ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಮದ್ಯವರ್ಜನ ಶಿಬಿರ ಪವಿತ್ರ ಕಾರ್ಯಕ್ರಮ. ಇದೊಂದು ಸಮುದಾಯದ ಸಹಭಾಗಿತ್ವದ ಕಾರ್ಯಕ್ರಮ. ಮದ್ಯಪಾನ ಸಮಾಜವನ್ನು ಬಾಧಿಸುವ ಮತ್ತು ಜಾಗ್ರತೆ ತಪ್ಪಿದರೆ ಯಾರನ್ನೂ ಬಿಡದ ಕಾಯಿಲೆ, ಮದ್ಯಪಾನಕ್ಕೆ ಜಾತಿ, ಧರ್ಮ, ಪಕ್ಷ, ಭೇದ ಇರುವುದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದ್ದಾರೆ.ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮಡಿಕೇರಿ ತಾಲೂಕು ಬೆಟ್ಟಗೇರಿ ವಲಯ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಿಕೇರಿ ತಾಲೂಕು ಘಟಕ ನೇತೃತ್ವದಲ್ಲಿ ಕಾರುಗುಂದ ಗೌಡ ಸಮಾಜದಲ್ಲಿ ಎಂಟು ದಿನಗಳ ಕಾಲ ನಡೆದ 1855ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಮತ್ತು ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ರಾಣಿ ಮಾಚಯ್ಯ ಕುಟುಂಬ ದಿನ ಉದ್ಘಾಟಿಸಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಕುಟುಂಬ ದಿನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.1855ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬೆಳ್ಯನ ಚಂದ್ರಪ್ರಕಾಶ್ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳನ್ನು, ಸಂಘ ಸಂಸ್ಥೆಗಳನ್ನು ಮತ್ತು ನಿಸ್ವಾರ್ಥ ಸೇವೆ ಸಲ್ಲಿಸಿದವರನ್ನು ಅಭಿನಂದಿಸಿದರು. ನೂತನ ನವಜೀವನ ಸಮಿತಿ ಸದಸ್ಯರ ವೈಯಕ್ತಿಕ ಆರ್ಥಿಕ ಬೆಳವಣಿಗೆ ಉದ್ದೇಶದಿಂದ ಭಕ್ತಿಯ ಕಾಣಿಕೆ ಹುಂಡಿ ವಿತರಿಸಿದರು.
ಕಾಫಿ ಮಂಡಳಿ ನಿರ್ದೇಶಕ, ಬೆಟ್ಟಗೇರಿ ವಿಎಸ್‌ಎಸ್‌ಎನ್ ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ಮಾತನಾಡಿ, ಎಂಟು ದಿನಗಳ ಕಾಲ ಚಿಕಿತ್ಸೆ ಪಡೆದ ಶಿಬಿರಾರ್ಥಿಗಳಿಂದ ಸದೃಢ ಸಮಾಜ ನಿರ್ಮಾಣವಾಗಲಿ ಎಂದರು.ಜಿಲ್ಲಾ ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರುಣ್ ಬಾನಂಗಡ, ಹೊಸೂರು ಜೆ.ಸತೀಶ್ ಕುಮಾರ್ ಅತಿಥಿಗಳಾಗಿ ಮಾತನಾಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ನಂದಕುಮಾರ್ ಪಟ್ಟಡ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆರೋಗ್ಯ ಸಹಾಯಕಿ ನೇತ್ರಾವತಿ ಇವರು ಎಂಟು ದಿನದ ಮದ್ಯವರ್ಜನ ಶಿಬಿರ ನಿರ್ವಹಿಸಿದರು.1855ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಟಿ.ಎಂ ಅಯ್ಯಪ್ಪ, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಧನಂಜಯ್ ಅಗೋಳಿಕಜೆ, ಶಿಬಿರ ವ್ಯವಸ್ಥಾಪನಾ ಸಮಿತಿ, ಕೋಶಾಧಿಕಾರಿ ಮಿಲನ ಮುತ್ತಣ್ಣ, ಕಾರುಗುಂದ ಕಾಫಿ ಬೆಳೆಗಾರ ಕೊಪ್ಪಡ ಪಳಂಗಪ್ಪ, ಚೇರಂಬಾಣೆ ಗೌಡ ಸಮಾಜದ ನಿರ್ದೇಶಕರಾದ ಕೊಡಗನ ತೀರ್ಥಪ್ರಸಾದ್, ನೈಯ್ಯಣಿರ ಹೇಮಲತ, ಎಡಿಕೇರಿ ಪ್ರವೀಣ, ಮುಕ್ಕಾಟಿ ನಾಣಯ್ಯ , ಕಾರುಗುಂದ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ, ನಾಪಂಡ ರಾಲಿ ಮಾದಯ್ಯ ,ಕುಂದಚೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೊಡನೊಳನ ದಿನೇಶ್, ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಪಟ್ಟಮಾಡ ಡಿ. ಪೊನ್ನಪ್ಪ, ಬೆಟ್ಟಗೇರಿ, ಗ್ರಾಮ ಪಂಚಾಯಿತಿ ಸದಸ್ಯ ಬಾಡನ ಲಿಖಿತ, ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು ಅಧ್ಯಕ್ಷ ಪೊಡನೊಳಂಡ ದಿನೇಶ್, ಶಿಬಿರ ವ್ಯವಸ್ಥಾಪನಾ ಸಮಿತಿ ಉಪಾಧ್ಯಕ್ಷ ಸುಕುಮಾರ್, ಸಮಿತಿ ಉಪಾಧ್ಯಕ್ಷ ವಸಂತ, ಕಾಳೇರಮ್ಮನ ಪೂವಯ್ಯ , ಕಾಳೇರಮ್ಮನ ಅಯ್ಯಣ್ಣ, ಪಟ್ಟಡ ಶರತ್ ಕುಮಾರ್, ಉಮಾದೇವಿ , ಹೊಸೂರು ಕೇಶವ, ಪಟ್ಟಡ ಸುಗುಣ ಕುಮಾರ್, ಬೋಪಯ್ಯ ಪುರುಷೋತ್ತಮ್ ಎನ್., ನಿತೇಶ್ , ಮೀನಾಕ್ಷಿ ಮತ್ತಿತರರಿದ್ದರು.
ವರುಣಿಕ ಪ್ರಾರ್ಥಿಸಿದರು. ಧನಂಜಯ್ ಅಗೋಳಿಕಜೆ ಸ್ವಾಗತಿಸಿದರು. ಆಕಾಶವಾಣಿ ನಿರೂಪಕಿ ಹಾಗೂ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕಮಡಿಕೇರಿ ತಾಲೂಕು ಕ್ಯಾಪ್ಟನ್ ಬಾಲೆಯಡ ದಿವ್ಯ ಮಂದಪ್ಪ ನಿರೂಪಿಸಿದರು. ಬೆಟ್ಟಗೇರಿ ವಲಯ ಮೇಲ್ವಿಚಾರಕ ವಿದ್ಯಾ ಬಿ.ಎಚ್. ವಂದಿಸಿದರು.
ಕಾರ್ಯಕ್ರಮ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಮಾರ್ಗದರ್ಶನದೊಂದಿಗೆ ಗೌಡ ಸಮಾಜ ಚೇರಂಬಾಣೆ, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಟ್ಟಗೇರಿ ವಲಯ, ಗ್ರಾಮ ಪಂಚಾಯಿತಿ ಬೆಟ್ಟಗೇರಿ, ಬೇಂಗೂರು - ಚೇರಂಬಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಆರಕ್ಷಕ ಇಲಾಖೆ ಭಾಗಮಂಡಲ, ನವಜೀವನ ಸಮಿತಿ ಮಡಿಕೇರಿ ತಾಲೂಕು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಡಿಕೇರಿ ತಾಲೂಕು, ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಊರಿನ ದಾನಿಗಳ ಸಹಕಾರದೊಂದಿಗೆ ನೆರವೇರಿತು.