ಸಾರಾಂಶ
ಸರ್ಕಾರ ನೀಡುವ ಪೌಷ್ಟಿಕ ಆಹಾರವನ್ನು ಬಾಣಂತಿಯರಿಗೆ ತಲುಪಿಸುವ ಮೂಲಕ ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ಸಮರ್ಪಿಸುವ ಹೊಣೆಗಾರಿಕೆ ಅಂಗನವಾಡಿ ಸಿಬ್ಬಂದಿ ಮೇಲಿದೆ.
ಮುಂಡಗೋಡ: ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ ಮಾಡುವ ಕೆಲಸದಲ್ಲಿ ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿರುತ್ತದೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ ಅಣವೇಕರ ತಿಳಿಸಿದರು.
ಪಟ್ಟಣದ ನಗರಸಭಾ ಭವನದಲ್ಲಿ ಸಂಪೂರ್ಣತಾ ಅಭಿಯಾನ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾವಿಧಿ ಬೋಧಿಸಿ ಬಳಿಕ ಮಾತನಾಡಿದರು. ಸರ್ಕಾರ ನೀಡುವ ಪೌಷ್ಟಿಕ ಆಹಾರವನ್ನು ಬಾಣಂತಿಯರಿಗೆ ತಲುಪಿಸುವ ಮೂಲಕ ಆರೋಗ್ಯವಂತ ಮಕ್ಕಳನ್ನು ಸಮಾಜಕ್ಕೆ ಸಮರ್ಪಿಸುವ ಹೊಣೆಗಾರಿಕೆ ಅಂಗನವಾಡಿ ಸಿಬ್ಬಂದಿ ಮೇಲಿದೆ. ನಾವು ಮಾಡಿದ ಉತ್ತಮ ಕೆಲಸದ ಬಗ್ಗೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿದರೆ ಮಾತ್ರ ಕೇಂದ್ರ ನೀತಿ ಆಯೋಗದ ಗಮನಕ್ಕೆ ಬರುತ್ತದೆ ಎಂದರು.ಕೇಂದ್ರ ನೀತಿ ಆಯೋಗದ ಸೆಕ್ಷೆನ್ ಅಧಿಕಾರಿ ರಿಷಬ್ ಜೈನ್ ಉದ್ಘಾಟಿಸಿ ಮಾತನಾಡಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಾಮು ಬಯಲುಸೀಮೆ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ, ಗ್ರಾಮೀಣ ಕುಡಿಯುವ ನೀರು ಯೋಜನೆ ಅಧಿಕಾರಿ ರಾಜೇಶ್ವರಿ ಕದಂ, ಆರೋಗ್ಯಾಧಿಕಾರಿ ಭರತ, ಪಾಳಾ ಗ್ರಾಪಂ ಅಧ್ಯಕ್ಷ ಚಂದ್ರಗೌಡ ಶಿವನಗೌಡರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ರಫೀಕ ಮೀರಾ ನಾಯಕ, ತಾಪಂ ಗ್ರಾ.ಉ. ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ, ಚಿಗಳ್ಳಿ, ಮಳಗಿ, ಕೋಡಂಬಿ, ನಂದಿಕಟ್ಟಾ, ಹುನಗುಂದ, ಇಂದೂರ, ಗುಂಜಾವತಿ, ಚವಡಳ್ಳಿ ಗ್ರಾಪಂ ಅಧ್ಯಕ್ಷರು ಉಪಸ್ಥಿತರಿದ್ದರು.