ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಿ

| Published : Dec 05 2024, 12:31 AM IST

ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಎಲ್ಲರೂ ಶ್ರಮಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ಜಾಗತಿಕ ತಾಪಮಾನ ನಿಯಂತ್ರಣ ನಮ್ಮೆಲ್ಲರ ಕರ್ತವ್ಯ, ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬಾರದು. ನೀರೆತ್ತಲು ಹಾಗೂ ಸಾಗಿಸಲು ವಿದ್ಯುತ್ ಬೇಕು. ಆದುದರಿಂದ ನೀರನ್ನು ಮಿತವಾಗಿ ಬಳಸಿದರೆ ವಿದ್ಯುತ್ತಿನ ಉಳಿತಾಯ ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್. ಬಿ.ಬೆಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ಜಾಗತಿಕ ತಾಪಮಾನ ನಿಯಂತ್ರಣ ನಮ್ಮೆಲ್ಲರ ಕರ್ತವ್ಯ, ನೀರನ್ನು ಅನಾವಶ್ಯಕವಾಗಿ ಪೋಲು ಮಾಡಬಾರದು. ನೀರೆತ್ತಲು ಹಾಗೂ ಸಾಗಿಸಲು ವಿದ್ಯುತ್ ಬೇಕು. ಆದುದರಿಂದ ನೀರನ್ನು ಮಿತವಾಗಿ ಬಳಸಿದರೆ ವಿದ್ಯುತ್ತಿನ ಉಳಿತಾಯ ಸಾಧ್ಯ ಎಂದು ಕೃಷಿ ವಿಜ್ಞಾನ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ.ಆರ್. ಬಿ.ಬೆಳ್ಳಿ ಹೇಳಿದರು.ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ, ಬೆಂಗಳೂರು ಸಹಯೋಗದಲ್ಲಿ ವಿದ್ಯುತ್‌ ದಕ್ಷತಾ ಪಂಪ್‌ಸೆಟ್‌ಗಳು ಮತ್ತು ನೀರು ಸಂರಕ್ಷಣೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಗಲು ಹೊತ್ತಿನಲ್ಲಿ ವಿದ್ಯುತ್ ದೀಪಗಳ ಬಳಕೆ ನಿಯಂತ್ರಿಸಿ, ನೈಸರ್ಗಿಕ ಬೆಳಕನ್ನು ಸಮರ್ಪಕವಾಗಿ ಬಳಸಿ. ಇಂಧನ ಉಳಿತಾಯದಿಂದ ನಮ್ಮ ಕರ್ತವ್ಯ ಪಾಲನೆ ಮಾಡಿದಂತೆ. ಇಂಧನ ಉಳಿಸಿ, ಪರಿಸರ ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಶಂಕರಮೂರ್ತಿ ಮಾತನಾಡಿ, ಹೆಚ್ಚು ವಿದ್ಯುತ್ ಬಳಸುವ ಬುರುಡೆ ಬಲ್ಬು, ಫ್ಲೋರೋಸೆಂಟ್ ಟ್ಯೂಬ್‌ಲೈಟ್‌ಗಳ ಬದಲು ಹೆಚ್ಚು ಇಂಧನ ದಕ್ಷತೆಯ ಎಲ್.ಇ.ಡಿ ದೀಪಗಳನ್ನು ಬಳಸಿ. ಎಲ್.ಇ.ಡಿ ಬಲ್ಬಗಳನ್ನು ಉಪಯೋಗಿಸುವುದರಿಂದ ವಿದ್ಯುತ್ ಉಳಿತಾಯ ಸಾಧ್ಯವಾಗುತ್ತದೆ. ಕೃಷಿ ಪಂಪ್‌ಸೆಟ್‌ಗಳಲ್ಲಿ ವಿದ್ಯುತ್ ಕ್ಷಮತೆಯ ಬಿ.ಇ.ಇ ಸ್ಟಾರ್ ಲೇಬಲ್‌ಯುಳ್ಳ ಪಂಪ್‌ಸೆಟ್‌ಗಳನ್ನು ಬಳಸಬೇಕೆಂದರು. ಮಣ್ಣು ಮತ್ತು ನೀರು ಸಂರಕ್ಷಣೆ ವಿಧಾನ ಮತ್ತು ಅದರ ಮಹತ್ವವನ್ನು ವಿವರಿಸಿದರು.ಅಲ್ಲದೇ, ವಿದ್ಯುತ್ ತಯಾರಿಸಲು ಬಳಸುವ ಹಾಗೂ ಮುಗಿದುಹೋಗಬಹುದಾದ ಇಂಧನಗಳಾದ ಕಲ್ಲಿದ್ದಲು, ನೈಸರ್ಗಿಕ ಅನಿಲ, ಖನಿಜ ತೈಲಗಳನ್ನು ಉರಿಸಿದಾಗ ಹೆಚ್ಚು ಶಾಖ ಬಿಡುಗಡೆಯಾಗುವುದರ ಜೊತೆಗೆ ಕಾರ್ಬನ್ ಡೈ ಆಕ್ಸೈಡ್ ಕೂಡ ಬಿಡುಗಡೆಗೊಂಡು, ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಇದರಿಂದ ಪರಿಸರ ನಾಶವಾಗುತ್ತದೆ. ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಸಿದರು.ಹೆಸ್ಕಾ ಎಇಇ ಎಸ್.ಆರ್.ಮೇಡೆಗಾರ ಮಾತನಾಡಿ, ಪಿ.ಎಂ.ಕುಸುಮ ಯೋಜನೆ, ಸೋಲಾರ್‌ ವಿದ್ಯುತ್‌ ಉತ್ಪಾದನೆ ಮತ್ತು ವಿದ್ಯುತ್‌ ದಕ್ಷತಾ ಪಂಪ್‌ ಸೆಟ್‌ಗಳು ಮತ್ತು ಕೃಷಿ ಯಂತೋಪಕರಣಗಳ ಬಳಕೆಯ ದಕ್ಷತೆ ಕುರಿತು ಮಾಹಿತಿ ನೀಡಿದರು.

