ನಮ್ಮೆಲ್ಲರ ಗುರಿ ಮತ್ತೆ ಮೋದಿ ಕೈಗೆ ಆಡಳಿತ ನೀಡುವುದು: ಮುನಿಸ್ವಾಮಿ

| Published : Apr 14 2024, 01:51 AM IST

ನಮ್ಮೆಲ್ಲರ ಗುರಿ ಮತ್ತೆ ಮೋದಿ ಕೈಗೆ ಆಡಳಿತ ನೀಡುವುದು: ಮುನಿಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆ ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಬೇಕೆಂದು ಹೈಕಮಾಂಡ್ ಆದೇಶದಂತೆ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ನಾನು ಟಿಕೆಟ್ ಅಕಾಂಕ್ಷಿಯಾಗಿದ್ದರೂ ತ್ಯಾಗ ಮಾಡಬೇಕಾಗಿ ಬಂದಿದ್ದು ಅನಿವಾರ್ಯವಾಯಿತು. ಏಕೆಂದರೆ ನಮ್ಮ ಗುರಿ ನರೇಂದ್ರ ಮೋದಿ ಕೈಗೆ ಆಡಳಿತ ನೀಡಬೇಕಾಗಿರುವುದು. ನಾವು ಚುನಾವಣೆಯಲ್ಲಿ ಸೈನಿಕರಂತೆ ಕೆಲಸ ಮಾಡಿದಾಗ ಮಾತ್ರ ಗೆಲುವು ಸಾಧ್ಯವಾಗಲಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರರಾಜ್ಯದಲ್ಲಿ ಬಿಜೆಪಿ ಪಕ್ಷವು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಮೇಲೆ ಕೋಲಾರ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಡಬೇಕೆಂದು ಹೈಕಮಾಂಡ್ ಆದೇಶದಂತೆ ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ನಾನು ಟಿಕೆಟ್ ಅಕಾಂಕ್ಷಿಯಾಗಿದ್ದರೂ ತ್ಯಾಗ ಮಾಡಬೇಕಾಗಿ ಬಂದಿದ್ದು ಅನಿವಾರ್ಯವಾಯಿತು. ಏಕೆಂದರೆ ನಮ್ಮ ಗುರಿ ನರೇಂದ್ರ ಮೋದಿ ಕೈಗೆ ಆಡಳಿತ ನೀಡಬೇಕಾಗಿರುವುದು. ನಾವು ಚುನಾವಣೆಯಲ್ಲಿ ಸೈನಿಕರಂತೆ ಕೆಲಸ ಮಾಡಿದಾಗ ಮಾತ್ರ ಗೆಲುವು ಸಾಧ್ಯವಾಗಲಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು. ನಗರ ಹೊರವಲಯದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ (ಒಬಿಸಿ) ಸಾಮಾಜಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿ, ಒಬಿಸಿಯಲ್ಲಿ ೧೯೯ ಒಳ ಪಂಗಡಗಳಿದ್ದು, ಬಿಜೆಪಿ ಮೂಲ ಪಕ್ಷಕ್ಕಿಂತ ಒಬಿಸಿ ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ವರ್ಗಗಳಿಗೆ ಕಾಂಗ್ರೆಸ್ ಯಾವ ಅನುವು ಮಾಡದ ಹಿನ್ನಲೆಯಲ್ಲಿ ಕಳೆದ ಬಾರಿ ಕಾಂಗ್ರೆಸ್‌ ಪಕ್ಷದ ಬೃಹತ್ ಸಂಖ್ಯೆಯಲ್ಲಿದೆ. ಭಾರತದ ಪ್ರಧಾನಿ ಒಬಿಸಿ ವರ್ಗಕ್ಕೆ ಮೀಸಲಾತಿ ನೀಡಿದರೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವು ಮೀಸಲಾತಿ ರದ್ದುಗೊಳಿಸಿದೆ, ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಈ ಹಿಂದೆ ಒಬಿಸಿ ವಿಭಾಗದಲ್ಲಿ ೪೦ ಸ್ಥಾನ ಪಡೆದಿತ್ತು ಆದರೆ ಈ ಚುನಾವಣೆಯಲ್ಲಿ ೨೦ಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದರು.ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ನಾವೆಲ್ಲಾ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ. ಕಳೆದ ೧೦ ತಿಂಗಳಿಂದ ಕಾಂಗ್ರೆಸ್‌ ಸರ್ಕಾರದ ಆಡಳಿತವು ಸಂಪೂರ್ಣವಾಗಿ ವಿಫಲವಾಗಿದೆ. ಮೀಸಲಾತಿ ಹಣವನ್ನು ಸರ್ಕಾರವು ದುರ್ಬಳಿಸಿಕೊಂಡಿದೆ. ಇದರ ವಿರುದ್ಧ ನಾವು ಆಗಲೆ ಹೋರಾಟವನ್ನು ತೀವ್ರಗೊಳಿಸಬೇಕಾಗಿತ್ತು, ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ರಾಜ್ಯ ಸರ್ಕಾರದ ವಿಫಲತೆಗಳ ಕುರಿತು ಪ್ರತಿ ತಾಲೂಕು ಮಟ್ಟದಲ್ಲಿ ಪ್ರತಿ ಪಂಚಾಯಿತಿಯಲ್ಲಿ ಸಮನ್ವಯ ಸಭೆಗಳ ಮೂಲಕ ಮತದಾರರಿಗೆ ಅರಿವು ಮೋಡಿಸುವ ಕಾರ್ಯವನ್ನು ಮಾಡಬೇಕಾಗಿದೆ ಎಂದರು.

