ಆಳಂದ: ರಂಗಿನಾಟದಲ್ಲಿ ಸಂಭ್ರಮಿಸಿದ ಯುವಕರು

| Published : Mar 26 2024, 01:03 AM IST

ಆಳಂದ: ರಂಗಿನಾಟದಲ್ಲಿ ಸಂಭ್ರಮಿಸಿದ ಯುವಕರು
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಸೋಮವಾರ ಆಚರಿಸಲಾದ ಬಣ್ಣದೋಕುಳಿಯಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳು ಪರಸ್ಪರ ರಂಗು ರಂಗಿನ ಬಣ್ಣವನ್ನು ಎರಚಿಕೊಂಡು ಸಂಭ್ರಮಿಸಿದರು.

ಕನ್ನಡಪ್ರಭ ವಾರ್ತೆ ಆಳಂದ

ಒಂದಡೆ 10ನೇ ತರಗತಿಯ ಮಕ್ಕಳ 14 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಪರೀಕ್ಷೆ ನಡೆಯಿತು. ಇನ್ನೊಂದಡೆ ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಹೋಳಿ ಹಬ್ಬದ ಪ್ರಯುಕ್ತ ಸೋಮವಾರ ಆಚರಿಸಲಾದ ಬಣ್ಣದೋಕುಳಿಯಲ್ಲಿ ಯುವಕರು, ಮಹಿಳೆಯರು ಮತ್ತು ಮಕ್ಕಳು ಪರಸ್ಪರ ರಂಗು ರಂಗಿನ ಬಣ್ಣವನ್ನು ಎರಚಿಕೊಂಡು ಸಂಭ್ರಮಿಸಿದರು.

ಪಟ್ಟಣದ ಅನೇಕ ಬಡಾವಣೆಗಳಲ್ಲಿ ಬೆಳಗಿನಿಂದ ಎಳೆಯ ಮಕ್ಕಳು ಬಣ್ಣ ಸಿಡಿಸಿದರೆ, ಈ ಬಾರಿ ಪ್ರಮುಖ ರಸ್ತೆಗಳಲ್ಲಿ ಸುತ್ತಾಡಿ ಬಣ್ಣದಾಟವನ್ನು ಆಡಿದರು.

ಪಟ್ಟಣದ ಹನುಮಾನ ಬಡಾವಣೆ, ಹತ್ತ್ಯಾನಗಲ್ಲಿ, ಬಾಳನಕೇರಿ, ಸುಲ್ತಾನಪೂರ ಬಡಾವಣೆ, ಶರಣನಗರ, ಭೀಮನಗರ, ಧನಗರ ಗಲಿ, ರೇವಣಸಿದ್ಧೇಶ್ವರ ಬಡಾವಣೆ, ನಾಯಕ ನಗರ ಹೀಗೆ ಇನ್ನಿತರ ಬಡಾವಣೆಯಲ್ಲಿ ಮಕ್ಕಳು, ಯುವಕರು, ಯುವತಿಯರು ಸೇರಿದಂತೆ ಬಣ್ಣದಾಟದಲ್ಲಿ ತೊಡಗಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.

ಸಂಜೆ ಹೊತ್ತಿನಲ್ಲಿ ಕೆಲವೆಡೆ ಬಣ್ಣದ ಗಡಿಗೆ ಒಡೆಯಲಾಯಿತು. ಗ್ರಾಮೀಣ ಭಾಗದಲ್ಲಿ ಶಾಂತಿಯುತವಾಗಿ ಬಣ್ಣದೋಕುಳಿ ನಡೆದ ಬಗ್ಗೆ ವರದಿಯಾಗಿದೆ. ಅನೇಕ ಪ್ರಮುಖ ರಸ್ತೆಗಳಲ್ಲಿ ಹಾಗೂ ಬಡಾವಣೆಗಳಲ್ಲಿ ಮುಖ್ಯ ಮಾರ್ಗಗಳಲ್ಲಿ ದ್ವಿಚಕ್ರವಾಹನಗಳು ಹಾಗೂ ವಾಹನಗಳಲ್ಲಿ ಹೋಗಿ, ಬರುವವರ ಮೇಲೆ ಮಕ್ಕಳು ಪಿಚಕಾರಿಯ ಮೂಲಕ ಬಣ್ಣವನ್ನು ಎರಚಿದರು. ಹಲವಾರು ಕಡೆಗಳಲ್ಲಿ ಪರಸ್ಪರರು ಬಣ್ಣ ಎರಚಿ, ಹೊಯ್ದುಕೊಂಡು ಸಂಭ್ರಮಿಸಿದರು.