ದಾನಗಳಲ್ಲಿ ರಕ್ತದಾನ ಮಹಾದಾನ

| Published : Feb 10 2024, 01:50 AM IST

ಸಾರಾಂಶ

ಗ್ರಾಮದ ಭಗತ್ಸಿಂಗ್ ಯುವಕ ಮಂಡಳಿ ಹಾಗೂ ಸಂಗೊಳ್ಳಿ ರಾಯಣ್ಣ ಯುವಕರಿಂದ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕನ್ನಡಪ್ರಭ ವಾರ್ತೆ ತಾಂಬಾ

ದಾನಗಳಲ್ಲಿ ರಕ್ತದಾನ ಮಹಾದಾನ ಎಂದು ಸಮಾಜ ಸೇವಕ ಶರಣು ಕಾಂದೆ ಹೇಳಿದರು.

ಗ್ರಾಮದ ಭಗತ್‌ಸಿಂಗ್ ಯುವಕ ಮಂಡಳಿ ಹಾಗೂ ಸಂಗೊಳ್ಳಿ ರಾಯಣ್ಣ ಯುವಕರಿಂದ ಏರ್ಪಡಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತ ಎಂಬುವುದು ಕೃತಕವಾಗಿ ತಯಾರಿಸುವಂತಹ ವಸ್ತು ಅಲ್ಲ, ರಕ್ತವೆಂಬುವುದು ಮಾನವನ ಹೂಗುವ ಜೀವ ಉಳಿಸುವ ಕಾರ್ಯ ಮಾಡಲಿದೆ. ದಾನಗಳಲ್ಲಿ ಭೂದಾನ, ನೇತ್ರದಾನ, ದೇಹದಾನ, ಅಂಗಾಗಳ ದಾನ, ಹಣಕಾಸಿನ ದಾನ ಇವು ಎಲ್ಲವುಗಳು ಮಹತ್ವದ ಸ್ಥಾನ ಪಡೆದಿದ್ದರೂ ಇವುಗಳೊಂದಿಗೆ ರಕ್ತದಾನ ಎಂಬುವುದು ಅಗ್ರಸ್ಥಾನ ಪಡೆದಿದೆ ಎಂದರು.

ಗ್ರಾಪಂ ಅಧ್ಯಕ್ಷ ರಜಾಕಸಾಬ ಚಿಕ್ಕಗಸಿ ಮಾತನಾಡಿ, ಮಾನವರಾದ ನಾವು ಆರೋಗ್ಯವೇ ಭಾಗ್ಯವೆಂದು ತಿಳಿದು ನಡೆಯಬೇಕು. ಆರೋಗ್ಯವಂತರಾಗಿ ಬಾಳಬೇಕಾಗಿದೆ ರಕ್ತವೆಂಬುವುದು ಮಾನವನ ಜೀವ ಉಳಿಸುವ ಕಾರ್ಯಕ್ಕೆ ಸಹಕಾರಿಯಾಗಲಿದೆ. ಅಪಘಾತ ಸಮಯದಲ್ಲಿಯೂ ಅಪಘಾತ ಹೊಂದಿದವರಿಗೆ ರಕ್ತದ ಅವಶ್ಯಕತೆ ಬೀಳುತ್ತದೆ. ಈ ಸಮಯದಲ್ಲಿ ರಕ್ತದಾನ ಮಾಡಿದ ರಕ್ತ ಸಹಾಯಕ್ಕೆ ಬರುತ್ತದೆ. ಹೀಗಾಗಿ ಎಲ್ಲರೂ ರಕ್ತದಾನ ಮಾಡಲು ಮುಂದಾಗಿ ಎಂದು ಮನವಿ ಮಾಡಿದರು.

ವಿಜಯಪುರದ ಸರಕಾರಿ ರಕ್ತ ನಿಧಿ ಕೇಂದ್ರದ ಡಾ.ನಮಿತಾ ಹೊನ್ನುಟಗಿ ಮಾತನಾಡಿದರು. ಭಗತ್‌ಸಿಂಗ್ ಯುವಕ ಸಂಘದ ಅಧ್ಯಕ್ಷ ಪ್ರವೀಣ ತಂಗಾ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡರಾದ ಜಿ.ವೈ.ಗೋರನಾಳ, ಜಕ್ಕಪ್ಪ ಹತ್ತಳ್ಳಿ, ಶ್ರೀಧರ ಉಕ್ಕಲಿ, ರಾಚಪ್ಪ ಗಳೇದ, ಪ್ರಕಾಶ ಮುಂಜಿ, ಪ್ರಕಾಶ ಕಲ್ಲೂರ, ಹಣಮಂತ ಕಾಳೆ, ಚಿದಾನಂದ ಗೌಡಗಾವಿ, ಆರ್.ಎಸ್.ಪೂಜಾರಿ ಸೇರಿದಂತೆ ಮತ್ತಿತರರು ಇದ್ದರು. ಶಿಬಿರದಲ್ಲಿ ೫೦ವಿದ್ಯಾರ್ಥಿಗಳ ತಪಾಸಣೆ ನಡೆಸಲಾಯಿತ್ತಲ್ಲದೆ ೩೦ ಯುವಕರ ರಕ್ತ ಸಂಗ್ರಹಿಸಲಾಯಿತು.