ದೆಹಲಿಯಲ್ಲಿ ಬಾಂಬ್ ದುಷ್ಕೃತ್ಯ ನಡೆಸಿದವರು ಪಾಕಿಸ್ತಾನದವರಲ್ಲ, ಬದಲಿಗೆ ಭಾರತದ ಭಯೋತ್ಪಾದಕರು. ಇವರಲ್ಲಿ ಸಾಕಷ್ಟು ಜನ ವೈದ್ಯರಿದ್ದು, ವೈದ್ಯಕೀಯ ಓದುವುದು ಜನರ ಜೀವ ಉಳಿಸಲು ಹೊರತು ಜೀವ ತೆಗೆಯಲು ಅಲ್ಲ. ನಿಮ್ಮನ್ನು ಅಲ್ಲಾ ಕೂಡ ಕ್ಷಮಿಸಲಾರ.
ಧಾರವಾಡ:
ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ನಂತರ ಮುಸ್ಲಿಂ ವೈದ್ಯರು ಎಂದ ಕೂಡಲೇ ಭಯೋತ್ಪಾದಕ ಎನ್ನುವ ರೀತಿ ಬಿಂಬಿತವಾಗುತ್ತಿದೆ. ಭಯೋತ್ಪಾದನೆ ಕೃತ್ಯ ಹಾಗೂ ಅಮಾಯಕರ ರಕ್ತ ಹರಿಸುವವರನ್ನು ಅಲ್ಲಾ ಸೇರಿದಂತೆ ಯಾವ ದೇವರು ಸಹ ಕ್ಷಮಿಸಲಾರ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಬಾಂಬ್ ದುಷ್ಕೃತ್ಯ ನಡೆಸಿದವರು ಪಾಕಿಸ್ತಾನದವರಲ್ಲ, ಬದಲಿಗೆ ಭಾರತದ ಭಯೋತ್ಪಾದಕರು. ಇವರಲ್ಲಿ ಸಾಕಷ್ಟು ಜನ ವೈದ್ಯರಿದ್ದು, ವೈದ್ಯಕೀಯ ಓದುವುದು ಜನರ ಜೀವ ಉಳಿಸಲು ಹೊರತು ಜೀವ ತೆಗೆಯಲು ಅಲ್ಲ. ನಿಮ್ಮನ್ನು ಅಲ್ಲಾ ಕೂಡ ಕ್ಷಮಿಸಲಾರ ಎಂದು ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ಮುಸ್ಲಿಂ ಸಮುದಾಯದಲ್ಲಿರುವ ಭಯೋತ್ಪಾದಕರ ವಿರುದ್ಧ ಮುಸ್ಲಿಂ ಮುಖಂಡರು ಫತ್ವಾ ಹೊರಡಿಸಬೇಕು. ಅವರ ಮನೆಯನ್ನು ಸುಟ್ಟು ಹಾಕಬೇಕು. ಅಂದಾಗಲೇ ಭಾರತೀಯ ಮುಸ್ಲಿಂರಿಗೆ ದೇಶದ ಬಗ್ಗೆ ಬದ್ಧತೆ ಇದೆ ಎನ್ನಬಹುದು. 76 ಎಕರೆ ಜಮೀನು ಹೊಂದಿರುರುವ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯ ಭಯೋತ್ಪಾದಕರ ಕೇಂದ್ರವಾಗಿದೆ. ಶೇ. 40ರಷ್ಟು ವಿದ್ಯಾರ್ಥಿಗಳು ಕಾಶ್ಮೀರಿಗಳು. ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಸ್ಲಿಮರು ಕೂಡ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಭಾರತದಲ್ಲಿ ಆಂತರಿಕ ಸಂಘರ್ಷಕ್ಕೆ ನೀವೇ ಕಾರಣರಾಗುತ್ತೀರಿ ಎಂದು ಮುತಾಲಿಕ ಎಚ್ಚರಿಸಿದರು.