ಡಾ. ಅಂಬೇಡ್ಕರ್ ಸಂವಿಧಾನದಿಂದ ಪ್ರತಿಯೊಬ್ಬರಿಗೂ ಸಮಾನತೆ

| Published : Dec 07 2024, 12:35 AM IST

ಸಾರಾಂಶ

Dr. Ambedkar Equality for all from the Constitution

-ಜಿಲ್ಲಾಧಿಕಾರಿ ಡಾ. ಸುಶೀಲಾ ಅಭಿಮತ । ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನ ಆಚರಣೆ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಇಡೀ ಜೀವನ ಸಮಾನತೆಗಾಗಿ ಹೋರಾಡಿದ ಜೊತೆಗೆ ವಿಶ್ವದ ಉತ್ಕೃಷ್ಟ ಸಂವಿಧಾನ ರಚಿಸುವ ಮೂಲಕ ದೇಶದ ಪ್ರತಿ ನಾಗರಿಕನಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮಾನತೆ ಒದಗಿಸಿಕೊಟ್ಟಿದ್ದಾರೆ. ಇಂತಹ ಮಹಾನ್ ನಾಯಕರು ಸದಾ ಸ್ಮರಣೀಯರು ಎಂದು ಹೇಳಿದರು.

ಜಿಲ್ಲಾ ಎಸ್ಪಿ ಪೃಥ್ವಿಕ್ ಶಂಕರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸಪ್ಪ, ಸಮಾಜದ ಮುಖಂಡರಾದ ಮರೆಪ್ಪ ಚಟ್ಟೇರಕರ್, ಡಾ. ಭಗವಂತ ಅನವಾರ, ಮರೆಪ್ಪ ಬುಕ್ಕಲ್, ನಿಂಗಪ್ಪ ಬೀರನಾಳ, ಬಸಮ್ಮ ಮಹೇಶ ಕುರಕುಂಬಳಕರ್, ಮಂಜುನಾಥ ದಾಸನಕೇರಿ, ಸ್ವಾಮಿದೇವ ದಾಸನಕೇರಿ, ಗಾಲಿ ಪಟೇಲ್, ಮಂಜುನಾಥ ಗುರುಸಣಿಗಿ, ವಸಂತ ಸುಂಗಲಕರ್, ಸಂಪತ್ ಚಿನ್ನಾಕರ್, ಮರಿಲಿಂಗ ಕುರಕುಂ, ಸುರೇಶ್ ಬೊಮ್ಮನ್, ಚಂದ್ರಕಾಂತ ಚಲುವಾದಿ, ನಿಂಗಪ್ಪ ಹತ್ತಿಮನಿ, ಸುರೇಂದ್ರ ಬಬಲಾದ, ಮಲ್ಲಿಕಾರ್ಜುನ ಈಟೇ, ಮಹಾದೇವಪ್ಪ ಬಬಲಾದ, ಭೀಮಪ್ಪ ಕಾಗಿ, ಕಾಶಿನಾಥ ನಾಟೇಕಾರ್, ಗೌತಮ್ ಬಬಲಾದ, ಅಂಬ್ರೇಶ ಚಟ್ಟೇರಕರ್ ಸೇರಿದಂತೆ ಅನೇಕ ಮುಖಂಡರು ಇದ್ದರು.

.......ಬಾಕ್ಸ್:1......

- ಡಾ. ಬಾಬಾ ಸಾಹೇಬ್‌ ಕಂಡಂತಹ ಕನಸನ್ನು ಗೌರವಿಸಿ: ಭೀಮುನಾಯಕ

ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಅಂಬೇಡ್ಕರ್‌ ಅವರ 68ನೇ ಮಹಾ ಪರಿನಿರ್ವಾಣ ದಿನದ ಪ್ರಯುಕ್ತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ಡಾ. ಬಾಬಾ ಸಾಹೇಬ್‌ ಅವರು ಕಂಡಂತಹ ಕನಸನ್ನು ಗೌರವಿಸಿ ಸಮಾನತೆಯನ್ನು ಸಂವಿಧಾನವನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬ ಪ್ರಜೆಯು ಶ್ರಮೀಸಬೇಕೆಂದರು.

