ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ: ಸಿವಿಸಿ

| Published : May 03 2024, 01:02 AM IST

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಹಗಲಿರಳು ಶ್ರಮಿಸುತ್ತಾರೆ. ಅಂಥ ನಾಯಕನ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ಕೊಪ್ಪಳ

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ. ಬಸವರಾಜ ಗೆಲ್ಲವುದು ನಿಶ್ಚಿತ ಎಂದು ಜೆಡಿಎಸ್ ಕೋರ್ ಕಮಿಟಿ ರಾಜ್ಯ ಸದಸ್ಯ ಸಿ.ವಿ. ಚಂದ್ರಶೇಖರ ಹೇಳಿಸರು.

ಕೊಪ್ಪಳ ತಾಲೂಕಿನ ಹಂದ್ರಾಳ, ಕವಲೂರ, ಅಳವಂಡಿ, ಬೆಟಗೇರಿ, ಹಾಲವರ್ತಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ಹಗಲಿರಳು ಶ್ರಮಿಸುತ್ತಾರೆ. ಅಂಥ ನಾಯಕನ ಕೈ ಬಲಪಡಿಸಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ಕೊಪ್ಪಳ ಕ್ಷೇತ್ರದಲ್ಲಿ ವಾತಾವರಣ ನಮ್ಮ ಪರವಾಗಿಯೇ ಇದೆ. ಈಗಾಗಲೇ ಡಾಕ್ಟರ್ ಬಸವರಾಜ್ ಗೆದ್ದಿದ್ದಾರೆ ಎಂಬ ಭಾವನೆ ನಮ್ಮಲ್ಲಿದೆ. ಕನಿಷ್ಠ ಪಕ್ಷ ಒಂದು ಲಕ್ಷಕ್ಕಿಂತ ಹೆಚ್ಚಿನ ಮತಗಳ ಲೀಡ್ ಕೊಟ್ಟು ಅವರನ್ನು ಗೆಲ್ಲಿಸಿಕೊಂಡು ಬರಲು ಎಲ್ಲರೂ ಹಗಲಿರುಳು ಶ್ರಮಿಸೋಣ ಎಂದರು.

ಉರಿ ಬಿಸಿಲನ್ನು ಲೆಕ್ಕಿಸದೆ ನಾವೆಲ್ಲ ಮತದಾನದಲ್ಲಿ ಪಾಲ್ಗೊಳ್ಳಬೇಕು. ಅತಿಹೆಚ್ಚಿನ ಮತದಾನ ಆಗುವಂತೆ ನೋಡಿಕೊಳ್ಳಬೇಕು. ನಮ್ಮ ವಿರೋಧಿಗಳು ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬಾರದು ಎಂದು ಹೇಳಿದರು.

ಕೇಂದ್ರ ಸಚಿವ ನಾರಾಯಣಸ್ವಾಮಿ ಮಾತನಾಡಿ, ದೇಶದ ಭದ್ರತೆಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕಾಗಿದೆ. ಭಾರತದ ಗೌರವ ವಿಶ್ವದಲ್ಲಿ ಹೆಚ್ಚಳವಾಗಲು ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣವಾಗಿದ್ದಾರೆ. ಈ ಹಿಂದೆ ಭಾರತ ಎಂದರೇ ವಿಶ್ವದ ನಾಯಕರು ಅಷ್ಟಾಗಿ ಗೌರವ ನೀಡುತ್ತಿರಲಿಲ್ಲ. ಆದರೆ, ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವ ನಾಯಕರು ಸಹ ಗೌರವಿಸುತ್ತಿದ್ದಾರೆ ಎಂದರು.

ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್, ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗಳು ಭಾರತದ ಭವಿಷ್ಯವನ್ನು ಭದ್ರ ಗೊಳಿಸಿವೆ. ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಇಡೀ ಪ್ರಪಂಚವೇ ನಮ್ಮೆಡೆಗೆ ನೋಡುತ್ತಿದೆ. ಇದು ಮುಂದುವರೆಯಲು ಮೋದಿಜಿಯವರು ಪ್ರಧಾನಿ ಆಗಲೇಬೇಕು. ಹೀಗಾಗಿ ನಾವೆಲ್ಲರೂ ಡಾಕ್ಟರ್ ಬಸವರಾಜ್ ಕ್ಯಾವಟರ್ ಅವರನ್ನು ಗೆಲ್ಲಿಸಬೇಕು ಎಂದು ಕರೆಕೊಟ್ಟರು.

ಪಕ್ಷದ ಪ್ರಮುಖರಾದ ಮಹಾಂತೇಶ ಮೈನಳ್ಳಿ, ಗಣೇಶ ಹೊರತ್ನಾಳ ಸೇರಿದಂತೆ ಪಕ್ಷದ ಮುಖಂಡರು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರಿದ್ದರು.