ್ರೆಸ್‌ ಯಾವ ಪರಿಸ್ಥಿತಿಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮನೆ ಬಗ್ಗೆ ಚಿಂತನೆ ಬಿಟ್ಟು ನಿಮ್ಮ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿಕೊಂಡಿ ಹೋಗಿ ಎಂದು ಸಲಹೆ ನೀಡಿದರು.

ಏ.18ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಅಂದು ಮಾಜಿ ಸಿಎಂ ಕುಮಾರಸ್ವಾಮಿ, ಬಿ.ಎಸ್‌.ಯಡಿಯೂರಪ್ಪ, ಅರವಿಂದ ಕಾರಜೋಳ,ಭೋವಿ ಸಮಾಜದ ಮುಖಂಡರು, ಜಿಲ್ಲೆಯ ಎಲ್ಲ ಮುಖಂಡರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಮುಖಂಡರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.