ಈ ಹಿಂದೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಆಡಳಿತದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ನೆನಪಿಸುವಂತಾಗಬೇಕು. ಅದೇ ರೀತಿ ಕಾಂಗ್ರೆಸ್‌ ಪಕ್ಷದವರು ವಿಧಾನಸೌಧದಲ್ಲಿ ನಮ್ಮ ಶತ್ರು ರಾಷ್ಟ್ರವಾದ ಪಾಕಿಸ್ತಾನ ಜಿಂದ್ ಬಾದ್ ಕೂಗಿರುವವಂತ ದೇಶ ದ್ರೋಹಿಗಳಿಗೆ ಶ್ರೀರಕ್ಷೆಯಾಗಿರುವುದು ಖಂಡನೀಯ ಎಂದರು.ಮಲ್ಲೇಶ್‌ ಬಾಬು ಗೆಲ್ಲಿಸಿ:

ಕಾಂಗ್ರೇಸ್ ಪಕ್ಷದ ಸಭೆಗಳಿಗೆ ದುಡ್ಡು ಕೊಟ್ಟು ಬಾಡಿಗೆ ಜನರನ್ನು ಕರೆಸುತ್ತಾರೆ. ನಮ್ಮ ಪಕ್ಷದ ಸಭೆಗಳಿಗೆ ಜನರು ಸ್ವತಃ ಇಚ್ಚೆಪಟ್ಟು ಬರುತ್ತಾರೆ. ಮೈತ್ರಿ ಅಭ್ಯರ್ಥಿಯಾಗಿ ಎಂ.ಮಲ್ಲೇಶ್ ಬಾಬುರನ್ನು ಚುನಾವಣ ಕಣಕ್ಕೆ ಇಳಿಸಲಾಗಿದೆ. ಮತದಾರರು ಮಲ್ಲೇಶ್ ಬಾಬುರನ್ನು ಬಹುಮತಗಳಿಂದ ಆಯ್ಕೆ ಮಾಡಿ ದೆಹಲಿಗೆ ಕಳುಹಿಸುವ ಮೂಲಕ ಮೋದಿ ಕೈ ಬಲಪಡಿಸಬೇಕೆಂದು ಕರೆ ನೀಡಿದರು. ಬಿಜೆಪಿ ವಿಭಾಗದ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಬಾಲಾಜಿ, ರಾಜ್ಯ ಮುಖಂಡರಾದ ಹನುಮಂತಪ್ಪ, ಕೃಷ್ಣಮೂರ್ತಿ, ರಾಜೇಂದ್ರ, ಕೋಳಿ ನಾಗರಾಜ್, ಪ್ರವೀಣ್ ಗೌಡ, ಕೆಂಬೋಡಿ ನಾರಾಯಣಸ್ವಾಮಿ, ಅರುಣಮ್ಮ, ತಿಮ್ಮರಾಯಪ್ಪ, ಅಪ್ಪಿನಾರಾಯಣಸ್ವಾಮಿ, ಟಿಲ್ಲಿ ಮಂಜುನಾಥ್, ನಾಮಾಲು ಮಂಜುನಾಥ್, ತಿಮ್ಮರಾಯಪ್ಪ, ರಾಜೇಶ್ ಸಿಂಗ್ ಇದ್ದರು.