ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಪುರಾಣ ಪ್ರಸಿದ್ಧ ಆಲೂರು ಶ್ರೀಬೀರೇಶ್ವರಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ಫೆ.24ರಿಂದ 26ರವರೆಗೆ ಬೃಹತ್ ಜಾತ್ರಾ ಮಹೋತ್ಸವ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

ಶ್ರೀಕ್ಷೇತ್ರದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀಬೀರೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ, ನೂತನ ರಾಜಗೋಪುರ, ವಿಮಾನಗೋಪುರ, ಕಳಸ ಪ್ರತಿಷ್ಠಾಪನೆ, ಶ್ರೀಚಿಕ್ಕಮ್ಮ ತಾಯಿ, ಶ್ರೀಕಾಳಮ್ಮ ತಾಯಿ, ಶ್ರೀಗಣಪತಿ, ಶ್ರೀನಂದಿ, ನವಗ್ರಹಗಳ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವನ್ನು ಆಯೋಜಿಸಲಾಗಿದೆ.

ಫೆ.24ರ ಮಂಗಳವಾರ ಸಂಜೆ ಮೂಲ ದೇವತಾ ಪ್ರಾರ್ಥನೆ, ಶ್ರೀಮಹಾಗಣಪತಿ ಪೂಜೆ, ಸ್ವಸ್ತ ಶೈವಪುಣ್ಯಾಹ ವಾಚನೆ, ಪಂಚಗವ್ಯಸಾಧನ, ಆಚಾರ್ಯ ಋತ್ವಿಗವರುಣ, ರಾಕ್ಷೋಜ್ಞ ಪೂಜೆ, ರಾಕ್ಷೋಜ್ಞ ಹೋಮ ವಾಸ್ತುಪೂಜೆ, ವಾಸ್ತುಹೋಮ, ಬಲಿಪ್ರಧಾನ ಪರ್ಯಗ್ನಿಕರಣ, ಅಂಕುರಾರ್ಪಣ, ಸಂಜೆ 5 ಗಂಟೆಗೆ ಆಲೂರು ಮತ್ತು ಆಲೂರು ದೊಡ್ಡಿ ಗ್ರಾಮಸ್ಥರಿಂದ ಮೀಸಲು ನೀರು ತರುವ ಕಾರ್ಯಕ್ರಮ.

ಫೆ.25ರ ಬೆಳಗ್ಗೆ ವಚದಪಾರಾಯಣ, ಪುಣ್ಯಾಹಃವಾಚನ, ಯಾಗಶಾಲಾ ಪ್ರವೇಶ, ಬಿಂಬಶುದ್ಧಿ, ನೇತ್ರೋನ್ಮಿಲನ, ಜಲಾಧಿವಾಸ, ಕ್ಷೀರಾಧಿವಾಸ, ಮಂಟಪ ಸಂಸ್ಕಾರ, ಪ್ರಧಾನ ಕಲಶಾದಿಗಳ ಸ್ಥಾಪನೆ, ಅಗ್ನಿಪ್ರತಿಷ್ಠೆ, ಮೂಲಮಂತ್ರಹೋಮ, ಮಹಾಮಂಗಳಾರತಿ. ಸಂಜೆ ಪ್ರಧಾನ ಕಲಶಾರಾಧನೆ, ಹೋಮಗಳು, ಪಿಂಡಿಕಾ ಸ್ಥಾಪನೆ, ವಿಗ್ರಹ ಪ್ರತಿಷ್ಠೆ, ಮಹಾ ಮಂಗಳಾರತಿ ನಡೆಯಲಿವೆ.


