ಸಾರಾಂಶ
ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅಭೂತಪೂರ್ವ ಗೆಲುವು ಸಾಧಿಸಿರುವುದು ಸಂತಸ ನೀಡಿದೆ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಹೇಳಿದರು. ಅರಸೀಕೆರೆಯಲ್ಲಿ ಜೆಡಿಎಸ್, ಬಿಜೆಪಿ ಜತೆಗೆ ಸಿಹಿ ಹಂಚಿ ಮಾತನಾಡಿದರು.
ಬಿಎಪಿ, ಜೆಡಿಎಸ್ ಕಾರ್ಯಕರ್ತರ ಸಂಭ್ರಮ
ಕನ್ನಡಪ್ರಭ ವಾರ್ತೆ ಅರಸೀಕೆರೆದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೆ.ವಿವೇಕಾನಂದ ಅಭೂತಪೂರ್ವ ಗೆಲುವು ಸಾಧಿಸಿರುವುದು ಸಂತಸ ನೀಡಿದೆ ಎಂದು ಜೆಡಿಎಸ್ ಮುಖಂಡ ಎನ್.ಆರ್.ಸಂತೋಷ್ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಜೆಡಿಎಸ್, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರದೊಂದಿಗೆ ಜಮಾಯಿಸಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಮಾತನಾಡಿದರು. ‘ಉಭಯ ಪಕ್ಷಗಳ ಮುಖಂಡರು ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಫಲ ನೀಡಿದೆ. ಎಲ್ಲರ ಸಂಘಟಿತ ಹೋರಾಟದಿಂದ ನಮಗೆ ಭಾರಿ ಅಂತರದಲ್ಲಿ ಗೆಲುವು ಲಭಿಸಿದಂತಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮರಿತಿಬ್ಬೇಗೌಡರು ಮತ್ತೊಂದು ಅವಧಿಗೆ ಅಧಿಕಾರ ಪಡೆಯಲು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ಆದರೆ ಮಂಡ್ಯ, ಮೈಸೂರು ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ಶಿಕ್ಷಕ ಮತದಾರರು ಪಕ್ಷಾಂತರಿಗೆ ತಕ್ಕ ಪಾಠ ಕಲಿಸಿದ್ದು ಶಾಸನಸಭೆ ಬಾಗಿಲು ಬಂದ್ ಬಾಡಿದ್ದಾರೆ. ಉಭಯ ಪಕ್ಷಗಳ ವರಿಷ್ಠರ ಸಲಹೆ ಸೂಚನೆಯಂತೆ ಕಾರ್ಯರ್ತರು, ಮುಖಂಡರು ಒಗ್ಗೂಡಿ ಹೋರಾಟ ನಡೆಸಿದ್ದರಿಂದ ಕೆ.ವಿವೇಕಾನಂದ ಅವರು ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಲು ಸಾಧ್ಯವಾಗಿದೆ’ ಎಂದು ಹೇಳಿದರು.ಲೋಕಸಭೆ ಚುನಾವಣೆಯಲ್ಲಿ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಮತದಾರರು ಮೈತ್ರಿ ಅಭ್ಯರ್ಥಿಗೆ ಜೈ ಎಂದಿರುವುದು ಅಂಕಿ, ಅಂಶಗಳಿಂದಲೇ ಸಾಬೀತಾಗಿದ್ದು ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ತಕ್ಕ ಪಾಠ ಕಲಿಸಿದ್ದಾರೆ. ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್ ಕೋಟಾದಲ್ಲಿ ಕ್ಷೇತ್ರಕ್ಕೆ ಲಭಿಸುವ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪರಿಷತ್ ನೂತನ ಸದಸ್ಯರಾಗಿರುವ ಕೆ.ವಿವೇಕಾನಂದ ಜತೆ ಚರ್ಚಿಸಿ ಜನಪರ ಕಾರ್ಯಗಳಿಗೆ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆ. ಮೈತ್ರಿ ಮುಂದುವರಿಯಲಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಗೆಲುವಿಗೆ ಹೋರಾಟ ನಡೆಸೋಣ ಎಂದು ತಿಳಿಸಿದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಬಂಡಿಗೌಡರ ರಾಜಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನರಸೀಪುರ ರವಿ, ತಾಪಂ ಮಾಜಿ ಸದಸ್ಯ ಭೋಜಾನಾಯ್ಕ್, ನಗರಸಭೆ ಸದಸ್ಯರಾದ ಜಾಕೀರ್, ಈಶ್ವರಪ್ಪ, ಬಿ.ಎನ್.ವಿದ್ಯಾಧರ್, ಪುಟ್ಟಸ್ವಾಮಿ, ರಮೇಶ್ ನಾಯ್ಡು, ಶಿವನ್‌ರಾಜ್, ಮಾಜಿ ಅಧ್ಯಕ್ಷ ಪಂಚಾಕ್ಷರಿ, ರಂಗನಾಥ್, ಗ್ರಾಪಂ ಸದಸ್ಯ ಜಯರಾಮ್, ಕಾಟೀಕೆರೆ ಮೋಹನ್, ಶಾನೆಗೆರೆ ಮಂಜು,ಶೇಖರ್ ಯಾದವ್, ಲೋಕೇಶ್, ಪ್ರವೀಣ್, ಈರಯ್ಯ, ರವಿಕಿರಣ್ ಇದ್ದರು.