ಅಂಬೇಡ್ಕರ್ ಸಂವಿಧಾನದಿಂದ ನೆಮ್ಮದಿಯ ಬದುಕು: ಡಾ.ಶಿವಕುಮಾರ್

| Published : Apr 30 2024, 02:04 AM IST

ಸಾರಾಂಶ

ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಪ್ರತಿಯೊಂದು ಮಗುವಿಗೂ ಅತ್ಯವಶ್ಯಕ. ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಐಎಎಸ್, ಐಪಿಎಸ್ ನಂತರ ಪರೀಕ್ಷೆಗಳನ್ನು ತೆಗದುಕೊಂಡು ಕಠಿಣ ಅಭ್ಯಾಸದಿಂದ ಯಶಸ್ವಿಯಾಗಲು ಪೋಷಕರು ಪ್ರೇರೆಪಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬರೆದಿರುವ ಸಂವಿಧಾನದಿಂದ ಪ್ರತಿಯೊಬ್ಬರು ನೆಮ್ಮದಿಯಿಂದ ಬದುಕುವಂತಾಗಿದೆ ಎಂದು ವಿಚಾರವಾದಿ ಡಾ.ಶಿವಕುಮಾರ್ ತಿಳಿಸಿದರು.

ತಾಲೂಕಿನ ಕಲ್ಲಾರೆಪುರದ ಶಾಂತಿಧಾಮ ಬುದ್ಧಮಂದಿರ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಗೌತಮ ಬುದ್ಧ ಯುವಕರ ಸಂಘದಿಂದ ನಡೆದ ಡಾ.ಬಿ.ಆರ್.ಅಂಬೇಡ್ಕರ್ 133 ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಬಾಬಾ ಸಾಹೇಬರು ಸಂವಿಧಾನವನ್ನು ರಚನೆ ಮಾಡಿ ಅದರಲ್ಲಿ ಸಮಾನತೆ ಸ್ವತಂತ್ರವನ್ನು ಅಳವಡಿಸದಿದ್ದರೇ ಕತ್ತಲೆಯಲ್ಲಿ ಬದುಕಬೇಕಾಗಿತ್ತು. ಸಂವಿಧಾನದಲ್ಲಿರುವ ವಿಷಯಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ನೆಮ್ಮದಿಯ ಜೀವನ ಸಾಗಿಸಬೇಕೆಂದು ತಿಳಿಸಿದರು.

ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಪ್ರತಿಯೊಂದು ಮಗುವಿಗೂ ಅತ್ಯವಶ್ಯಕ. ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿ ಐಎಎಸ್, ಐಪಿಎಸ್ ನಂತರ ಪರೀಕ್ಷೆಗಳನ್ನು ತೆಗದುಕೊಂಡು ಕಠಿಣ ಅಭ್ಯಾಸದಿಂದ ಯಶಸ್ವಿಯಾಗಲು ಪೋಷಕರು ಪ್ರೇರೆಪಿಸಬೇಕೆಂದು ಕರೆ ನೀಡಿದರು.

ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ದರ್ಶನ್ ಬಿ.ಸೋಮಶೇಖರ್ ಮಾತನಾಡಿ, ಭಾರತ ದೇಶದಲ್ಲಿ ಹುಟ್ಟಿದ ಬೌದ್ಧಧರ್ಮ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಚಾರಗೊಳ್ಳಬೇಕಿದೆ. ಬೌದ್ಧ ಧರ್ಮವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವೀಕರಿಸಿ ಬೌದ್ಧಧರ್ಮದ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಸಕಾರಗೊಳ್ಳಬೇಕಾದರೇ ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿಯೇ ನಡೆಯಬೇಕು. ಸ್ವಾಭಿಮಾನಿಯಾಗಿ ಬದುಕುವ ಮೂಲಕ ಮತ್ತೊಬ್ಬರಿಗೆ ಸಹಾಯ ಮಾಡಬೇಕೆಂದು ಕರೆ ನೀಡಿದರು.

ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು. ಅತಿಥಿ ಶಿಕ್ಷಕ ಚುಂಚಣ್ಣ ಸಂವಿಧಾನದ ಪೀಠಿಕೆ ಬೋಧಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವೇಣಿ ಬಾಲೆ ಸುಮನಪಾಲ ಬಂತೇಜಿರವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ್ ಮೂರ್ತಿ, ಮಾರ್ಕಾಲು ನಟರಾಜು, ಕಾಳಪ್ಪ, ಮಲ್ಲಿಕಾರ್ಜುನ, ಮರಿ ಮಾದಪ್ಪ, ಸುಧಾ ನಾಗರಾಜ್, ಕಿರಣ್ ಸೇರಿದಂತೆ ಇತರರು ಇದ್ದರು.