ಪ್ರಮುಖವಾಗಿ ಫೆ.26ರ ಗುರುವಾರ ಬೆಳಿಗ್ಗೆ ಪ್ರಧಾನ ಕಲಶಾರಾಧನೆ, ಕಲಾಪೂರ್ಣ ಪೂರ್ವಕ ಪ್ರಾಣಪ್ರತಿಷ್ಠೆ ಪ್ರತಿಷ್ಠಾಂಗ ಹೋಮಗಳು, ಮಹಾಪೂರ್ಣಾಹುತಿ, ಪಂಚಾಮೃತಾದಿ ಅಭಿಷೇಕ, ಮಹಾಕುಂಭಾಭಿಷೇಕ ಅರ್ಚನೆ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಅನ್ನಸಂತರ್ಪಣೆ ಕಾರ್ಯಕ್ರಮ. ಜೊತೆಗೆ ಆಲೂರು ದೇವಸ್ಥಾನದ ಬನ್ನಿಮಂಟಪದಿಂದ ಹೂ-ಹೊಂಬಾಳೆ, ಏಳುಮಡಿ ಸೇವೆ ನಂತರ ಸ್ವಾಮಿಯ ಆಲಯ ಪ್ರವೇಶ. ನಂತರ ಆಲೂರು ಮತ್ತು ಆಲೂರುದೊಡ್ಡಿ ಗ್ರಾಮಗಳಲ್ಲಿ ಗಡಿದೇವರುಗಳ ಉತ್ಸವ ಇರುತ್ತದೆ.

ಶ್ರೀ ಬೀರೇಶ್ವರಸ್ವಾಮಿ 11 ಗಡಿ ಕೂಟದ ದೇವರುಗಳ ಮೆರವಣಿಗೆ:

ಈ ಮೂರು ದಿನಗಳ ಕಾರ್ಯಕ್ರಮದ ಅಂಗವಾಗಿ ಬೀರೇಶ್ವರಸ್ವಾಮಿ 11 ಗಡಿ ಕೂಟದ ದೇವರುಗಳ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಅದರಲ್ಲಿ ಭಾನುವಾರದ ಕೂಟದ ಆಲೂರು ಗಡಿ ಬೀರೇಶ್ವರಸ್ವಾಮಿ, ಹುಲಿಹುಚ್ಚಪ್ಪ ಬೀರೇಶ್ವರಸ್ವಾಮಿ, ಮಾಗಡಿ ಗಡಿಯ ಮಲವಪ್ಪಸ್ವಾಮಿ ಬೀರೇಶ್ವರಸ್ವಾಮಿ, ಅರಸಿನಕೆರೆ ಗಡಿಯ ಸಣ್ಣಕ್ಕಿರಾಯಸ್ವಾಮಿ ಬೀರೇಶ್ವರಸ್ವಾಮಿ, ಆಲೂರು ಗ್ರಾಮದ ಆಲೂರಮ್ಮ ದೇವಿಯ ಪೂಜೆ, ಗುರುವಾರದ ಕೂಟಕ್ಕೆ ಸೇರಿದ ದೊಡ್ಡಬೀರೇಶ್ವರಸ್ವಾಮಿ, ಆಲೂರು ಬೀರೇಶ್ವರಸ್ವಾಮಿ, ಅಬ್ಬೂರು ಬೀರೇಶ್ವರಸ್ವಾಮಿ, ಸಾತನೂರು ಹಳೇಗುಡಿ ಬೀರೇಶ್ವರಸ್ವಾಮಿ, ಕೆರಗೋಡು ಬೀರೇಶ್ವರಸ್ವಾಮಿ, ಹೊಸಕೆರೆ ಬೀರೇಶ್ವರಸ್ವಾಮಿ, ಉಮ್ಮಡಹಳ್ಳಿ ಬೀರೇಶ್ವರಸ್ವಾಮಿ ದೇವರುಗಳ ಉತ್ಸವ ನಡೆಯಲಿದೆ. ಈ ಮೂರು ದಿನಗಳ ಕಾರ್ಯಕ್ರಮಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಆಲೂರು ಬೀರೇಶ್ವರಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮನವಿ ಮಾಡಿದೆ.