ಅಮೇರಿಕಾದಲ್ಲಿ ಉನ್ನತ ಶಿಕ್ಷಣಕ್ಕೆ ಸಾಕಷ್ಟು ಅವಕಾಶವಿದೆ: ಕೈಲಾಶ್

| Published : Jun 19 2024, 01:10 AM IST

ಅಮೇರಿಕಾದಲ್ಲಿ ಉನ್ನತ ಶಿಕ್ಷಣಕ್ಕೆ ಸಾಕಷ್ಟು ಅವಕಾಶವಿದೆ: ಕೈಲಾಶ್
Share this Article
  • FB
  • TW
  • Linkdin
  • Email

ಸಾರಾಂಶ

ಶರಣಬಸವ ವಿಶ್ವವಿದ್ಯಾಲಯವು ಅಟ್ಲಾಂಟಿಕ್ಸ್ ವಿಶ್ವವಿದ್ಯಾಲಯದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಹೇರಳ ಅವಕಾಶಗಳನ್ನು ಒದಗಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಶರಣಬಸವ ವಿಶ್ವವಿದ್ಯಾಲಯವು ಅಟ್ಲಾಂಟಿಕ್ಸ್ ವಿಶ್ವವಿದ್ಯಾಲಯದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಹೇರಳ ಅವಕಾಶಗಳನ್ನು ಒದಗಿಸಿದೆ, ಅವರಿಗೆ ಅಮೇರಿಕಾದಲ್ಲಿ ಇಂಜಿನಿಯರಿಂಗ್ ಉನ್ನತ ಶಿಕ್ಷಣ ಪಡೆದುಕೊಳ್ಳಲು ವಿಶಾಲವಾದ ಮಾರ್ಗವನ್ನು ತೆರೆದಿದೆ ಎಂದು ಅಮೇರಿಕಾ ಅಟ್ಲಾಂಟಿಕ್ಸ್ ವಿಶ್ವವಿದ್ಯಾಲಯದ ವ್ಯವಸ್ಥಾಪಕ ನಿರ್ದೇಶಕ ಕೈಲಾಶ ಚಿಂತಾಮಣಿ ಹೇಳಿದರು.

ಅವರು ಮಂಗಳವಾರ ಶರಣಬಸವ ವಿವಿ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ “ಜನರೇಟಿವ್ ಎಐ ಇನ್ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್” ಕುರಿತು ಒಂದು ದಿನದ ಅಂತರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಫ್ಲೋರಿಡಾದ ಮಿಯಾಮಿಯಲ್ಲಿರುವ ಅಟ್ಲಾಂಟಿಕ್ಸ್ ವಿಶ್ವವಿದ್ಯಾಲಯದಲ್ಲಿ ಕೋರ್ಸ್‍ಗೆ ಈಗಾಗಲೇ ಶರಣಬಸವ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ತಮ್ಮ ಮಾಸ್ಟರ್ ಆಫ್ ಸೈನ್ಸ್ ಕೋರ್ಸ್‍ಗೆ ಸೇರಿದ್ದಾರೆ. ಅಟ್ಲಾಂಟಿಕ್ಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್‌ ಮಾಡುವ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಭವಿಷ್ಯವು ಉಜ್ವಲವಾಗಿರುತ್ತದೆ ಎಂದರು.

ಶರಣಬಸವ ವಿವಿ ಉಪಕುಲಪತಿ ಡಾ. ಅನಿಲಕುಮಾರ ಬಿಡವೆ ಮಾತನಾಡಿ, ಪ್ರಸ್ತುತ ಶತಮಾನವು ಆರ್ಟಿಫಿಶಿಯಲ್ ಇಂಟೆಲಿಜನ್ಸ್‍ಗೆ ಸಮರ್ಪಿತವಾಗಿದೆ. ಶರಣಬಸವ ವಿಶ್ವವಿದ್ಯಾಲಯವು ಪದವಿಪೂರ್ವ ಶಿಕ್ಷಣದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಮಷಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಡೇಟಾ ಸೈನ್ಸ್ ಎರಡನ್ನೂ ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮಾರ್ಗಗಳನ್ನು ತೆರೆದಿದೆ. ನಮ್ಮ ವಿವಿಯಲ್ಲಿ ವಿದ್ಯಾರ್ಥಿಗಳು ಭವಿಷ್ಯದ ಸವಾಲುಗಳನ್ನು ತೆಗೆದುಕೊಳ್ಳಲು ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಆರ್ಟಿಫಿಶಿಯಲ್ ಇಂಟೆಲಿಜನ್ಸ್ ಮತ್ತು ಡೇಟಾ ಸೈನ್ಸ್ ಸ್ನಾತಕೋತ್ತರ ಕೋರ್ಸ್‍ಗಳು ಪ್ರಾರಂಭವಾಗಿವೆ ಎಂದರು.

ಬೆಂಗಳೂರಿನ ಎಡ್ವೆಂಚರ್ಸ್‍ನ ನಿರ್ದೇಶಕ ಡಾ ಅರುಣ್ ಚಂದ್ರ ಮುದೋಳ್ ಮಾತನಾಡಿ, ವಿದ್ಯಾರ್ಥಿಗಳು ಕೋರ್ಸ್‍ಗಳಿಗೆ ಸೇರಲು ಸಾಲ ಸೌಲಭ್ಯಗಳು ಮತ್ತು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಈ ಕೋರ್ಸ್‍ಗಳಿಗೆ ಪ್ರವೇಶದ ಇತರ ವಿವರಗಳ ಕುರಿತು ಎಲ್ಲಾ ಪ್ರಮುಖ ವಿವರಗಳನ್ನು ಒದಗಿಸಿದರು.

ಕುಲಸಚಿವ ಡಾ. ಎಸ್.ಜಿ.ಡೊಳ್ಳೇಗೌಡರ್, ನಿರ್ದೇಶಕ ವಿ.ಡಿ.ಮೈತ್ರಿ, ಡೀನ್ ಡಾ. ಲಕ್ಷ್ಮೀ ಪಾಟೀಲ್ ಮಾಕಾ, ಸಂಶೋಧನಾ ನಿರ್ದೇಶಕಿ ಡಾ. ಸುಜಾತಾ ಮಲ್ಲಾಪುರ, ಡೀನ್ ಇಂಜಿನಿಯರಿಂಗ್ ಟೆಕ್ನಾಲಜಿ (ಕೋ-ಎಡ್) ಡಾ. ಶಿವಕುಮಾರ ಜವಳಗಿ ಇದ್ದರು.