ವಿಜಯನಗರ ಜಿಲ್ಲೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ದಿವಾಕರ್‌

| Published : May 06 2024, 12:38 AM IST

ವಿಜಯನಗರ ಜಿಲ್ಲೆಯಲ್ಲಿ ಮತದಾನಕ್ಕೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ದಿವಾಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ 7ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ

ಹೊಸಪೇಟೆ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೇ 7ರಂದು ನಡೆಯಲಿರುವ ಮತದಾನಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದ್ದಾರೆ.ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಬಳ್ಳಾರಿ ಲೋಕಸಭಾ ಕ್ಷೇತ್ರ ಮತ್ತು ಒಂದು ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಲಿದ್ದು, ಜಿಲ್ಲೆಯಲ್ಲಿ 869 ಗ್ರಾಮೀಣ ಮತ್ತು 365 ನಗರ ಭಾಗದ ಮತಗಟ್ಟೆಗಳು ಸೇರಿ ಒಟ್ಟು 1234 ಮತಗಟ್ಟೆಗಳನ್ನು ಸಕಲ ಮೂಲಭೂತ ಸೌಲಭ್ಯದೊಂದಿಗೆ ಸಿದ್ಧಗೊಳಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 5,62,166 ಪುರುಷರು, 5,66, 527 ಮಹಿಳೆಯರು, 142 ಇತರೆ ಸೇರಿ ಒಟ್ಟು 11,28,835 ಮತದಾರರು ಹಕ್ಕನ್ನು ಚಲಾಯಿಸಲು ಅರ್ಹರಿದ್ದಾರೆ. ಒಟ್ಟು 33,610 ಯುವ ಮತದಾರರು ಮತದಾರು ಮತ್ತು 16,060 ವಿಕಲಚೇತನ ಮತದಾರರು ನೋಂದಣಿ ಮಾಡಿಸಿದ್ದಾರೆ. ಮೇ 7ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

ಸಿಬ್ಬಂದಿ ನಿಯೋಜನೆ:

ಜಿಲ್ಲೆಯಲ್ಲಿ ಮತದಾನಕ್ಕೆ ಅಗತ್ಯ ಕ್ರಮ ವಹಿಸಿದ್ದು, ಒಟ್ಟು 5,872 ಸಿಬ್ಬಂದಿ, ಅಧಿಕಾರಿಗಳನ್ನು ಚುನಾವಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ. ಬಳ್ಳಾರಿ ಲೊಕಸಭಾ ಕ್ಷೇತ್ರಕ್ಕೆ ಬರುವ ಹೂವಿನ ಹಡಗಲಿ 1044, ಹಗರಿಬೊಮ್ಮನಹಳ್ಳಿ 1200, ವಿಜಯನಗರ 1216, ಕೂಡ್ಲಿಗಿ 1200, ದಾವಣಗೆರೆ ಲೋಕಸಭಾ ಕ್ಷೇತ್ರದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ 1212 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ವಿವಿಧ ತಂಡಗಳನ್ನು ರಚಿಸಿದ್ದು, ಜಿಲ್ಲೆಯಲ್ಲಿ 1234 ಬಿಎಲ್‌ಒ, 111 ಸೆಕ್ಟರ್ ಅಧಿಕಾರಿ, 20 ಎಫ್‌ಎಸ್‌ಟಿ ತಂಡ, 18 ಎಸ್‌ಎಸ್‌ಟಿ ತಂಡ, 23 ವಿಎಸ್‌ಟಿ ತಂಡ, 5 ವಿವಿಟಿ ತಂಡ ಹಾಗೂ 10 ಎಂಸಿಸಿ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಚುನಾವಣಾ ಸಿಬ್ಬಂದಿಗೆ ಮತಗಟ್ಟೆಗಳಿಗೆ ತೆರಳಲು 252 ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಹಡಗಲಿ 39, ಹಗರಿಬೊಮ್ಮನಹಳ್ಳಿ 52, ವಿಜಯನಗರ 57, ಕೂಡ್ಲಿಗಿ 62 ಸೇರಿ ಒಟ್ಟು 178 ಹಾಗೂ ಹರಪನಹಳ್ಳಿ 52 ಸೇರಿ ಒಟ್ಟು 252 ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್:

ಆಯಾ ವಿಧಾನಸಭಾ ಮತಕ್ಷೇತ್ರಗಳ ಕೇಂದ್ರ ಸ್ಥಾನಗಳಲ್ಲಿ ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಮಾಡಲಾಗುತ್ತಿದ್ದು, ಹಡಗಲಿಯಲ್ಲಿ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಚ್.ಬಿ.ಹಳ್ಳಿ ಜಿವಿಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ ಎಲ್‌ಎಫ್‌ಎಸ್ ಸ್ಕೂಲ್, ಕೂಡ್ಲಿಗಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಹರಪನಹಳ್ಳಿ ಶ್ರೀತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ.

ಹಡಗಲಿ ಕ್ಷೇತ್ರದಲ್ಲಿ 38, ಹಗರಿಬೊಮ್ಮನಹಳ್ಳಿ 47, ವಿಜಯನಗರ 40 ಹಾಗೂ ಕೂಡ್ಲಿಗಿ 49 ಸೇರಿ 178 ಹಾಗೂ ಹರಪನಹಳ್ಳಿ ಕ್ಷೇತ್ರದಲ್ಲಿ 70 ಸೇರಿ ಒಟ್ಟು 244 ಮತಗಟ್ಟೆ ಕೇಂದ್ರಗಳಲ್ಲಿ ವೆಬ್‌ಕ್ಯಾಸ್ಟಿಂಗ್ ಮತ್ತು 267 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಹಿರಿಯ ಮತದಾರರ ಮತದಾನ ಪ್ರಕ್ರಿಯೆ ಅಚ್ಚುಕಟ್ಟಾಗಿ ನಡೆದಿದ್ದು, ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 721ರ ಪೈಕಿ 686 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ವಿಕಲಚೇತನ ಮತದಾರರು 487ರಲ್ಲಿ 479 ಮತದಾರರು ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯನಗರ ಜಿಲ್ಲೆಯ ಮತಗಟ್ಟೆ-ಮತದಾರರ ಮಾಹಿತಿ

ವಿಧಾನಸಭಾ ಕ್ಷೇತ್ರ -ಮತಗಟ್ಟೆ -ಮತದಾರರು

ಹೂವಿನಹಡಗಲಿ -218 -196858

ಹಗರಿಬೊಮ್ಮನಹಳ್ಳಿ -254 -237811

ವಿಜಯನಗರ -259 -260197

ಕೂಡ್ಲಿಗಿ -250 -209996

ಹರಪನಹಳ್ಳಿ -253 -223973

ಒಟ್ಟು -1234 - 11,28,835