ನೀಲಕಂಠೇಶ್ವರ ದೇವಸ್ಥಾನದ ವಾರ್ಷಿಕೋತ್ಸವ

| Published : Feb 05 2024, 01:51 AM IST

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯ ಕುರುಹಿನಶೆಟ್ಟಿ ಸಮಾಜದ ನೀಲಕಂಠೇಶ್ವರ ದೇವಸ್ಥಾನದ ೩೧ನೇ ವಾರ್ಷಿಕೋತ್ಸವ ಸಮಾರಂಭ ಭಾನುವಾರ ನಡೆಯಿತು.

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿಯ ಕುರುಹಿನಶೆಟ್ಟಿ ಸಮಾಜದ ನೀಲಕಂಠೇಶ್ವರ ದೇವಸ್ಥಾನದ ೩೧ನೇ ವಾರ್ಷಿಕೋತ್ಸವ ಸಮಾರಂಭ ಭಾನುವಾರ ನಡೆಯಿತು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಸಾಹಿತಿ ಗುರುರಾಜ ಹೊಸಕೋಟಿ ಕಾರ್ಯಕ್ರಮ ಉದ್ಘಾಟಿಸಿ ಶಿಗ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಊರು. ಅದರಂತೆ ನೇಕಾರಿಕೆಗೂ ಬಹಳ ಪ್ರಸಿದ್ಧ. ನಮ್ಮ ಕುರುಹಿನಶೆಟ್ಟಿ ಸಮಾಜದವರು ನೇಕಾರಿಕೆಯನ್ನೇ ನೆಚ್ಚಿಕೊಂಡವರು. ಆದರೆ ಈಚಿನ ದಿನಗಳಲ್ಲಿ ನೇಕಾರಿಕೆಗೆ ಬೆಲೆಯೇ ಇಲ್ಲದಂತಾಗಿದೆ. ಕಾರಣ ಸರ್ಕಾರ ನೇಕಾರರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಬೇಕು ಎಂದರು.

ನೇಕಾರರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ನಾನು ೧೯೮೦ರ ದಶಕದಲ್ಲಿ ಲಕ್ಷ್ಮೇಶ್ವರ ಭಾಗದಲ್ಲಿ ಜಾನಪದ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಇಲ್ಲಿನ ಜನ ಕಲಾಪ್ರೇಮಿಗಳು ಎಂದರು.ಹೂವಿನಶಿಗ್ಲಿ ವಿರಕ್ತಮಠದ ಚೆನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನೀಲಕಂಠೇಶ್ವರ ಕ್ಷೇಮಾಭಿವೃದ್ಧಿ ವಿವಿಧೋದ್ದೇಶಗಳ ಸಂಘದ ಅಧ್ಯಕ್ಷ ಈರಣ್ಣ ನವಲಗುಂದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಡಾ. ಚಂದ್ರು ಲಮಾಣಿ, ಬಸವರಾಜ ಮುಂಡರಗಿ, ಮಹಾದೇವಪ್ಪ ಬೆಳವಗಿ, ವೀರೇಶ ನೂಲ್ವಿ, ವೀರಣ್ಣ ಪವಾಡದ, ಸೂಗೀರಪ್ಪ ಹಲಗೋಡದ, ಪ್ರಭು ನೂಲ್ವಿ. ಅಶೋಕ ಜಾಲಿಹಾಳ, ನಿವೃತ್ತ ಶಿಕ್ಷಕ ರಬಕವಿ, ಮಂಜುನಾಥ ತೆವರಿ ಸೇರಿದಂತೆ ಮತ್ತಿತರರು ಇದ್ದರು. ಇದೇ ಸಂದರ್ಭದಲ್ಲಿ ಶಾಸಕ ಡಾ. ಚಂದ್ರು ಲಮಾಣಿ, ಲೋಕಾಯುಕ್ತ ಎಸ್‌ಪಿ ಶಂಕರ ರಾಗಿ, ಅರಣ್ಯಾಧಿಕಾರಿ ಮಂಜುನಾಥ ನಾವಿ, ಸಿಪಿಐ ವಿಶ್ವನಾಥ ಘಂಟಾಮಠ, ಡಾ. ಪ್ರಭಾಕರ ಶಿರಹಟ್ಟಿ, ನಿವೃತ್ತ ಶಿಕ್ಷಕ ಎಂ.ಕೆ. ಮಾದನಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಹಲಗೋಡದ ಸ್ವಾಗತಿಸಿ, ನಿರೂಪಿಸಿದರು. ದೇವರಾಜ ಅಣ್ಣಿಗೇರಿ ವಂದಿಸಿದರು.