ಬಾಳಿಗೊಂದು ಅಮೃತಸಿಂಚನ: ಲೇಖನಗಳ ಸಂಚಯ

| Published : Jul 09 2024, 12:50 AM IST

ಸಾರಾಂಶ

ಸಾಧು- ಸಂತರ, ಚಿಂತಕರ ಮುಖ್ಯವಾಗಿ ದಿವ್ಯತ್ರಯರಾದ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಹಾಗೂ ಶಾರದಾದೇವಿ ಅವರ ವಿಚಾರಗಳಿಂದ ಸಮನ್ವಿತವಾದ ಬರಹಗಳಿವು.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಹಿರಿಯ ಸಾಹಿತಿ ಡಾ.ಡಿ.ಕೆ. ರಾಜೇಂದ್ರ ಅವರ ಬಾಳಿಗೊಂದು ಅಮೃತ ಸಿಂಚನ ಕೃತಿಯು ವಿವಿಧ ವಿಷಯಗಳ ಲೇಖನ ಸಂಚಯವಾಗಿದೆ.ಸಾಧು- ಸಂತರ, ಚಿಂತಕರ ಮುಖ್ಯವಾಗಿ ದಿವ್ಯತ್ರಯರಾದ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಹಾಗೂ ಶಾರದಾದೇವಿ ಅವರ ವಿಚಾರಗಳಿಂದ ಸಮನ್ವಿತವಾದ ಬರಹಗಳಿವು. ಪಕ್ವ ಅಹಂ- ಅಪಕ್ವ ಅಹಂ, ಅಹಂನ ಅಂತ್ಯ- ಜ್ಞಾನದ ಉದಯ, ಧಾರಣಿಯ ನಡಿಗೆಯಲ್ಲಿ ಮೇರುವಿನ ಗುರಿಯಿರಲಿ, ಮತಿ ಬಿಟ್ಟ ಮನ ಕುರುಡು, ಆಚಾರ- ವಿಚಾರ- ವ್ಯವಹಾರ, ಬಿಟ್ಟಿ ಸಲಹೆಗಾರರ ಬಗ್ಗೆ ಎಚ್ಚರವಿರಲಿ, ಮಕ್ಕಳ ಶಿಕ್ಷಣ ಹಾಗೂ ಪೋಷಣೆಯಲ್ಲಿ ತಂದೆ- ತಾಯಿ ಪಾತ್ರ, ವೃತ್ತಿಪರ ಶಿಕ್ಷಣ- ವ್ಯಕ್ತಿಪರ ಶಿಕ್ಷಣ, ಗುರುವಿನ ಕರುಣೆ, ಕಷ್ಟ ಕಹಿ ಎನಿಸುವುದು ಏಕೆ?, ಆಡುವ ಮಾತು ಗಂಟು- ನಂಟು ಎರಡನ್ನೂ ಉಳಿಸುವಂತಿರಬೇಕು, ನಿಜವಾದ ಸುಖಿ ಯಾರು?, ವಯಸ್ಸು- ಆಯಸ್ಸು- ಮನಸ್ಸು, ಅಭ್ಯಾಸ- ಅನುರಾಗ- ವ್ಯಾಕುಲತೆ- ಸಾಧನೆಯ ಕಿಲಿಕೈ, ಭಾರತೀಯ ಸಂಸ್ಕೃತಿಯಲ್ಲಿ ಜಾನಪದ ವೈವಿಧ್ಯ, ಜೀವನ ಜೋಕಾಲಿಃ ನಡೆದಂತೆ, ನಡೆಸಿದಂತೆ, ಸಂಸ್ಕೃತಿಯ ನೆಲೆಯಲ್ಲಿ ಭಾಷೆ- ಸಾಹಿತ್ಯದ ಪಾತ್ರ, ಭ್ರಮಾಲೋಕ, ಪದಗಳಿಗೆ ಹೊಸ ಅರ್ಥ ತುಂಬಿದ ವಿವೇಕಾನಂದ, ಪುಟ್ಟ ಹುಡುಗ ಪುಟ್ಟ ಹುಡುಗನೇ ಪುಟ್ಟ ಹುಡುಗಿ ಪುಟ್ಟ ಹೆಣ್ಣು..., ಗ್ರಾಮೀಣ ವಿದ್ಯಾರ್ಥಿಗಳ ಸಮಸ್ಯೆಗಳು, ವೃದ್ಧಾಪ್ಯದ ಬದುಕು- ಬವಣೆ, ಶ್ರೀಗಳ ಕನಸುಗಾರಿಕೆ ಮತ್ತು ವೈಜ್ಞಾನಿಕತೆ, ಕುವೆಂಪು- ಒಂದು ಸವಿನೆನಪು, ಮೊಂಡುತನಕ್ಕೆ ಭಂಡತನವೇ ಮದ್ದು, ಜೀವಂತ ದುರ್ಗಾಪೂಜೆ, ನಿವೇದಿತಾ ದೃಷ್ಟಿಯಲ್ಲಿ ಶ್ರೀಮಾತೆ- ಇವು ಈ ಸಂಕಲನದಲ್ಲಿರುವ ಲೇಖನಗಳು.ಇವು ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಜಾನಪದ, ಸಾಂಸ್ಕೃತಿಕ ಎಲ್ಲಾ ಆಯಾಮಗಳನ್ನು ಒಳಗೊಂಡಿವೆ.ಜಾನಪದ ವಿದ್ವಾಂಸರಾದ ಡಾ.ಡಿ.ಕೆ. ರಾಜೇಂದ್ರ ಅವರು ಲಲಿತ ಪ್ರಬಂಧಗಳನ್ನು ಬರೆಯುವಲ್ಲಿ ಸಿದ್ಧಹಸ್ತರು. ಅವರ ಭಾಷಾ ಶೈಲಿ ಸರಳ ಹಾಗೂ ಸುಂದರ. ಅಲ್ಲಲ್ಲಿ ದಿವ್ಯತ್ರಯರ ಮಾತುಗಳು, ಸಿದ್ದರಾಮೇಶ್ವರ ವಚನ, ಡಿವಿಜಿಯವರ ಮಂಕುತಿಮ್ಮನ ಕಗ್ಗ, ಶುಭೋದಯದ ಚೆನ್ನುಡಿ, ಗಾದೆಗಳು, ತಾವು ಎಂದೋ ಎಲ್ಲೋ ಓದಿದ ಕವನಗಳ ಸಾಲುಗಳನ್ನು ಬಳಸಿ ಲೇಖನಗಳಿಗೆ ಮೆರಗು ನೀಡಿದ್ದಾರೆ. ಅವರ ಎಷ್ಟೊಂದು ಸ್ವಾರಸ್ಯಕರವಾಗಿ ಬರೆಯಬಲ್ಲರು ಎಂಬುದಕ್ಕೆ ಬಿಟ್ಟಿ ಸಲಹೆಗಾರರ ಬಗ್ಗೆ ಎಚ್ಚರವಿರಲಿ.,.ಎಂಬ ಲೇಖನವೇ ನಿದರ್ಶನ. ಇದಲ್ಲದೇ ಎಷ್ಟೊಂದು ಗಂಭೀರವಾಗಿ ಆಲೋಚಿಸಬಲ್ಲರು ಎಂಬುದಕ್ಕೆ ಮಕ್ಕಳ ಶಿಕ್ಷಣ ಹಾಗೂ ಪೋಷಣೆಯಲ್ಲಿ ತಂದೆ- ತಾಯಿ ಪಾತ್ರ. ವೃತ್ತಿಪರ- ವ್ಯಕ್ತಿಪರ ಶಿಕ್ಷಣ ಲೇಖನಗಳನ್ನು ಉದಾಹರಿಸಬಹುದು. ಇಲ್ಲಿರುವ ಎಲ್ಲಾ ಲೇಖನಗಳು ಕೂಡ ವಿವೇಕ ಮೂಡಿಸುತ್ತವೆ.ಈ ಕೃತಿಯನ್ನು ಶ್ರುತಿ ಪ್ರಕಾಶನ ಪ್ರಕಟಿಸಿದೆ. ಆಸಕ್ತರು ಮೊ. 98860 26085 ಸಂಪರ್ಕಿಸಬಹುದು.