ಬೀರೂರಲ್ಲಿ ಅಮೃತ್ 2.0 ಕುಡಿವ ನೀರಿನ ಯೋಜನೆ ಮಾ.2026ಕ್ಕೆ ಮುಕ್ತಾಯ: ಎಂ. ಆನಂದ್

| Published : Nov 14 2025, 01:30 AM IST

ಬೀರೂರಲ್ಲಿ ಅಮೃತ್ 2.0 ಕುಡಿವ ನೀರಿನ ಯೋಜನೆ ಮಾ.2026ಕ್ಕೆ ಮುಕ್ತಾಯ: ಎಂ. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರು, ದೇಶದ ಎಲ್ಲಾ ಪಟ್ಟಣಗಳ ಎಲ್ಲಾ ಮನೆಗಳಿಗೆ ನಲ್ಲಿಗಳ ಮೂಲಕ ನೀರು ಸರಬರಾಜು ಒದಗಿಸಲು ಮತ್ತು ಅಮೃತ್ ಯೋಜನೆ ಪುನರುಜ್ಜೀವನ, ನಗರ ಪರಿವರ್ತನೆಯನ್ನು ಅಟಲ್ ಮಿಷನ್ 2.0 (ಅಮೃತ್ 2.0) ಯೋಜನೆಯಡಿ ನಡೆಸುತ್ತಿರುವ ಕಾಮಗಾರಿ ತ್ವರಿತವಾಗಿ ಪೂರ್ಣವಾಗುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಆನಂದ್ ತಿಳಿಸಿದರು.

- ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಭೇಟಿ । ಮಾರ್ಗದ ಕ್ಯಾಂಪ್ ಓವರ್ ಹೆಡ್ ಟ್ಯಾಂಕ್ ಜನವರಿಗೆ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಬೀರೂರು.ದೇಶದ ಎಲ್ಲಾ ಪಟ್ಟಣಗಳ ಎಲ್ಲಾ ಮನೆಗಳಿಗೆ ನಲ್ಲಿಗಳ ಮೂಲಕ ನೀರು ಸರಬರಾಜು ಒದಗಿಸಲು ಮತ್ತು ಅಮೃತ್ ಯೋಜನೆ ಪುನರುಜ್ಜೀವನ, ನಗರ ಪರಿವರ್ತನೆಯನ್ನು ಅಟಲ್ ಮಿಷನ್ 2.0 (ಅಮೃತ್ 2.0) ಯೋಜನೆಯಡಿ ನಡೆಸುತ್ತಿರುವ ಕಾಮಗಾರಿ ತ್ವರಿತವಾಗಿ ಪೂರ್ಣವಾಗುತ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಆನಂದ್ ತಿಳಿಸಿದರು.ಗುರುವಾರ ಪಟ್ಟಣದ ವಿವಿಧ ವಾರ್ಡ ಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಮತ್ತು ಮೀಟರ್ ಜೊತೆಗೆ ಅಳವಡಿಸುತ್ತಿರುವ ನಲ್ಲಿಗಳ ಪರಿಶೀಲನೆ ನಡೆಸಿ ಪತ್ರಿಕೆಯೊಂದಿಗೆ ಮಾತನಾಡಿದರು. ಕುಡಿವ ನೀರಿನ ಯೋಜನೆಗೆ ಬೀರೂರಿಗೆ ಸುಮಾರು ₹33ಕೋಟಿ ಅನುದಾನ ಬಿಡುಗಡೆಯಾಗಿದೆ. 23 ವಾರ್ಡಗಳ ಒಟ್ಟು 85 ಕಿ.ಮೀ ವಿಸ್ತೀರ್ಣವಿದ್ದು, ಅದರಲ್ಲಿ ಸುಮಾರು 6926 ಮನೆಗಳನ್ನು ಗುರುತಿಸಲಾಗಿದೆ. ಸದ್ಯ 50ಕಿ.ಮೀ ವ್ಯಾಪ್ತಿಯಲ್ಲಿ ಪೈಪ್ ಲೈನ್ ಅಳವಡಿಸಲಾಗಿದೆ. ಸದ್ಯ 10ವಾರ್ಡಗಳ 600 ಮನೆಗಳಿಗೆ ನಲ್ಲಿ ಸಂಪರ್ಕ ನೀಡಲಾಗಿದೆ ಎಂದರು.

