ಅಭಿವೃದ್ಧಿ ಕಾರ್ಯಗಳಿಗೆ ಸದಾ ಬದ್ಧ: ಸಚಿವ ಆರ್.ಬಿ.ತಿಮ್ಮಾಪೂರ

| Published : Nov 28 2024, 12:33 AM IST

ಸಾರಾಂಶ

ಕೆಆರ್‌ಐಡಿಎಲ್ ಅನುದಾನದಡಿಯಲ್ಲಿ ಸುಮಾರು ₹20 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಲಿದೆ

ಕನ್ನಡಪ್ರಭ ವಾರ್ತೆ ಲೋಕಾಪುರ

ಜನರ ಹಿತದೃಷ್ಠಿಯಿಂದ ಪಟ್ಟಣದಲ್ಲಿ ಅಭಿವೃದ್ಧಿ ಕೆಲಸಗಳು ಗಮನಕ್ಕೆ ತಂದರೆ ಸರ್ಕಾರದ ಯೋಜನೆ ಬಳಸಿಕೊಂಡು ಜನಪರ ಕೆಲಸ ಮಾಡುವುದರ ಜೊತೆಗೆ ಮುಧೋಳ ಮತಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಬದ್ಧನಾಗಿದ್ದೆನೆ ಎಂದು ಅಬಕಾರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ಬುಧುವಾರ ಪಟ್ಟಣದ ಠಾಣಿಕೇರಿ ಓಣಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿ ಭೂಮಿ ಪೂಜಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೆಆರ್‌ಐಡಿಎಲ್ ಅನುದಾನದಡಿಯಲ್ಲಿ ಸುಮಾರು ₹20 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣವಾಗಲಿದೆ. ಸ್ಥಳಿಯರ ಸಲಹೆ ಸೂಚನೆ ಪಡೆದು ಕಾಮಗಾರಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಶಿವಾನಂದ ಉದಪುಡಿ, ಯುವ ಮುಖಂಡ ಗುರುರಾಜ ಉದಪುಡಿ, ಸದುಗೌಡ ಪಾಟೀಲ, ಬೀರಪ್ಪ ಮಾಯನ್ನವರ, ಆನಂದ ಹಿರೇಮಠ, ಹೊಳಬಸು ದಂಡಿನ, ಮಹಾನಿಂಗಪ್ಪ ಹುಂಡೇಕಾರ, ಅಯ್ಯಪ್ಪಗೌಡ ಪಾಟೀಲ, ಮಂಜುಗೌಡ ಪಾಟೀಲ, ಗಣಪತಿ ಗಸ್ತಿ, ಮಹೇಶ ಪುಜಾರಿ, ಲೋಕಣ್ಣ ಉಳ್ಳಾಗಡ್ಡಿ, ವಿಠ್ಠಲ ಆನೆಗುದ್ದಿ, ಮುತ್ತಪ್ಪ ಚೌಧರಿ, ಶಿವಪ್ಪ ರೊಡ್ಡಪ್ಪನವರ, ಯಮನಪ್ಪ ಕಾಳಮ್ಮನವರ, ಸಿದ್ದಪ್ಪ ಪರಸನ್ನವರ, ಮಹಾದೇವ ಹುಗ್ಗಿ, ಮರಗಪ್ಪ ಮುದಕವಿ, ಹಣಮಂತ ಪರಸನ್ನವರ, ಮರಗಪ್ಪ ಜುನ್ನಪ್ಪನವರ, ಅಬ್ದುಲ್ ರಹಿಮಾನ್ ತೊರಗಲ್, ಸುಲ್ತಾನ್ ಕಲಾದಗಿ, ಸೈಯ್ಯದ ಗುದಗಿ, ರವಿ ರೊಡ್ಡಪ್ಪನವರ, ಕುಮಾರ ಕಾಳಮ್ಮನವರ, ಸುರೇಶ ಮಾದರ, ರಮೇಶ ಪರಸಪ್ಪಗೋಳ, ವಿವಿಧ ಇಲಾಖೆ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಇದ್ದರು.