ಕರವೇ ತಾಲೂಕು ಅಧ್ಯಕ್ಷ ಮಲ್ಲು ಮಾಳಿಕೇರಿ, ಸಂತೋಷ್ ಕುಮಾರ ನಿರ್ಮಲಕರ್, ಸಾಹೇಬಗೌಡ ನಾಯಕ ಗೌಡಗೇರಾ, ಯಮನಯ್ಯ ಗುತ್ತೇದಾರ, ಅರ್ಜುನ ಪವಾರ, ಹುಲುಗಪ್ಪ ಭಂಜತ್ರಿ, ಸುರೇಶ ಬೆಳಗುಂದಿ, ಅಬ್ದುಲ್ ರಿಯಾಜ್, ಅನೀಲ ದಾಸನಕೇರಿ, ಸೈದಪ್ಪ ಬಾಂಬೆ ಗೌಡಗೇರಾ, ಹಣಮಂತ ದೊರೆ, ರಮೇಶ ಡಿ. ನಾಯಕ, ಇರ್ಫಾನ್ ಪಟೇಲ ಇದ್ದರು.

.........ಬಾಕ್ಸ್‌:2............

ಡಾ. ಅಂಬೇಡ್ಕರ್ 68ನೇ ಮಹಾ ಪರಿನಿರ್ವಾಣ ದಿನ ಆಚರಣೆ

ನಗರದ ಜೆಸ್ಕಾಂ ಕಚೇರಿಯ ಪ.ಜಾ ಮತ್ತು ಪ.ಪಂ. ನೌಕರರ ಕಲ್ಯಾಣ ಸಂಸ್ಥೆಯಿಂದ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು. ಈ ಸಭೆಯಲ್ಲಿ ಗುಲಬರ್ಗಾ ವೃತ್ತದ ಪ.ಜಾ ಮತ್ತು ಪ.ಪಂ. ನೌಕರ ಸಂಘಟನಾ ಕಾರ್ಯದರ್ಶಿ ಚಂದಪ್ಪ ಅವರು ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪ.ಜಾ ಮತ್ತು ಪ.ಪಂ ವಿಭಾಗೀಯ ಅಧ್ಯಕ್ಷ ಅಯ್ಯಪ್ಪ ಸುಂಗಲ್ ಕೋರ್ ಡಾ. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕಾರ್ಯದರ್ಶಿ ಈರಣ್ಣ ದೊಡ್ಡಮನಿ ಅವರು, ಅಂಬೇಡ್ಕರ್ ಅವರ ಬಗ್ಗೆ ಹಿತವಚನಗಳನ್ನಾಡಿದರು.

ಸಂಜೀವ್ ಕುಮಾರ್, ಎ.ಟಿ.ರಾಠೋಡ್, ಸುರೇಖಾ, ಮೋಹನ್ ಪವಾರ, ಪ.ಜಾ ಮತ್ತು ಪ.ಪಂ.ಖಜಾಂಚಿ ಮಲ್ಲಿಕಾರ್ಜುನ ಹಬ್ಬಳ್ಳಿ, ಸಂಘದ ಸದಸ್ಯರಾದ ಶರಣು ಉಡುಪಿ, ತಿಪ್ಪಣ್ಣ , ಓಂದೇವ್, ಮಲ್ಲಿಕಾರ್ಜುನ ಅರಿಕೇರಿ, ಅಶೋಕ ಚವ್ಹಾಣ್, ಮಲ್ಲಿಕಾರ್ಜುನ ಬಾರಿಗಿಡ, ಮರ್ಧನಪ್ಪ, ಸಯ್ಯದ್ ಹಸನ್, ಶಾಂತರಾಜ್, ನಾಗೇಶ್ ಕಡ್ಡಿ, ಹುಸೇನಪ್ಪ, ಸಂಜೀವ್ ಕುಮಾರ್ ವಿಜಿಲೇನ್ಸ್ ಇದ್ದರು.

------

ಫೋಟೊ: ಡಾ. ಬಿ.ಆರ್. ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಯಾದಗಿರಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

6ವೈಡಿಆರ್16

------

ಫೋಟೊ:

ಯಾದಗಿರಿ ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ 68ನೇ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು.

6ವೈಡಿಆರ್‌17

----

ಫೋಟೊ: ಯಾದಗಿರಿ ನಗರದ ಜೆಸ್ಕಾಂ ಕಚೇರಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನೌಕರರ ಕಲ್ಯಾಣ ಸಂಸ್ಥೆಯ ವತಿಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 68ನೇ ಮಹಾ ಪರಿನಿರ್ವಾಣ ದಿನವನ್ನು ಆಚರಿಸಲಾಯಿತು.

6ವೈಡಿಆರ್18