ಸಾರಾಂಶ
೬ನೇ ಶರಣ ಸಂಸ್ಕೃತಿ ಉತ್ಸವ ಪೂರ್ವಭಾವಿ ಸಭೆ
ಗದಗ: ಜನವರಿ ೧೪ ಮತ್ತು ೧೫ ರಂದು ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರ ಹಾವೇರಿಯಲ್ಲಿ ಜರುಗುವ ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ೬ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಗದಗ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಿ ಸಂಘಟಿತರಾಗಿ ಗುರುಪೀಠದಿಂದ ಜರುಗುವ ಸಮಾಜಮುಖಿ ಕಾರ್ಯಗಳನ್ನು ಯಶಸ್ವಿಗೊಳಿಸಬೇಕೆಂದು ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳು ಹೇಳಿದರು.ನಗರದ ಚೌಡಮ್ಮ ದೇವಸ್ಥಾನದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶಗಳ ಸೇವಾ ಟ್ರಸ್ಟ್ ಹಾಗೂ ಉಡಚಮ್ಮದೇವಿ ಯವಕ ಸಂಘದ ವತಿಯಿಂದ ಈ ಕುರಿತು ಜರುಗಿದ ಪೂರ್ವ ಭಾವಿ ಸಭೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶ ಸೇವಾ ಟ್ರಸ್ಟಿನ ಅಧ್ಯಕ್ಷ ಬಿ.ಎನ್. ಯರನಾಳ ಮಾತನಾಡಿ, ಈಗಾಗಲೇ ಗದಗ ಜಿಲ್ಲೆಯಲ್ಲಿ ಟ್ರಸ್ಟಿನ ವತಿಯಿಂದ ನಿರ್ಮಾಣಗೊಳ್ಳತ್ತಿರುವ ಸಮುದಾಯ ಭವನದ ಕಾಮಗಾರಿ ಬಗ್ಗೆ ವಿವರಿಸಿ, ಗುರುಪೀಠದಲ್ಲಿ ಜರಗುವ ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ಟ್ರಸ್ಟಿನ ಉಪಾಧ್ಯಕ್ಷ ಸಿ.ಬಿ. ಬಾರಕೇರ ಮಾತನಾಡಿ, ಅಂಬಿಗ ಸಮಾಜದ ಏಕೈಕ ಗುರುಪೀಠವಾದ ಶ್ರೀನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರ ಹಾವೇರಿ ಜಿಲ್ಲೆ ವತಿಯಿಂದ ಜರುಗುವ ಮಹಾರಥೋತ್ಸವದ ಕಾರ್ಯಕ್ರಮಕ್ಕೆ ತನು-ಮನ-ಧನದಿಂದ ಸಂಪೂರ್ಣ ಸಹಕಾರ ನೀಡುವಂತೆ ತಿಳಿಸಿದರು.
ಈ ವೇಳೆ ಶರಣ ಸಂಸ್ಕೃತಿ ಉತ್ಸವ ಹಾಗೂ ವಚನ ಗ್ರಂಥ ಮಹಾರಥೋತ್ಸವ, ಪ್ರಚಾರದ, ಭಿತ್ತಿಪತ್ರ, ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.ಗುರುಪೀಠದ ಉಪಾಧ್ಯಕ್ಷ ಟಿ.ಮಂಜನಾಥ, ನಿರ್ದೇಶಕ ಗುರಪ್ಪ ಆದೆಪ್ಪನವರ, ಟ್ರಸ್ಟಿನ ಪದಾಧಿಕಾರಿಗಳಾದ ವಿ.ಜಿ. ಬಾರಕೇರ, ಕಾಶಪ್ಪ ಬಳಗಾನೂರ, ಮಾಲತೇಶ ಬಾರ್ಕಿ, ಪರಶುರಾಮ ಬಾರಕೇರ, ಶರಣಪ್ಪ ಬಾರಕೇರ, ಬಸವರಾಜ ಬಾರಕೇರ, ಶಿವಾನಂದ ಬನಹಟ್ಟಿ, ಸಿ.ಬಿ. ಬಾರಕೇರ, ಗುರಪ್ಪ ಆದೆಪ್ಪನವರ, ಪರಶುರಾಮ ಓಲೇಕಾರ, ಸಮಾಜ ಬಾಂಧವರಾದ ಹುಲ್ಲಪ್ಪ ಬಾರಕೇರ, ಯಲ್ಲಪ್ಪ ಬಾರಕೇರ, ಬೂದೀಶ ಹೊಂಬಳ, ಲಕ್ಷ್ಮಣ ಕಾಗನೂರ, ವಾಸುದೇವ ಲಕ್ಷ್ಮೇಶ್ವರ, ಪ್ರಕಾಶ ಪೂಜಾರ, ರವಿ ಸವಣೂರ, ಗೋಪಾಲ ಲಕ್ಷ್ಮೇಶ್ವರ, ಚಂದ್ರಶೇಖರ ಸವಣೂರ, ಮಧುಶೇಖರ ಪೂಜಾರ, ರಾಮು ಲಕ್ಷ್ಮೇಶ್ವರ, ಪರಶುರಾಮ ಪೂಜಾರ, ವಿವೇಕ ಲಕ್ಷ್ಮೇಶ್ವರ, ಜಗದೀಶ ಪೂಜಾರ, ರಮೇಶ ಲಕ್ಷ್ಮೇಶ್ವರ, ಪರಶುರಾಮ ಪೂಜಾರ, ಹೆಚ್.ಬಿ.ಆದೆಪ್ಪನವರ, ಕಾಳಪ್ಪ ನಾಗನೂರ, ಮಾದನಗೌಡ ಪಾಟೀಲ, ಕೃಷ್ಣಗೌಡ ಸಣ್ಣಮನಿ, ನಿಂಗಪ್ಪ ಬಾರಕೇರ ಇದ್ದರು. ಮಂಜುನಾಥ ಸುಣಗಾರ ನಿರೂಪಿಸಿದರು. ಕಿರಣಕುಮಾರ ಪೂಜಾರ ವಂದಿಸಿದರು.