ದಲಿತರ, ಬಡವರ ಏಳಿಗೆಗಾಗಿ ಶ್ರಮಿಸಿದ ಅಂಬೇಡ್ಕರ್‌

| Published : Apr 15 2024, 01:24 AM IST

ಸಾರಾಂಶ

ಚನ್ನಮ್ಮನ ಕಿತ್ತೂರ: ಡಾ.ಬಾಬಾಸಾಹೇಬ ಅಂಬೇಡ್ಕರ್‌ ತತ್ವ, ಸಿದ್ಧಾಂತ, ಅವರ ಜೀವನ ಚರಿತ್ರೆಯ ಬಗ್ಗೆ ಇಂದಿನ ಯುವ ಪಿಳಿಗೆಯು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಉಪಪ್ರಾಂಶುಪಾಲ ಮಹೇಶ ಚನ್ನಂಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರ

ಡಾ.ಬಾಬಾಸಾಹೇಬ ಅಂಬೇಡ್ಕರ್‌ ತತ್ವ, ಸಿದ್ಧಾಂತ, ಅವರ ಜೀವನ ಚರಿತ್ರೆಯ ಬಗ್ಗೆ ಇಂದಿನ ಯುವ ಪಿಳಿಗೆಯು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಉಪಪ್ರಾಂಶುಪಾಲ ಮಹೇಶ ಚನ್ನಂಗಿ ಹೇಳಿದರು.

ಸ್ಥಳೀಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಡಾ.ಬಿ.ಆರ್‌.ಅಂಬೇಡ್ಕರ್‌, ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಇಡೀ ಜೀವನವನ್ನು ಹಿಂದುಳಿದ ವರ್ಗಗಳ ದೀನ, ದಲಿತರ ಮತ್ತು ಬಡವರ ಏಳಿಗೆಗಾಗಿ ಕಳೆದರು ಎಂದರು.ತಹಸೀಲ್ದಾರ್‌ ರವೀಂದ್ರ ಹಾದಿಮನಿ ಮಾತನಾಡಿದರು. ತಾಪಂ ಇಒ ಭಿಮಪ್ಪ ತಳವಾರ, ಸಿಪಿಐ ಎಂ.ಎಂ.ಡಪ್ಪಿನ, ಗಾಯತ್ರಿ ಅಜ್ಜನ್ನವರ, ಡಾ.ಬಿ.ಪಿ. ಹಿರೇಮಠ, ಡಾ.ಎಸ್.ಬಿ.ದಳವಾಯಿ, ಕಲಾವತಿ ದೇಶನೂರ, ದೀಪಾ ಹೆಬ್ಬಳ್ಳಿ, ಫಕ್ಕೀರಪ್ಪ ಜಾಂಗಟಿ, ಸಂಜೀವ ಲೋಕಾಪೂರ, ರಾಜು ಜಾಂಗಟಿ, ಬಸವರಾಜ ಕೆಳಗಡೆ, ಭೀಮಪ್ಪ ದುರಗನ್ನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ವರ್ತುಳದದಿಂದ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಮ್ ಭಾವಚಿತ್ರದ ಮೆರವಣಿಗೆಯು ಕುಂಭ ಮೇಳದೊಂದಿಗೆ ನಡೆಯಿತು. ನಂತರ ನಡೆದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.