ಸ್ಕಾಲ್‌ ಇಂಟರ್‌ ನ್ಯಾಷನಲ್ ಮೈಸೂರುಗೆ ನೂತನ ಪದಾಧಿಕಾರಿಗಳ ನೇಮಕ

| Published : May 08 2024, 01:07 AM IST

ಸ್ಕಾಲ್‌ ಇಂಟರ್‌ ನ್ಯಾಷನಲ್ ಮೈಸೂರುಗೆ ನೂತನ ಪದಾಧಿಕಾರಿಗಳ ನೇಮಕ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಯಾಗಬೇಕಿದೆ. ಸ್ಕಾಲ್‌ ಅಧ್ಯಕ್ಷನಾಗಿ ಇನ್ನು ಮುಂದೆ ಮೈಸೂರಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ

ಫೋಟೋ- 7ಎಂವೈಎಸ್40

----

ಕನ್ನಡಪ್ರಭ ವಾರ್ತೆ ಮೈಸೂರು

ನಗರದಲ್ಲಿ ನಡೆದ ಸ್ಕಾಲ್‌ ಇಂಟರ್‌ನ್ಯಾಷನಲ್‌ ಮೈಸೂರು ವಿಭಾಗದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸಿ.ಎ. ಜಯಕುಮಾರ್‌, ಕಾರ್ಯದರ್ಶಿಯಾಗಿ ನಾಗೇಶ್‌, ಉಪಾಧ್ಯಕ್ಷರಾಗಿ ಎಸ್.ಜೆ. ಅಶೋಕ್‌, ಖಜಾಂಚಿಯಾಗಿ ಸಮರ್ಥ್‌ ವೈದ್ಯ ಹಾಗೂ ಪಿಆರ್‌ ಡೈರೆಕ್ಟರ್‌ ಆಗಿ ಧಾತ್ರಿ ಭಾರದ್ವಾಜ್‌ ಆಯ್ಕೆಯಾದರು.

ಈ ವೇಳೆ ನೂತನ ಅಧ್ಯಕ್ಷ ಸಿ.ಎ. ಜಯಕುಮಾರ್‌ ಮಾತನಾಡಿ, ಮೈಸೂರು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಯಾಗಬೇಕಿದೆ. ಸ್ಕಾಲ್‌ ಅಧ್ಯಕ್ಷನಾಗಿ ಇನ್ನು ಮುಂದೆ ಮೈಸೂರಿನ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವಲ್ಲಿ ಕಾರ್ಯಪ್ರವೃತ್ತನಾಗುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಸ್ಕಾಲ್‌ ಇಂಟರ್‌ನ್ಯಾಷನಲ್‌ ಮೈಸೂರು ವಿಭಾಗದ ಮಾಜಿ ಅಧ್ಯಕ್ಷ ಬಿ.ಎಸ್‌. ಪ್ರಶಾಂತ್‌ ಮಾತನಾಡಿ, ಈ ಎರಡು ವರ್ಷಗಳಲ್ಲಿ ಸ್ಕಾಲ್‌ ವತಿಯಿಂದ ಮೈಸೂರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಕಳೆದ ವರ್ಷ ಮೈಸೂರಿನಲ್ಲಿ ನಡೆದ ಸ್ಕಾಲ್‌ ಇಂಡಿಯಾ ಕಾಂಗ್ರೆಸ್‌ ಯಶಸ್ವಿಯಾಗಿದ್ದನ್ನು ಸ್ಮರಿಸುತ್ತೇನೆ. ಇನ್ನು ಮುಂದೆ ಕಾರ್ಯ ನಿರ್ವಹಿಸುವ ತಂಡಕ್ಕೂ ನನ್ನ ಸಂಪೂರ್ಣ ಸಹಕಾರ ಇದೆ ಎಂದರು.

ಈ ವೇಳೆ ಸ್ಕಾಲ್‌ ಇಂಟರ್‌ ನ್ಯಾಷನಲ್‌ ಬೆಂಗಳೂರು ವಿಭಾಗದ ಪದಾಧಿಕಾರಿಗಳಾದ ಸುದೀಪ್ತಾ ದೇಬ್‌, ಅಯ್ಯಪ್ಪ ಸೋಮಯ್ಯ, ಮಣಿಮೇಗಲೈ ಹಾಗೂ ಮೈಸೂರು ವಿಭಾಗದ ಸದಸ್ಯರು ಇದ್ದರು.