ಸಾರಾಂಶ
ಚುನಾವಣೆ ವೇಳೆ ಮತವನ್ನು ಮಾರಿಕೊಳ್ಳದೇ ಯೋಗ್ಯರನ್ನು ಆಯ್ಕೆ ಮಾಡಿ, ಸಂವಿಧಾನವನ್ನು ಬದಲಾಯಿಸುತ್ತೇವೆಂದು ಹೇಳುವವರಿಗೆ ಬುದ್ದಿ ಕಲಿಸಿ .
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಜೀವನ ಚರಿತ್ರೆಯೇ ನಮ್ಮೆಲ್ಲರ ಬದುಕಿಗೆ ಸ್ಪೂರ್ತಿದಾಯಕವಾಗಿದೆ. ನಾವುಅಭಿಮಾನಿಗಳಾಗದೇ ಅವರ ಅನುಯಾಯಿಗಳಾಗಿ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಚಂದ್ರಪಾಟೀಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸಮೀಪ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಂವಿದಾನ ದಿನಾಚರಣೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ಡಾ.ಬಿ.ಆರ್ .ಅಂಬೇಡ್ಕರ್ ಜಯಂತಿ ಹಾಗೂ ಗಣರಾಜ್ಯೋತ್ಸವದ ವೇಳೆ ಮಹನೀಯರ ಭಾವಚಿತ್ರಕ್ಕೆ ಪೂಜಿಸಿ, ಮೆರವಣಿಗೆ ಮಾಡುವ ಜೊತೆಗೆ ಅವರ ಆಶಯಗಳನ್ನು ಮೈಗೂಡಿಸಿಕೊಂಡು ಸಂವಿಧಾನ ಓದಿ ಅದರಲ್ಲಿರುವ ವಿಷಯಗಳನ್ನು ತಿಳಿದು ಮುನ್ನಡೆಯಬೇಕು ಎಂದರು.
ಮೈಸೂರು ವಿವಿ ಮಹಾರಾಜ ಕಾಲೇಜು ಸಹಾಯಕ ಪ್ರಾಧ್ಯಾಪಕ ಬಿಪಿನ್ ನಾಗರಾಜು ಮಾತನಾಡಿ, ಚುನಾವಣೆ ವೇಳೆ ಮತವನ್ನು ಮಾರಿಕೊಳ್ಳದೇ ಯೋಗ್ಯರನ್ನು ಆಯ್ಕೆ ಮಾಡಿ, ಸಂವಿಧಾನವನ್ನು ಬದಲಾಯಿಸುತ್ತೇವೆಂದು ಹೇಳುವವರಿಗೆ ಬುದ್ದಿ ಕಲಿಸಿ ಎಂದು ಹೇಳಿದರು.ದಲಿತ ಸಂಘಟನೆಗಳ ಒಕ್ಕೂಟದಿಂದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿದ ನಂತರ ಬೈಕ್ ಜಾಥಾ ನಡೆಸಲಾಯಿತು. ಶೈಕ್ಷಣಿಕ ಸೇವೆ ಸಲ್ಲಿಸಿದ ಶಿಕ್ಷಕರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಎನ್.ಹಲಸಹಳ್ಳಿ ಕಲ್ಯಾಣ ಬಸವೇಶ್ವರ ಮಠದ ಓಂಕಾರೇಶ್ವರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ನಾಗರತ್ನ ಸೇರಿ ದಲಿತ ಮುಖಂಡರು ಇದ್ದರು.-------------
27ಕೆಎಂಎನ್ ಡಿ17ಮಳವಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸಮೀಪ ನಡೆದ ಸಂವಿಧಾನ ದಿನಾಚರಣೋತ್ಸವದಲ್ಲಿ ಶಿಕ್ಷಕರನ್ನು ಅಭಿನಂದಿಸಲಾಯಿತು.