ಸಾರಾಂಶ
ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಮತ್ತು ಕ್ರೀಡಾಕೂಟ ಹಿರಿಕರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಶ್ರೀ ರಾಮೇಶ್ವರ ಯುವಕ ಸಂಘ ಚನ್ನಾಪುರ-ಹಿರಿಕರ ಇವರ ವತಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಮತ್ತು ಕ್ರೀಡಾಕೂಟ ಹಿರಿಕರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಯುವಕ ಸಂಘದ ಅಧ್ಯಕ್ಷ ಎಚ್.ಆರ್.ಮೋಹನ್‌ದಾಸ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ಅಂಬೇಡ್ಕರ್ ಅವರು ಶ್ರೇಷ್ಠ ಸಮಾಜ ಸುಧಾರಕ, ತುಳಿಕ್ಕೊಳಗಾದ ವರ್ಗಗಳ ವಿಮೋಚಕ, ವಿದ್ವಾಂಸ, ಮಾನವ ಹಕ್ಕುಗಳ ಹೋರಾಟಗಾರ ಅಲ್ಲದೆ ಶಿಕ್ಷಣ ತಜ್ಞರಾಗಿದ್ದರು.
ಅಂಬೇಡ್ಕರ್ ಬಾಲ್ಯದಲ್ಲಿ ಸಾಮಾಜಿಕ ಬಹಿಷ್ಕಾರ ಮತ್ತು ಅವಮಾನವನ್ನು ಎದುರಿಸಿದ ಅನುಭವವು ಜಾತಿ ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ಹೋರಾಡುವ ಆಳವಾದ ಸಂಕಲ್ಪವನ್ನು ಅವರಲ್ಲಿ ತುಂಬಿತ್ತು. ಅಂಬೇಡ್ಕರ್ ಅದರ್ಶಗಳು ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಈ.ವೆಂಕಟೇಶ್, ಸಂಘದ ಐಗೂರು ಪಿಯು ಕಾಲೇಜಿನ ಪ್ರಾಂಶುಪಾಲರಾದ ಎಚ್.ಈ.ಉಮೇಶ್, ನಿವೃತ್ತ ಶಿಕ್ಷಕ ಎಚ್.ಡಿ.ಧರ್ಮಪ್ಪ, ಅಂಗನವಾಡಿ ಕಾರ್ಯಕರ್ತೆ ಹೇಮಲತ, ಸಂಘದ ಪದಾಧಿಕಾರಿಗಳಾದ ದೇವಪ್ಪ, ಅಭಿಷೇಕ್ ಇದ್ದರು. ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ ಪಂದ್ಯಾಟಗಳು ನಡೆದವು.