ನವಿಕರಿಸಬಹುದಾದ ಇಂಧನದ ಮೂಲಗಳಾದ ಸೌರ ಶಕ್ತಿ, ಪವನ ಶಕ್ತಿ, ಜಲ ಶಕ್ತಿ ಗಳಿಂದ ತಯಾರಾಗುವ ವಿದ್ಯುತ್‌ನ್ನು ಬಳಸುವುದರಿಂದ ಪರಿಸರ ಮಾಲಿನ್ಯ ತಪ್ಪಿಸಬಹುದು. ಪ್ರಧಾನಮಂತ್ರಿ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆ ಅಡಿಯಲ್ಲಿ ವಿದ್ಯುತ್ ಉತ್ಪಾದಿಸಿ, ಹಣ ಉಳಿಸಿ, ಆದಾಯ ಗಳಿಸಬಹುದಾಗಿದೆ. ಅಲ್ಲದೇ, ವಸತಿ ಗ್ರಾಹಕರಿಗೆ 1 ಕಿ. ವ್ಯಾ ಸೋಲಾರ್‌ ಘಟಕಕ್ಕೆ ₹ 30 ಸಾವಿರ, 2 ಕಿ. ವ್ಯಾ ಸೋಲಾರ ಘಟಕಕ್ಕೆ ₹ 60 ಸಾವಿರ ಮತ್ತು 3 ಕಿ. ವ್ಯಾ ಸೋಲಾರ ಘಟಕಕ್ಕೆ ₹ 78 ಸಾವಿರ ಸಬ್ಸಿಡಿ ಪಡೆಯಬಹುದು ಎಂದು ಯೋಜನೆಗಳ ಬಗ್ಗೆ ತಿಳಿಸಿದರು.