ಜ್ಞಾನಪೀಠ ಶಾಲೆಗೆ ಎಲ್ಲ ರೀತಿಯ ಸಹಕಾರ

| Published : Feb 07 2024, 01:49 AM IST / Updated: Feb 07 2024, 04:32 PM IST

ಸಾರಾಂಶ

ತಾಲೂಕಿನ ಶಿರಗುಪ್ಪಿ ಗ್ರಾಮದ ಜ್ಞಾನಪೀಠ ಶಿಕ್ಷಣ ಸಮಿತಿಯ ಆಚಾರ್ಯ ಶ್ರೀ ವಿದ್ಯಾಸಾಗರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಎಸ್ವ್ಹಿಇಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 44ನೇ ವಾರ್ಷಿಕ ಸ್ನೇಹ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಗವಾಡ

ತಾಲೂಕಿನ ಶಿರಗುಪ್ಪಿ ಗ್ರಾಮದ ಜ್ಞಾನಪೀಠ ಶಿಕ್ಷಣ ಸಮಿತಿಯ ಆಚಾರ್ಯ ಶ್ರೀ ವಿದ್ಯಾಸಾಗರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಎಸ್‌ವ್ಹಿಇಎಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ 44ನೇ ವಾರ್ಷಿಕ ಸ್ನೇಹ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಭಿನವ ದಾನ ಚಿಂತಾಮಣಿ ಪ್ರಶಸ್ತಿ ಪುರಸ್ಕೃತರಾದ ಮಹಾವೀರ ಪಡನಾಡ ವಹಿಸಿ ಮಾತನಾಡಿ, ಜ್ಞಾನಪೀಠ ಶಿಕ್ಷಣ ಸಮಿತಿಯ ಶಾಲೆಗಳಿಗೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಜೊಲ್ಲೆ ಸಿಬಿಎಸ್‌ಇ ಶಾಲೆಯ ಪ್ರಾಂಶುಪಾಲ್‌ ಉರ್ಮಿಲಾ ಚೌಗುಲೆ ಮಾತನಾಡಿದರು. ಸಂಸ್ಥೆಯ ಹಿತೈಷಿಗಳಾದ ಅಭಯಕುಮಾರ ಅಕಿವಾಟೆ ಮಾತನಾಡಿದರು. ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಉದಯರಾಜ ಶ್ರೀದತ್ತ ಶೆಟ್ಟಿ, ಕಾರ್ಯದರ್ಶಿಗಳಾದ ವಿನಯಂಧರ ಶ್ರೀದತ್ತ ಶೆಟ್ಟಿ, ಅಜೀತ ಚಿಂತಾಮಣಿ ಶೆಟ್ಟಿ, ದರೆಪ್ಪಾ ಕುಸನಾಳೆ ಹಾಗೂ ಶ್ರೇಯಾಂಶ ನಾಂದಣಿ ಸೇರಿದಂತೆ ಶಾಲೆಯ ಶಿಕ್ಷಕ ವೃಂದದವರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪಾಲಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಸುಧಾರಾಣಿ ಮಾಂಜರಿ ಸ್ವಾಗತಿಸಿದರು. ಪ್ರೌಡ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರವಣಕುಮಾರ ವಂಟಗೂಡೆ ವಂದಿಸಿದರು.