ಮೈಲಾಂಡಹಳ್ಳಿಯಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಶಾಸಕ ಕೊತ್ತೂರು ಮಂಜುನಾಥ್

ಕನ್ನಡಪ್ರಭ ವಾರ್ತೆ ಕೋಲಾರ

ಜಾತಿ ಎಂಬುದು ಸಮಾಜದ ಅಭಿವೃದ್ಧಿಗೆ ಅಡ್ಡಿಯಾಗಿದ್ದು, ಎಲ್ಲರೂ ಅಂಬೇಡ್ಕರ್ ತೋರಿದ ಸಮಾನತೆ ಮತ್ತು ಮಾನವೀಯತೆಯ ಮಾರ್ಗದಲ್ಲಿ ಸಾಗಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ತಾಲೂಕಿನ ವಕ್ಕಲೇರಿ ಹೋಬಳಿಯ ಮೈಲಾಂಡಹಳ್ಳಿಯಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ, ೫ ಕೋಟಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗಳ ಉದ್ಘಾಟನೆ ಹಾಗೂ ಹಿರಿಯ ದಲಿತ ಮುಖಂಡ ಸಿಎಂ ಮುನಿಯಪ್ಪರ ಕಾಲಡಿಯ ಕಣ್ಣು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಂಬೇಡ್ಕರ್ ಹೆಸರು ಹೇಳಲಿಕ್ಕೂ ಅಂತಹ ಮಹಾನ್ ಚೇತನದ ಮುಂದೆ ನಿಲ್ಲಲಿಕ್ಕೂ ನಮಗೆ ಅರ್ಹತೆ ಇಲ್ಲ ಅವರ ಹೋರಾಟ ನಮಾಜದ ಶೋಷಿತರ ಪರವಾಗಿತ್ತು ಅವರ ವಿಚಾರಧಾರೆ ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಊರಲ್ಲಿ ಎಲ್ಲರಿಗೂ ಒಂದೇ ನೀರು, ಆಸ್ಪತ್ರೆಯಲ್ಲಿ ಎಲ್ಲರಿಗೂ ಒಂದೇ ರಕ್ತ. ಆದರೆ ಬದುಕಿನಲ್ಲಿ ಜಾತಿ ಕಟ್ಟಿಕೊಂಡಿದ್ದೇವೆ. ಅದು ನಿರ್ಮೂಲನೆಯಾದಾಗ ಮಾತ್ರ ದೇಶ ಉದ್ದಾರವಾಗುತ್ತದೆ. ಅಂಬೇಡ್ಕರ್‌ರ ತತ್ವ, ಶಿಕ್ಷಣ ಮತ್ತು ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಅನೇಕರು ಸಾಧನೆ ಮಾಡಿದ್ದಾರೆ ಅಂತಹ ಶಾಲೆಗಳನ್ನು ಉಳಿಸಿ ಪೋತ್ಸಾಹಿಸಬೇಕು ಎಂದರು

ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, "ಅಂಬೇಡ್ಕರ್‌ರ ಸಂವಿಧಾನವೇ ದೇಶದ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಜಾತಿ, ಧರ್ಮ, ಭಾಷೆ ಭೇದವಿದ್ದರೂ ಎಲ್ಲರೂ ಒಂದೇ ಎಂಬ ಭಾವನೆ ಸಂವಿಧಾನ ಬೆಳೆಸಿದೆ. ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ನ್ಯಾಯ ಒದಗಿಸಿದ ಮಹಾನ್ ವ್ಯಕ್ತಿ. ಕೋಲಾರದಲ್ಲಿ ಅಂಬೇಡ್ಕರ್ ಇತಿಹಾಸ ಪರಿಚಯಿಸಲು ಐದು ಎಕರೆ ಪ್ರದೇಶದಲ್ಲಿ ಮ್ಯೂಸಿಯಂ, ಗ್ರಂಥಾಲಯ ಹಾಗೂ ಒಂದು ಸಾವಿರ ಆಸನಗಳ ಆಡಿಟೋರಿಯಂ ನಿರ್ಮಾಣಕ್ಕೆ ಸರ್ಕಾರವು ಜಾಗ ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಇದಕ್ಕಾಗಿ ಒಂದು ಕೋಟಿ ರು. ಅನುದಾನ ಬಿಡುಗಡೆ ಮಾಡುತ್ತೇನೆ ಎಂದರು

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಎಸ್‌ಟಿ ಘಟಕದ ಜಿಲ್ಲಾ ಅಧ್ಯಕ್ಷ ಅಂಬರೀಷ್, ಗ್ರಾಪಂ ಮಾಜಿ ಅಧ್ಯಕ್ಷ ವಕ್ಕಲೇರಿ ರಾಜಪ್ಪ, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಆರ್.ಮೋಹನ್ ರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ವೇಮಗಲ್-ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಅಗ್ರಹಾರ ಚೌಡರೆಡ್ಡಿ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ರಾಪಂ ಮಾಜಿ ಅಧ್ಯಕ್ಷರಾದ ವಕ್ಕಲೇರಿ ಲೋಕೇಶ್, ಪೆಮ್ಮಶೆಟ್ಟಿಹಳ್ಳಿ ಸುರೇಶ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಗ್ರಾಪಂ ಮಾಜಿ ಸದಸ್ಯೆ ಚನ್ನಮ್ಮ, ಸವಿತಮ್ಮ, ಮುಖಂಡರಾದ ವಕ್ಕಲೇರಿ ಇನಾಯತ್, ಮೇಡಿಹಾಳ ಮುನಿಅಂಜಿನಪ್ಪ, ಚಿಕ್ಕಅಯ್ಯೂರು ರವೀಂದ್ರನಾಥ್, ಲಕ್ಷ್ಮೀಸಾಗರ ಸುನಿಲ್ ಕುಮಾರ್, ತಿರುಮಲಕೊಪ್ಪ ಆನಂದ್, ಲಕ್ಷ್ಮೀಪುರ ಲೋಕೇಶ್, ಕೋಟೆ ಶ್ರೀನಿವಾಸ್, ರಾಜಕಲ್ಲಹಳ್ಳಿ ಶ್ರೀನಿವಾಸ್, ಚೊಕ್ಕಪುರ ಚೌಡಪ್ಪ, ವೀರೇಂದ್ರ ಪಾಟೀಲ್, ನದೀಂ ಬೇಗ್, ಚಿನ್ನಾಪುರ ನಾರಾಯಣಸ್ವಾಮಿ, ಮುದುವತ್ತಿ ಕೃಷ್ಣಪ್ಪ ಇದ್ದರು.