ಶೈಕ್ಷಣಿಕ ನಗರವನ್ನಾಗಿಸಲು ಸಕಲ ಸೌಲಭ್ಯ: ರಾಜುಗೌಡ

| Published : Mar 10 2024, 01:46 AM IST

ಸಾರಾಂಶ

ಸರ್ಕಾರಿ ಕಾಲೇಜು ಕಟ್ಟಡಕ್ಕೆ ಭೂಮಿ ನೆರವೇರಿಸಿ ಶಾಸಕ ರಾಜುಗೌಡ ಪಾಟೀಲ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಈ ಭಾಗ ಶೈಕ್ಷಣಿಕ ನಗರವಾಗಿ ಬೆಳೆಯಲು ಬೇಕಾದ ಎಲ್ಲ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಪಟ್ಟಣದ ನೂತನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡಕ್ಕೆ ಸುಮಾರು ₹2 ಕೋಟಿ ವೆಚ್ಚದಲ್ಲಿ ಕೋಣೆಗಳು ನಿರ್ಮಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆ-ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಬದ್ಧತೆ ಹೊಂದಲಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ, ಕರ್ನಾಟಕ ಗ್ರಹ ಮಂಡಳಿಯಿಂದ ₹2 ಕೋಟಿ ರೂ ವೆಚ್ಚದಲ್ಲಿ ನೂತನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದಲ್ಲಿ ನೂತನ ಕಾಲೇಜಿನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ. ಇದು ಅಭಿವೃದ್ಧಿಯ ಸಂಕೇತ. ಈ ಭಾಗದಲ್ಲಿ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ನೂತನ ಐಟಿಐ ಕಾಲೇಜಿನ ಕಟ್ಟಡ ನಿರ್ಮಾಣವಾಗುತ್ತಿದೆ. ಅದರ, ಜೊತೆಗೆ ಶಾಲಾ ಕಾಲೇಜುಗಳ ಕಟ್ಟಡದ ಕಾಮಗಾರಿ ಹಾಗೂ ತಾಲೂಕ ಕ್ರೀಡಾಂಗಣ ನಿರ್ಮಾಣ ಮಾಡಲು ಸಂಬಂಧಿಸಿದ ಇಲಾಖೆಯ ಸಚಿವರಿಗೆ ಮನವಿ ಮಾಡಲಾಗಿದ್ದು, ಶೀಘ್ರದಲ್ಲೇ ಕ್ರಮಕೈಗೊಳ್ಳವ ಭರವಸೆ ಇದೆ. ಅಲ್ಲದೇ, ಇನ್ನು,₹2.5ಕೋಟಿ ವೆಚ್ಚದ ಕಟ್ಟಡದ ಮೂಲಭೂತ ಸೌಕರ್ಯ ಒದಗಿಸಲು ಶೀಘ್ರದಲ್ಲೇ ಭೂಮಿ ಪೂಜೆ ನೆರವೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಉತ್ತಮ ರೀತಿಯಲ್ಲಿ ಕಟ್ಟಡ ನಿರ್ಮಾಣವಾಗಿ ಶೀಘ್ರವೇ ಬಳಕೆಗೆ ಲಭ್ಯವಾಗಲಿ ಎಂದರು.

ದೈಹಿಕ ನಿರ್ದೇಶಕ ಡಾ ಅಶೋಕಕುಮಾರ ಜಾಧವ ಮಾತನಾಡಿ, ಹಲವಾರು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲ ಎಂಬ ಕೊರಗನ್ನು ಶಾಸಕರು ಭೂಮಿ ಪೂಜೆ ನೆರವೇರಿಸುವ ನೀಗಿಸಿದ್ದಾರೆ. ಶಾಸಕರಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು. ಕಾಲೇಜಿನ ಪ್ರಾಚಾರ್ಯ ಪ್ರೊ.ಅಶೋಕ ಹೆಗಡೆ ಸ್ವಾಗತಿಸಿ, ವಂದಿಸಿದರು.

ಈ ವೇಳೆ ತಹಸೀಲ್ದಾರ್ ಪ್ರಕಾಶ ಸಿಂದಗಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್‌ ಯಲಗಾರ, ಹರನಾಳ ಗ್ರಾಪಂ ಅಧ್ಯಕ್ಷ ಸಂತೋಷ ಚನಗೊಂಡ, ಪಪಂ ಸದಸ್ಯರಾದ ಕಾಸುಗೌಡ ಬಿರಾದಾರ ಜಲಕತ್ತಿ, ಕಾಶಿನಾಥ ಜಮಾದಾರ, ಸಿಂಧೂರ ಡಾಲೆರ, ಕೆಎಚ್‌ಬಿ ಎಇಇ ಸಾಧಿಕ ಗಾಂಟವಾಡೆ, ಗುತ್ತಿಗೆದಾರ ವೆಂಕಟೇಶ್ ಜಾಧವ, ಮುರಾರ್ಜಿ ಶಾಲೆಯ ಪ್ರಾಚಾರ್ಯ ರೇಷ್ಮಾ ಜಾಧವ, ಮುಖಂಡರಾದ ಭಾಸ್ಕರ ಗುಡಿಮನಿ, ಸಂಗನಗೌಡ ಬಿರಾದಾರ, ಎ.ಡಿ.ಮುಲ್ಲಾ, ಮುನೀರ್ ಅಹ್ಮದ್ ಮಳಖೇಡ, ವೀರೇಶ ಕುದುರಿ, ಗುರುರಾಜ ಆಕಳವಾಡಿ, ರಾಘವೇಂದ್ರ ಗುಡಿಮನಿ, ಕಾಸು ವಡವಡಗಿ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.