ಹಳೆಯಂಗಡಿ: ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ

| Published : Sep 02 2024, 02:04 AM IST

ಹಳೆಯಂಗಡಿ: ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸತತ ಆರನೇ ಬಾರಿಗೆ ಜಿಲ್ಲಾ ಪ್ರೋತ್ಸಾಹಕರ ಪ್ರಶಸ್ತಿ ಪಡೆದ ಪಡುಪಣಂಬೂರು ವ್ಯವಸಾಯ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷರಾದ ಸತೀಶ್ ಭಟ್ ಅವರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಲ್ಕಿ

ಸಂಘದ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಅಗತ್ಯವಾಗಿದ್ದು ಮುಂದಿನ ದಿನಗಳಲ್ಲಿ ಸುಮಾರು 3 ಕೋಟಿ ಬಂಡವಾಳದ ಮೂಲಕ ಸಂಘಕ್ಕೆ ನೂತನ ಕಟ್ಟಡ ನಿರ್ಮಾಣದ ಯೋಜನೆ ಇದೆ ಎಂದು ಹಳೆಯಂಗಡಿಯ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಎಸ್. ಎಸ್. ಸತೀಶ್ ಭಟ್ ಹೇಳಿದರು.

ಹಳೆಯಂಗಡಿಯ ಎಚ್. ನಾರಾಯಣ ಸನಿಲ್ ಸಭಾಭವನದಲ್ಲಿ ನಡೆದ ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ 2023-2 4ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸತತ ಆರನೇ ಬಾರಿಗೆ ಜಿಲ್ಲಾ ಪ್ರೋತ್ಸಾಹಕರ ಪ್ರಶಸ್ತಿ ಪಡೆದ ಪಡುಪಣಂಬೂರು ವ್ಯವಸಾಯ ಸಹಕಾರಿ ಸಂಘದ ಪರವಾಗಿ ಅಧ್ಯಕ್ಷರಾದ ಸತೀಶ್ ಭಟ್ ಅವರನ್ನು ಗೌರವಿಸಲಾಯಿತು ಹಾಗೂ ಸಂಘದ ಸದಸ್ಯರಿಗೆ ಶೇ. 19 ಡಿವಿಡೆಂಡ್‌ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ಶ್ಯಾಮ್ ಪ್ರಸಾದ್, ನಿರ್ದೇಶಕರಾದ ವಸಂತ್ ಬೆರ್ನಾಡ್, ವಿನೋದ್ ಕುಮಾರ್ ಬೊಳ್ಳೂರು, ಗೀತಾ ಆರ್. ಶೆಟ್ಟಿ, ಯೋಗೀಶ್ ಪಾವಂಜೆ, ಮೀರಾ ಬಾಯಿ,ಕೆ, ರೋಹಿಣಿ ಬಿ. ಶೆಟ್ಟಿ, ಅಶೋಕ್ ಬಂಗೇರ, ಮುಖೇಶ್ ಸುವರ್ಣ, ದಿವ್ಯ, ಶಂಕರ, ರಾಜೇಶ್ ಎಸ್.ದಾಸ್, ಕಿರಣ್ ಶೆಟ್ಟಿ, ಕಾರ್ಯನಿರ್ವಾಹಣಾಧಿಕಾರಿ ಹಿಮಕರ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯನಿರ್ವಣಾಧಿಕಾರಿ ಹಿಮಕರ್ ಸ್ವಾಗತಿಸಿದರು. ಉಪಕಾರ್ಯದರ್ಶಿ ಶ್ರೀಕಾಂತಿ ವಂದಿಸಿದರು.