ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಟ್ಟ ಅಂಬೇಡ್ಕರ್

| Published : Apr 16 2024, 01:07 AM IST

ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಟ್ಟ ಅಂಬೇಡ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ಜಗತ್ತಿನಲ್ಲಿ ನಮ್ಮ ದೇಶಕ್ಕೆ ಅತ್ಯಂತ ಶ್ರೇಷ್ಟವಾದ ಸಂವಿಧಾನ ನೀಡಿದ ಕೀರ್ತಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ

ಮುಂಡರಗಿ: ಜಾತ್ಯಾತೀತವಾಗಿ ಎಲ್ಲ ಜಾತಿ, ಜನಾಂಗದವರಿಗೆ ನ್ಯಾಯ ದೊರಕಿಸಿ ಕೊಟ್ಟಿರುವ ಕೀರ್ತಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಹೀಗಾಗಿ ಅವರ ತತ್ವಾದರ್ಶಗಳನ್ನು ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ಸಂಸ್ಥಾಪಕ ಅಡಿವೆಪ್ಪ ಛಲವಾದಿ ಹೇಳಿದರು.

ಅವರು ಭಾನುವಾರ ಪಟ್ಟಣದ ಎಸ್.ಎಸ್. ಪಾಟೀಲ ನಗರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಸಂಘಟನೆ ವತಿಯಿಂದ ಆಯೋಜಿಸಲಾಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ117ನೇ ಜಯಂತಿ ಮತ್ತು ಜ್ಯೋತಿಬಾಫುಲೆ ಅವರ 192ನೇ ಜಯಂತಿ ಕಾರ್ಯಕ್ರಮದಲ್ಲಿ ಎಸ್.ಎಸ್. ಪಾಟೀಲ ನಗರದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.

ಕಾನೂನು ತಜ್ಞರಾಗಿ, ಹೋರಾಟಗಾರರಾಗಿ, ಪತ್ರಿಕೋದ್ಯಮಿಯಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿರುವುದರ ಜತೆಗೆ ಇಡೀ ಜಗತ್ತಿನಲ್ಲಿ ನಮ್ಮ ದೇಶಕ್ಕೆ ಅತ್ಯಂತ ಶ್ರೇಷ್ಟವಾದ ಸಂವಿಧಾನ ನೀಡಿದ ಕೀರ್ತಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಹಸಿರು ಕ್ರಾಂತಿಯ ಹರಿಕಾರರಾಗಿ, 4 ಬಾರಿ ಸಂಸದರಾಗಿ ದೇಶಕ್ಕೆ ಅತ್ಯುನ್ನತ ಕೊಡುಗೆ ನೀಡಿದ್ದಾರೆ. ತೀವ್ರ ಬಡತನ, ಸಂಕಷ್ಟಗಳ ಮಧ್ಯೆ ಅರಳಿದ ಪ್ರತಿಭೆ. ಕೃಷಿ ಸೇರಿ ಹಲವಾರು ಖಾತೆಗಳ ಸಚಿವರಾಗಿ ಮಹತ್ತರ ಸಾಧನೆ ಮಾಡಿದ ಕೀರ್ತಿ ಡಾ. ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ. ಮಹಾರಾಷ್ಟ್ರದಲ್ಲಿ ಜ್ಯೋತಿ ಬಾಪುಲೆ ಅವರ ಹೆಸರೂ ಸಹ ಇಂದಿಗೂ ಅಚ್ಚಳಿಯದಂತಿದೆ ಎಂದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಮುತ್ತು ಚನ್ನದಾಸರ ಶೇ. 95, ವಿನಾಯಕ ಕಟ್ಟಿಮನಿ ಸೇ. 89, ಕೋಟೇಶ ಚಲವಾದಿ ಶೇ. 82.05 ಮುಜುಮಿಲ್ ಸುಂಕದ ಶೇ.65, ಹುಸೇನ್ ಬಾಷಾ ಇಟಗಿ ಶೇ. 50, ಮಧು ಪಜಾರ ಶೇ.60, ಚನ್ನವೀರಗೌಡ ಪಾಟೀಲ ಶೇ. 60, ಜಗದೀಶ ಭಜಂತ್ರಿ ಶೇ. 60 ರಷ್ಟು ಅಂಕ ಪಡೆದಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಎಸ್.ಎಸ್. ಪಾಟೀಲ ನಗರದ ಹಿರಿಯರು, ಯುವಕರು ಸೇರಿ ಸನ್ಮಾನಿಸಿ ಗೌರವಿಸಿದರು.

ಈ ಸಂರ್ದಭದಲ್ಲಿ ಪುರಸಭೆ ಮಾಜಿ ಸದಸ್ಯ ಫಕ್ರುಸಾಬ್‌ ಹಾರೋಗೇರಿ, ಮಂಜುನಾಥ ಕಟ್ಟಿಮನಿ, ಮಂಜುನಾಥ ಮುಖೆ, ಶಿಪುತ್ರಪ್ಪ ಭಜಂತ್ರಿ, ಯಮನೂರಪ್ಪ ಛಲವಾದಿ, ದಸ್ತಿಗೀರಸಾಬ್‌ ಹೊಸಮನಿ, ವಿನೋದ್ ವಡ್ಡರ್, ಎಲ್ಲಪ್ಪ ಬೂದಿಹಾಳ, ಹನುಮಂತಪ್ಪ ಚೂರಿ, ಪ್ರಕಾಶ್ ದೊಡ್ಡಮನಿ, ವಿಜ್ಜಪ್ಪ ಕೊಳಲು, ಹಸನ್ ಅಳವಂಡಿ, ಎಲ್ಲಪ್ಪ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.