ಸಾರಾಂಶ
ಕವಿತಾಳ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಆಚರಣೆ ಮಾಡಲಾಯಿತು. ತಾಲೂಕು ಬಿಎಸ್ಎಸ್ ಸಂಚಾಲಕ ಚಂದ್ರು ಮಾತನಾಡಿದರು.
ಕವಿತಾಳ: ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಪಟ್ಟಣದ ವಿವಿಧೆಡೆ ಆಚರಣೆ ಮಾಡಲಾಯಿತು.
ಪಟ್ಟಣ ಪಂಚಾಯಿತಿ ಮತ್ತು ಇಲ್ಲಿನ ಅಂಬೇಡ್ಕರ್ ವೃತ್ತ ಹಾಗೂ ಪೊಲೀಸ್ ಠಾಣೆಯಲ್ಲಿ ಜಯಂತಿಯನ್ನು ಆಚರಣೆ ಮಾಡಲಾಯಿತು.ಪಟ್ಟಣ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಬಿಎಸ್ಎಸ್ ಸಂಚಾಲಕ ಚಂದ್ರು ಮಾತನಾಡಿ, ದೇಶಕ್ಕೆ ಸಂವಿಧಾನ ಗ್ರಂಥವನ್ನು ನೀಡಿದ ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ನಾಮಫಲಕಕ್ಕೆ ಮುಖಂಡರು ಮಾಲಾರ್ಪಣೆ ಮಾಡಿ ಮಾತನಾಡಿದರು.ಈ ಸಂದರ್ಭದಲ್ಲಿ ಹನುಮಂತ ಪೆoಟರ್, ಮುಖಂಡರಾದ ಓವಣ್ಣ, ಬಸಪ್ಪ ಮ್ಯಾಗಳಮನಿ, ಮೌನೇಶ ಕೊಡ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸಂಘಟಿತ ಕಾರ್ಮಿಕ ಮೋಹನ್ ಕುಮಾರ ಬಾಗಲವಾಡ, ಯಾಕೂಬ್ ಕಡತಲ್, ಮುಸ್ತಫ್, ರವಿ, ಹನುಮಂತ ಬುಳ್ಳಪುರು, ಹುಚ್ಚಪ್ಪ, ಶೇಖರಪ್ಪ ಬೋವಿ, ಪರಶುರಾಮ ಕಬಾಡಿ, ಹಿರಾಲಾಲ್ ಸಿಂಗ್, ಪಂಚಾಯತಿ ಸಿಬ್ಬಂದಿಗಳಾದ ರಾಘವೇಂದ್ರ, ರಾಮು, ಮಾರುತಿ, ರಾಮಲಿಂಗಪ್ಪ, ರಂಗಸ್ವಾಮಿ, ವೆಂಕಟೇಶ, ಮಹೇಶ, ದರವೇಶ ಇನ್ನಿತರರಿದ್ದರು.
ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿ ಎಸ್ ಐ ಎಚ್.ನಾಗಪ್ಪ ಅವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಸಿಬ್ಬಂದಿ ಶೋಭಾ, ಮಹೇಶ, ಅಮರೇಶ, ಮಲ್ಲಿಕಾರ್ಜುನ ಮತ್ತು ರಾಜಶೇಖರ ಇದ್ದರು.