ಆಳ್ವಾಸ್ ಕಾಲೇಜಿನ ನಿರ್ವಹಣಾ ವಿಭಾಗವು(ಬಿಬಿಎ) ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ನಿರ್ವಹಣಾ ವಿಭಾಗವು(ಬಿಬಿಎ) ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವನ್ನು ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.ವಿಭಾಗದ ಹಿರಿಯ ವಿಧ್ಯಾರ್ಥಿ ಹಾಗೂ ಉದ್ಯಮಿ ವರುಣ್‌ರಾಜು ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಶೂನ್ಯಅನುಭವದಿಂದಆರಂಭಿಸುವುದು ಸಹಜ. ಆದರೆ ಮೌಲ್ಯಯುತ ಅನುಭವಗಳಿಂದ ಜೀವನ ರೂಪಿಸಿಕೊಳ್ಳುವುದು ಅಗತ್ಯ ಎಂದರು.ಅವಕಾಶಗಳನ್ನು ಕೈಬಿಟ್ಟರೆ, ನಾವು ಅದೇ ಸ್ಥಾನದಲ್ಲೇ ಉಳಿಯುತ್ತೇವೆ. ಆದರೆ ಅವಕಾಶಗಳನ್ನು ಸ್ವೀಕರಿಸಿ, ತೊಡಗಿಸಿಕೊಂಡಾಗ, ಜೀವನಕ್ಕೆ ಹೊಸ ಅರ್ಥ ದೊರೆಯುತ್ತದೆ. ಅಲ್ಲಿ ಸವಾಲುಗಳಿರುತ್ತವೆ, ವೈಫಲ್ಯಗಳಿರುತ್ತವೆ. ಆದರೆ ಆ ವೈಫಲ್ಯಗಳೇ ಜೀವನಕ್ಕೆಅನುಭವ, ಅನುಭವವೇ ಜ್ಞಾನ, ಮತ್ತು ಜ್ಞಾನವೇ ಯಶಸ್ಸಿನ ಮಾರ್ಗ ತೋರಿಸುತ್ತದೆ ಎಂದರು.

ಜರ್ಮನಿಯಲ್ಲಿ ಉದ್ಯೋಗದಲ್ಲಿರುವ ಇನ್ನೊರ್ವ ಹಿರಿಯ ವಿದ್ಯಾರ್ಥಿನಿ ವಂದನಾ ಮಾತನಾಡಿ, ಕಾರ್ಪೊರೇಟ್‌ ಜೀವನಕ್ಕೂ ವಿದ್ಯಾರ್ಥಿ ಜೀವನಕ್ಕೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಸ್ಪರ್ಧೆ, ಗಡುವು, ಒತ್ತಡ, ಹೊಣೆಗಾರಿಕೆ ಮತ್ತು ಜವಾಬ್ದಾರಿಗಳ ಜಗತ್ತನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಕಾಲೇಜಿನಲ್ಲಿರುವಾಗಲೇ ಕಾರ್ಪೊರೇಟ್‌ಜೀವನಕ್ಕೆ ಸಿದ್ಧರಾಗುವುದು ಅಗತ್ಯ ಎಂದರು.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ಧೈರ್ಯ, ಪರಿಶ್ರಮ ಮತ್ತು ತಾಳ್ಮೆ ಬೆಳೆಸಿಕೊಳ್ಳಬೇಕು. ಹಿರಿಯ ವಿದ್ಯಾರ್ಥಿಗಳ ಅನುಭವಗಳು ನಿಮ್ಮಜೀವನಕ್ಕೂ ಮಾರ್ಗದರ್ಶನವಾಗಲಿ ಎಂದರು.

ವ್ಯವಹಾರ ನಿರ್ವಹಣಾ ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ಕಾರ್ಯಕ್ರಮ ಸಂಯೋಜಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಸೋನಿ, ವಿಧ್ಯಾರ್ಥಿ ಸಂಯೋಜಕ ಸಪ್ತಶ್ರೀ ಹಾಗೂ ಸುಗಂಧಿ ಇದ್ದರು. ಖುಷಿ ನಿರೂಪಿಸಿ, ಶ್ರೀಷ್ ಸ್ವಾಗತಿಸಿ, ಗಾಯತ್ರಿ ವಂದಿಸಿದರು. ಸುಮನ ಹಾಗೂ ವಿಸ್ಮಯ ಅತಿಥಿಗಳನ್ನು ಪರಿಚಯಿಸಿದರು.