ಮುದ್ದೇಬಿಹಾಳದಲ್ಲಿ ಇಂದು ಅಕ್ಷರ ಜಾತ್ರೆ

| Published : Feb 15 2025, 12:30 AM IST

ಮುದ್ದೇಬಿಹಾಳದಲ್ಲಿ ಇಂದು ಅಕ್ಷರ ಜಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳನಾಟಕ, ಕಲೆ, ಸಾಹಿತ್ಯ, ತತ್ವಪದಗಳು ಮತ್ತು ಅಂತಃಕರಣದ ಶರಣ ಪರಂಪರೆಗೆ ಹೆಸರುಗಳು ತಾಯ್ತನದ ಅನ್ಯೋನ್ಯತೆಗಳು. ಅವು ಮನುಷ್ಯ ಕುಲಕ್ಕೆ ದಕ್ಕಿದ ಅನುಪಮ ಕಾಣಿಕೆಗಳು. ಮುದ್ದೇಬಿಹಾಳದಲ್ಲಿ ಫೆ.5ಕ್ಕೆ ನಡೆಯಲಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸಾಹಿತಿ ಅಶೋಕ ಮಣಿ ಆಯ್ಕೆಯಾಗಿದ್ದು, ಅವರ ಸಮಾಜಮುಖಿ ಬದುಕಿನ ಅಪೂರ್ವ ರೂಪಕಗಳಾಗಿವೆ. ಕನ್ನಡ ಪರಿಚಾರಕ ಸಾಹಿತಿ ಅಶೋಕ ಮಣಿ(67) ಇಳಿ ವಯಸ್ಸಿನಲ್ಲೂ ನಾಡು, ನುಡಿ ಬಗ್ಗೆ ಅಪಾರ ಕಾಳಜಿ. ಪ್ರಾಮಾಣಿಕವಾಗಿ ದುಡಿಯುವ ಮೂಲಕ ಕನ್ನಡ ತಾಯಿ ಭುವನೇಶ್ವರಿಯ ಸೇವೆಗೈದು ಸಾರ್ಥಕತೆ ಮೆರದಿದ್ದಾರೆ.

ನಾರಾಯಣ ಮಾಯಾಚಾರಿ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನಾಟಕ, ಕಲೆ, ಸಾಹಿತ್ಯ, ತತ್ವಪದಗಳು ಮತ್ತು ಅಂತಃಕರಣದ ಶರಣ ಪರಂಪರೆಗೆ ಹೆಸರುಗಳು ತಾಯ್ತನದ ಅನ್ಯೋನ್ಯತೆಗಳು. ಅವು ಮನುಷ್ಯ ಕುಲಕ್ಕೆ ದಕ್ಕಿದ ಅನುಪಮ ಕಾಣಿಕೆಗಳು. ಮುದ್ದೇಬಿಹಾಳದಲ್ಲಿ ಫೆ.5ಕ್ಕೆ ನಡೆಯಲಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಸಾಹಿತಿ ಅಶೋಕ ಮಣಿ ಆಯ್ಕೆಯಾಗಿದ್ದು, ಅವರ ಸಮಾಜಮುಖಿ ಬದುಕಿನ ಅಪೂರ್ವ ರೂಪಕಗಳಾಗಿವೆ. ಕನ್ನಡ ಪರಿಚಾರಕ ಸಾಹಿತಿ ಅಶೋಕ ಮಣಿ(67) ಇಳಿ ವಯಸ್ಸಿನಲ್ಲೂ ನಾಡು, ನುಡಿ ಬಗ್ಗೆ ಅಪಾರ ಕಾಳಜಿ. ಪ್ರಾಮಾಣಿಕವಾಗಿ ದುಡಿಯುವ ಮೂಲಕ ಕನ್ನಡ ತಾಯಿ ಭುವನೇಶ್ವರಿಯ ಸೇವೆಗೈದು ಸಾರ್ಥಕತೆ ಮೆರದಿದ್ದಾರೆ. ಅನೇಕ ಕವನ, ಲೇಖನ ಬರೆದರೂ ಪುಸ್ತಕ ರೂಪದಲ್ಲಿ ತರಲು ಮುಂದಾಗಿಲ್ಲ. ಕವಿಗೋಷ್ಠಿ, ಆಕಾಶವಾಣಿ, ದೂರದರ್ಶನ ಕವಿತೆ ವಾಚನ ಮಾಡಿದ್ದಾರೆ. ಸಾಕ್ಷಿ ಪ್ರಜ್ಞೆಯಲ್ಲಿ ಒಬ್ಬ ಕನ್ನಡಿಗನಾಗಿ ಸಾಹಿತ್ಯ ಪರಿಷತ್‌ಗೆ ಅನನ್ಯ ಕೊಡುಗೆ ನೀಡಿದ್ದಾರೆ ಈ ಎಲ್ಲ ಹಿನ್ನೆಲೆಯಲ್ಲಿ ಅಶೋಕ ಮಣಿ ಸರ್ವಾಧ್ಯಕ್ಷತೆಯಲ್ಲಿ ಸಾಹಿತ್ಯ ಸಮ್ಮೇಳನ ಸಾಂಸ್ಕೃತಿಕವಾಗಿ ಅದ್ವಿತೀಯ ಮಹತ್ವ ಪಡೆದುಕೊಳ್ಳಲಿದೆ. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಎಂ.ಬಿ.ನಾವದಗಿ ಹಾಲಿ ಅಧ್ಯಕ್ಷ ಕಾಮರಾಜ ಬಿರಾದಾರ ಹಾಗೂ ಪದಾಧಿಕಾರಿಗಳು ಅಭಿನಂದನಾರ್ಹರು. ಮುದ್ದೇಬಿಹಾಳದಲ್ಲಿ 1990ರಲ್ಲಿ ನಡೆದ 5ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ ಶಿವರಾಂ ಕಾರಂತ ಆಗಮಿಸಿದ್ದರು. ಈ ವೇಳೆ ಅವರು ಮಾಡಿದ ಅಮೋಘ ಭಾಷಣ ಈಗಲೂ ಜನರ ಮನದಲ್ಲಿದೆ. 2005ರಲ್ಲಿ ನಡೆದ 9ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಪ್ರಗತಿಪರ ಚಿಂತಕ, ಖ್ಯಾತ ಸಾಹಿತಿ ಪ್ರೊ.ಬರಗೂರ ರಾಮಚಂದ್ರಪ್ಪನವರ ಮಾಡಿದ್ದರು. 2015ರಲ್ಲಿ ಜರುಗಿದ 14ನೇ ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು.

5ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಅಶೋಕ ಪಿ.ಮಣಿ ವಹಿಸಿಕೊಂಡಿದ್ದಾರೆ. ಇವರು ಮೂಲತಃ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದವರು. ವಿದ್ಯಾರ್ಥಿ ದಿಸೆಯಿಂದಲೇ ಕಥೆ, ಕವನ, ಲೇಖನಗಳನ್ನು ಬರೆಯುವ ಗೀಳು ಅಂಟಿಸಿಕೊಂಡಿದ್ದಾರೆ. ಈಗಾಗಲೇ ಇವರ ಅನೇಕ ಲೇಖನ, ಕಥೆ, ಕವನಗಳು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಮತಗಿ ಗ್ರಾಮದಲ್ಲಿ ಮಣಿಯವರ ಪ್ರಥಮ ನಾಟಕ ಕೃತಿ ಕಚ್ಚಿತು ಸರ್ಪ ಅಳಿಯಿತು ದರ್ಪ ಕಾಮಧೇನು ನಾಟ್ಯ ಸಂಘದಿಂದ 1979ರಲ್ಲಿಯೇ ಯಶಸ್ವಿಯಾಗಿ ರಂಗಭೂಮಿ ಮೇಲೆ ಪ್ರಯೋಗಿಸಲ್ಪಟ್ಟಿದೆ. ಸುಮಾರು 20 ಕ್ಕಿಂತ ಹೆಚ್ಚು ಮಕ್ಕಳ ಏಕಾಂತ ನಾಟಕ, ಜ್ಞಾನ ದೀಪ, ಮುತ್ತು ಎಂಬ ಕವನ ಸಂಕಲನಗಳು ಮತ್ತು ಅಮೃತ ಸಿಂಚನ, ಶ್ರೀಪವಾಡ ಬಸವೇಶ್ವರ ಲೀಲಾಮೃತ ಎಂಬ ಕೃತಿ ರಚಿಸಲ್ಪಟ್ಡಿವೆ. ಭಾವಸಿಂಚನ, ಬರದ ಸಿರಿ, ಮುದ್ದಬ್ಬೆಯ ಸಿರಿ, ಕೋಟೆ ಧ್ವನಿ, ಜ್ಞಾನಸುಧೆ ಮುಂತಾದ ಗ್ರಂಥಗಳನ್ನು ಇವರು ಸಂಪಾದಿಸಿದ್ದಾರೆ. ಬಸರಕೋಡದ ಶ್ರೀಪವಾಡ ಬಸವೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ನಂತರ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ. 2018ರಲ್ಲಿ ನಿವೃತ್ತರಾಗಿದ್ದು, ಸಾಮಾಜಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ ರಂಗಗಳಲ್ಲಿ ತೊಡಗಿಸಿಕೊಂಡಿದ್ದಾರೆ.