ಚಿತ್ತವಿರುವ ಚಿತ್ರಕಾರ ಅದ್ಭುತ ಕಲೆ ಸೃಷ್ಟಿಸಬಲ್ಲ: ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ

| Published : Feb 03 2025, 12:31 AM IST

ಚಿತ್ತವಿರುವ ಚಿತ್ರಕಾರ ಅದ್ಭುತ ಕಲೆ ಸೃಷ್ಟಿಸಬಲ್ಲ: ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿತ್ತವಿರುವ ಚಿತ್ರಕಾರ ಅದ್ಭುತ ಕಲೆಯನ್ನು ಸೃಷ್ಟಿಸಬಲ್ಲ. ಜೊತೆಗೆ ಸಾಧನೆಯತ್ತ ಸಾಗಬಲ್ಲ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಹಾವೇರಿ: ಚಿತ್ತವಿರುವ ಚಿತ್ರಕಾರ ಅದ್ಭುತ ಕಲೆಯನ್ನು ಸೃಷ್ಟಿಸಬಲ್ಲ. ಜೊತೆಗೆ ಸಾಧನೆಯತ್ತ ಸಾಗಬಲ್ಲ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಗೆಳೆಯರ ಬಳಗದ ಶಾಲಾ ಆವರಣದಲ್ಲಿ ಸಾಹಿತಿ ಕಲಾವಿದರ ಬಳಗ ಹಾಗೂ ಹಂಚಿನಮನಿ ಆರ್ಟ್ ಗ್ಯಾಲರಿ ಸಹಯೋಗದಲ್ಲಿ ನಡೆದ ಸಾಧಕರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿ, ಚಿತ್ತ ಮತ್ತು ಚಿತ್ರ ಕಲಾವಿದನ ಪ್ರತಿಭೆಯನ್ನು ಒರೆಗೆ ಹಚ್ಚುತ್ತದೆ. ಚಿತ್ತದಿಂದ ಚಿತ್ರಿಸಿದ ಚಿತ್ರಗಳು ಕಲಾ ಜಗತ್ತಿನಲ್ಲಿ ಸದಾ ಅಗ್ರ ಸ್ಥಾನ ಪಡೆಯುತ್ತವೆ. ಸಮಚಿತ್ತದಿಂದ ಕಲೆಯನ್ನು ಅರಳಿಸಿ ಸಮಾಜದಲ್ಲಿ ಗೌರವ ಪಡೆದಿರುವ ಜಿಲ್ಲೆಯ ಸಾಧಕರು ಅಭಿನಂದನಾರ್ಹರು. ಇದು ಜಿಲ್ಲೆಯ ಜನತೆಗೆ ಸಂದ ಗೌರವವೂ ಹೌದು ಎಂದರು.ಲಲಿತ ಕಲಾ ಅಕಾಡೆಮಿ ಸದಸ್ಯ ಕರಿಯಪ್ಪ ಹಂಚಿನಮನಿ ಮಾತನಾಡಿ, ಶಿಲ್ಪ ಕಲಾ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ಮೂವರು ಕಲಾವಿದರು ಸಮಾಜದ ಬೇರೆ ಬೇರೆ ನೆಲೆಗಟ್ಟಿನಿಂದ ಬಂದವರು. ಬದುಕಿನ ಅನಿವಾರ್ಯತೆಯಲ್ಲಿ ಸೃಷ್ಟಿಯಾದ ಪ್ರತಿಭೆಗಳು. ಶಿಲ್ಪ ಕಲಾ ಇತಿಹಾಸದಲ್ಲಿ ಒಂದೇ ಬಾರಿ ಮೂವರು ಪ್ರಶಸ್ತಿಗೆ ಭಾಜನರಾಗಿರುವುದು ದಾಖಲೆಯೂ ಕೂಡ. ಇಂಥವರನ್ನು ಸನ್ಮಾನಿಸಿ, ಗೌರವಿಸುವುದು ನಮ್ಮ ಪಾಲಿನ ಅಭಿಮಾನ ಎಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಉತ್ಸವ ರಾಕ್ ಗಾರ್ಡನ್ ಮುಖ್ಯಸ್ಥೆ ವೇದಾರಾಣಿ ದಾಸನೂರ, ಸೃಜನಶೀಲ ಪ್ರಬುದ್ಧ ಮನಸ್ಸುಗಳ ಮಧ್ಯ ಗೌರವ ಪಡೆದಿರುವುದು ಧನ್ಯತೆ ಮೂಡಿಸಿದೆ. ಇದೊಂದು ಭಾವಪೂರ್ಣ ಗಳಿಗೆ. ಸಮಕಾಲೀನ ಕಲಾ ಸ್ಪಂದನೆಗೆ ಸಿಕ್ಕ ಗೌರವ ನಮ್ಮ ಹೊಣೆಗಾರಿಕೆಯನ್ನು ಹೆಚ್ಚಿಸಿದೆ ಎಂದರು.ಡಾ.ಗೌತಮ ಲೋಡಾಯಾ, ಪರಿಮಳಾ ಜೈನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ವೇದಾರಾಣಿ ದಾಸನೂರ, ಶಿಲ್ಪ ಕಲಾ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾದ ಮಾನಪ್ಪ ಬಡಿಗೇರ, ಮರಿಯಪ್ಪ ಹೊನ್ನಮ್ಮನವರ, ವಿನ್ಯಾಸ ಕಾಟೇನಹಳ್ಳಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಚಂದ್ರಶೇಖರ ಮಾಳಗಿ, ಶಿವಲಿಂಗೇಶ್ವರ ಬೆನ್ನೂರ, ಗೂಳಪ್ಪ ಅರಳಿಕಟ್ಟಿ, ನೇತ್ರಾವತಿ ಅಂಗಡಿ ಸಾಧಕರನ್ನು ಪರಿಚಯಿಸಿದರು.ಕಾರ್ಯಕ್ರಮದಲ್ಲಿ ಕುಮಾರ ಕಾಟೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ದಾಸನೂರ, ವಿ.ಎಂ.ಪತ್ರಿ, ವಿ.ಪಿ. ದ್ಯಾಮಣ್ಣವರ, ಚಂದ್ರಶೇಖರ ಸಿಸನಳ್ಳಿ, ಸಿ.ಎಸ್. ಮರಳಿಹಳ್ಳಿ, ವಿರೂಪಾಕ್ಷ ಹಾವನೂರ, ಶೇಖಣ್ಣ ಕಳ್ಳಿಮನಿ, ಮಾಲತೇಶ ಅಂಗೂರ, ಜಿ.ಎಂ. ಓಂಕಾರಣ್ಣನವರ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ಉಮಾ ಹೊರಡಿ, ನಾಗರಾಜ ನಡುವಿನಮಠ, ಲಿಂಗರಾಜ ಸೊಟ್ಟಪ್ಪನವರ, ಉಮಾ ಹೊರಡಿ, ಶಂಕರ ತುಮ್ಮಣ್ಣನವರ, ಬಸವರಾಜ ಭೋವಿ ಇದ್ದರು.

ಪೃಥ್ವಿರಾಜ ಬೆಟಗೇರಿ ನಿರೂಪಿಸಿದರು. ಚಂದ್ರಪ್ಪ ಸನದಿ ಸ್ವಾಗತಿಸಿದರು. ಶಿವಾನಂದ ಅಣ್ಣಿಗೇರಿ ವಂದಿಸಿದರು.