ಸಾರಾಂಶ
ಕುಂದುರುಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯದೊಂದಿಗೆ ನಡೆಯಿತು.
ಮಡಿಕೇರಿ : ಇಂದಿರಾನಗರದ ಕುಂದುರುಮೊಟ್ಟೆ ಶ್ರೀ ಮಾರಿಯಮ್ಮ ದೇವಾಲಯದ 135ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ವಾರ್ಷಿಕೋತ್ಸವದ ಅಂಗವಾಗಿ ನಗರದ ಮುಖ್ಯ ಬೀದಿಗಳಲ್ಲಿ ದೇವಿಯ ಮೆರವಣಿಗೆ ನಡೆಯಿತು. ರಾತ್ರಿ ಹೂವಿನ ವರ ಬೇಡುವುದು, ಮಹಿಳೆಯರು ಮನೆ, ಮನೆಯಿಂದ ಆರತಿಯನ್ನು ದೇವಾಲಯಕ್ಕೆ ತಂದೊಪ್ಪಿಸಿದರು. ದೇವಿಗೆ ಮಹಾ ಮಂಗಳಾರತಿ ಮತ್ತು ಮಹಾಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಿತು.ಬಳಿಕ ಶ್ರೀ ದೇವಿಗೆ ಹರಕೆ ಮತ್ತು ಕಾಣಿಕೆ ಒಪ್ಪಿಸಲಾಯಿತು. ಇದೇ ಸಂದರ್ಭ ನೆರೆದಿದ್ದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.