ಅಂಬೇಡ್ಕರ್ ಎಲ್ಲ ವರ್ಗದವರಿಗೆ ಸಮಾನತೆ ಕಲ್ಪಿಸಿದ ಮಹಾನಾಯಕ: ತಹಸೀಲ್ದಾರ್‌

| Published : Dec 07 2024, 12:35 AM IST

ಅಂಬೇಡ್ಕರ್ ಎಲ್ಲ ವರ್ಗದವರಿಗೆ ಸಮಾನತೆ ಕಲ್ಪಿಸಿದ ಮಹಾನಾಯಕ: ತಹಸೀಲ್ದಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಮಾನವತಾವಾದಿ, ಕ್ರಾಂತಿಕಾರಿ ಚಿಂತಕ ಡಾ. ಬಿ.ಆರ್. ಅಂಬೇಡ್ಕರ್ ದೀನದಲಿತರ ಹಿತರಕ್ಷಣೆಗೆ ಜೀವನ ಮುಡಿಪಾಗಿಟ್ಟವರು.

ಡಾ. ಬಿ.ಆರ್. ಅಂಬೇಡ್ಕರ್ ಮಹಾ ಪರಿನಿರ್ವಾಣ ದಿನಾಚರಣೆ, ಪುತ್ಥಳಿಗೆ ಮಾಲಾರ್ಪಣೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಮಹಾಮಾನವತಾವಾದಿ, ಕ್ರಾಂತಿಕಾರಿ ಚಿಂತಕ ಡಾ. ಬಿ.ಆರ್. ಅಂಬೇಡ್ಕರ್ ದೀನದಲಿತರ ಹಿತರಕ್ಷಣೆಗೆ ಜೀವನ ಮುಡಿಪಾಗಿಟ್ಟವರು. ಸಾಕಷ್ಟು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಿದರೂ ದಲಿತರ ಬಾಳಿಗೆ ಒಳಿತು ಮಾಡಲು ಶ್ರಮಿಸಿದರು. ಅವರ ಕಠಿಣ ಪರಿಶ್ರಮ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ತಹಸೀಲ್ದಾರ್‌ ಬಸವರಾಜ ತೆನ್ನಳ್ಳಿ ಹೇಳಿದರು.

ಪಟ್ಟಣದ ಛಲವಾದಿ ಕಾಲನಿಯಲ್ಲಿ ಶುಕ್ರವಾರ ತಾಲೂಕಾಡಳಿತ, ಪಪಂ, ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಛಲವಾದಿ ಮಹಾಸಭಾ ವತಿಯಿಂದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನಾಚರಣೆ ನಿಮಿತ್ತ ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಅವರು ಎಲ್ಲ ವರ್ಗದವರಿಗೆ ಸಮಾನತೆ ಕಲ್ಪಿಸಿದ ಮಹಾನ್ ನಾಯಕರಾಗಿದ್ದಾರೆ ಎಂದರು.

ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತ ಸಂವಿಧಾನ ರಚಿಸುವ ಮೂಲಕ ಇಡೀ ಜಗತ್ತಿಗೆ ವಿಶ್ವಮಾನವರಾಗಿದ್ದಾರೆ. ಇಂದಿನ ಯುವಕರು ಶಿಕ್ಷಣ, ಸಂಘಟನೆ, ಹೋರಾಟದ ಕಡೆ ಹೆಚ್ಚು ಗಮನಹರಿಸಿದಾಗ ಸಮಾಜ ತಾನಾಗಿಯೇ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಹಾಗೂ ಸಮಾಜ ಕಲ್ಯಾಣಾಧಿಕಾರಿ ಶಶಿಧರ ಸಕ್ರಿ ಮಾತನಾಡಿಸ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ವರ್ಗದ ಧ್ವನಿಯಾಗಿದ್ದರು. ತುಳಿತಕ್ಕೊಳಗಾದ ಜನರನ್ನು ಮೇಲೆಕ್ಕೆತ್ತಲು ಅವರ ಪರಿಶ್ರಮ ಅಷ್ಟಿಷ್ಟಲ್ಲ. ಅಂತಹ ದಾರ್ಶನಿಕರ ಪರಿಕಲ್ಪನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಡಿ.ಕೆ. ಪರಶುರಾಮ ಮತ್ತಿತರರು ಮಾತನಾಡಿದರು.

ಅಧಿಕಾರಿಗಳಾದ ಮಲ್ಲಿಕಾರ್ಜುನ, ಆರ್.ಪಿ. ಮಳಿಮಠ, ರವಿ ಪಡಗಣ್ಣನವರ್, ಮಹಾಂತೇಶ ಹಿರೇಮಠ, ಲಿಂಗನಗೌಡ ಪಾಟೀಲ, ಹನುಮಂತಗೌಡ ಪಾಟೀಲ, ಪಪಂ ಮಾಜಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಶರಣಪ್ಪ ಗಾಂಜಿ, ವೀರಣ್ಣ ಉಳ್ಳಾಗಡ್ಡಿ, ಎಂ.ಎಫ್. ನದಾಫ್, ರೇವಣೆಪ್ಪ ಹಿರೇಕುರಬರ, ಪಿಎಸ್‌ಐ ವಿಜಯಪ್ರತಾಪ, ಛಲವಾದಿ ಸಮಾಜಾಧ್ಯಕ್ಷ ಅಂದಪ್ಪ ಹಾಳಕೇರಿ, ಸಿದ್ದಪ್ಪ ಕಟ್ಟಿಮನಿ, ಶಂಕರ ಜಕ್ಕಲಿ, ಬಾಲರಾಜ ಮಂಗಳೂರು, ಗದ್ದೆಪ್ಪ ಕುಡಗುಂಟಿ, ತಿಪ್ಪಣ್ಣ ಹಿರೇಮ್ಯಾಗೇರಿ, ಶಶಿಧರ ಹೊಸ್ಮನಿ, ಕಳಕಪ್ಪ ತಳವಾರ, ರಮೇಶ ಛಲವಾದಿ, ಯಮನೂರಪ್ಪ ಬೇವಿನಗಿಡದ, ಮಲ್ಲು ಜಕ್ಕಲಿ, ಕನಕೇಶ ಪೇಂಟರ್, ಪ್ರಕಾಶ ಛಲವಾದಿ, ಬಸಪ್ಪ ಬಿನ್ನಾಳ, ವಿಜಯ ಜಕ್ಕಲಿ, ಯಲ್ಲಪ್ಪ ಲಮಾಣಿ, ಮಹಾಂತೇಶ ಛಲವಾದಿ, ಸುರೇಶ, ಮೋಹನ್, ವಿಷ್ಣು ಛಲವಾದಿ ಇದ್ದರು.