ಮಾನವ ಸಂಪನ್ಮೂಲ ಆಧಾರದಲ್ಲಿ ಕಾಮಗಾರಿ ಕೈಗೊಂಡಿದ್ದು ಮಾ. 2026ರಲ್ಲಿ ಮುಕ್ತಾಯ ವಾಗಲಿದೆ. ಅಮೃತ್ 2.0 ಯೋಜನೆ ಉದ್ದೇಶ ಯಾವ ಸಾರ್ವಜನಿಕರು ಕೂಡ ನೀರಿಗೆ ಪರಿತಪಿಸಬಾರದು, ಪ್ರತಿ ಮನೆಗೂ ನಲ್ಲಿ ಸಂಪರ್ಕ ನೀಡಬೇಕು, ಜೊತೆಗೆ ನಲ್ಲಿ ಮೀಟರ್ ಅಳವಡಿಸಿದರೆ ಸಾರ್ವಜನಿಕರಿಗೆ ಕುಡಿಯುವ ನೀರಿನ ದುರುಪಯೋಗದ ಬಗ್ಗೆ ತಿಳಿದು, ನಮಗೆ ಅವಶ್ಯಕತೆಗೆ ತಕ್ಕಷ್ಟೆ ನೀರನ್ನು ಬಳಸಬಹುದು ಎಂದರು.ಇದು ಪ್ರತಿ ದಿನ ನೀರು ಬರುವುದಿಲ್ಲ, ಕಡೂರು-ಬೀರೂರಿಗೆ ಭದ್ರಾ ಕುಡಿವ ನೀರು ಹೇಗೆ ಸರಬರಾಜಾಗುತ್ತಿದೆಯೋ ಹಾಗೆ ತಲುಪುತ್ತದೆ ಎಂದರು. ಸದ್ಯ ಪಟ್ಟಣಕ್ಕೆ ಭದ್ರಾ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಲ್ಲ, ಜನ ಕುಡಿವ ನೀರಿಗೆ ಪರಿತಪಿಸುವ ಸ್ಥಿತಿ ಇದೆ. ನೀವು ಅಳವಡಿಸಿರುವ ನಲ್ಲಿ ಪೈಪ್ ಬಹಳ ಚಿಕ್ಕದಾಗಿದ್ದು ಮುಂದೆ ನೀರಿಗೆ ತೊಂದರೆ ಯಾಗುವುದಿಲ್ಲವೆ ಎಂಬ ಪ್ರಶ್ನೆಗೆ ಎಇಇ ಆನಂದ್, ತಾಂತ್ರಿಕವಾಗಿ ವಿದ್ಯುತ್, ಅಲ್ಲಿನ ಯಂತ್ರೋಪ ಕರಣ ಕೆಟ್ಟಾಗ ಮಾತ್ರ ಭದ್ರಾ ಕುಡಿಯುವ ನೀರು ಸರಬರಾಜಿಗೆ ತೊಂದರೆಯಾಗುತ್ತದೆ. ಶಾಸಕರೊಂದಿಗೆ ಚರ್ಚಿಸಿ ಸಾಧಕ-ಬಾಧಕಗಳ ಬಗ್ಗೆ ತಿಳಿಸಿ ವಾರಕ್ಕೆ 2 ದಿನವಾದರೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಒಳಚರಂಡಿ ಮತ್ತು ಕುಡಿವ ನೀರಿನ ಸಹಾಯಕ ಇಂಜಿನಿಯರ್ ಎನ್.ಸಿ.ಶಿಲ್ಪ, ಪುರಸಭೆ ಎಂಜಿನಿಯರ್ ವೀಣಾ, ಗುತ್ತಿಗೆದಾರ ರೂಪೇಶ್ ಸೇರಿದಂತೆ ಮತ್ತಿತರಿದ್ದರು.

-- ಬಾಕ್ಸ್--

ಜೊತೆಗೆ ಕೇಂದ್ರ ಪುರಸ್ಕೃತ ಅಮೃತ್ -2.0 ಯೋಜನೆಯಡಿ ಬೀರೂರು ಪಟ್ಟಣದ ಪ್ರತಿ ಮನೆಗೆ ಹೊಸದಾಗಿ ನಲ್ಲಿ ಸಂಪರ್ಕ ನೀಡುವ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದಕ್ಕೆ ಯಾವುದೇ ಶುಲ್ಕ ಮನೆ ಬಳಿ ನಲ್ಲಿ ಸಂಪರ್ಕ ನೀಡು ವವರಿಗೆ ಪಾವತಿಸುವಂತಿಲ್ಲ. ಕೊಳವೆ ಸಾಲುಗಳನ್ನು ಅಳವಡಿಸಲು ತೆಗೆಯಲಾದ ಕಂದಕವನ್ನು ಪೂರ್ಣಪ್ರಮಾಣದಲ್ಲಿ ಮುಚ್ಚುವ, ಕತ್ತರಿಸಲಾದ ಸಿಮೆಂಟ್ ಹಾಗೂ ಡಾಂಬರ್ ರಸ್ತೆಗಳನ್ನು ಯಥಾ ಸ್ಥಿತಿಗೆ ತರುವ ಕೆಲಸ ಜ. 2026 ರ ನಂತರ ಕೈಗೊಳ್ಳಲಾಗುವುದು. ಸದ್ಯ ಪಟ್ಟಣದ 23 ನೇ ವಾರ್ಡಿನಲ್ಲಿ ನೂತವಾಗಿ ನಿರ್ಮಾಣವಾಗುತ್ತಿರುವ ಓವರ್ ಹೆಡ್ ಟ್ಯಾಂಕ್ ಕಾಮಗಾರಿ ಶೀಘ್ರ ಪೂರ್ಣವಾಗುತ್ತಿದ್ದು, ಜನವರಿಯಲ್ಲಿ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಲಿದ್ದಾರೆ.

- ಎಂ.ಆನಂದ್. ಎಇಇ13 ಬೀರೂರು 1ಬೀರೂರು ಪಟ್ಟಣದಲ್ಲಿ ನಡೆಯುತ್ತಿರುವ ಅಮೃತ್ 2.0ಕುಡಿಯುವ ನೀರಿನ ಯೋಜನೆಯಡಿ ಪ್ರತಿ ಮನೆಗೆ ನಲ್ಲಿ ಅಳವಡಿಸುವ ಕಾರ್ಯ ನಡೆಯುತ್ತಿರುವುದನ್ನು ಒಳಚರಂಡಿ ಮಂಡಳಿಯ ಮತ್ತು ಕುಡಿಯುವ ನೀರಿನ ಯೋಜನೆಯ ಎಇಇ ಎಂ.ಆನAದ್ ಪರಿಶೀಲನೆ ನಡೆಸಿದರು.ಎಇ ಶಿಲ್ಪ, ವೀಣಾ ಮತ್ತಿತರಿದ್ದರು.