ಮಾಲೂರಿನಲ್ಲಿ ಮತ್ತೇ 1600 ಎಕರೆ ಕೆಡಿಬಿ ವಶಕ್ಕೆ

| Published : Dec 08 2024, 01:17 AM IST

ಸಾರಾಂಶ

ಈಗಾಗಲೇ ತಾಲೂಕಿನ ಎರಡು ಕೈಗಾರಿಕಾ ಪ್ರಾಗಾಂಣದಲ್ಲಿ ಮೂನ್ನೂರು ಕ್ಕೂ ಹೆಚ್ಚು ಕೈಗಾರಿಕೆ ಸ್ಥಾಪನೆಯಾಗಿದೆ.ಈಗ ಕೆಡಿಬಿ ಸಂಸ್ಥೆಯು ತಾಲೂಕಿನಲ್ಲಿ 1600 ಎಕರೆ ಜಮೀನನ್ನು ಕೈಗಾರಿಕಾ ವಲಯ ಸೃಷ್ಟಿಸಲು ಮುಂದಾಗಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮಾಲೂರು

ತಾಲೂಕಿನಲ್ಲಿ ಕೆಡಿಬಿ ಮತ್ತೇ 1600 ಎಕರೆ ಜಮೀನನ್ನು ಕೈಗಾರಿಕೆಗಳಿಗಾಗಿ ಗುರ್ತಿಸಿದ್ದು, ಮಾಲೂರು ತಾಲೂಕು ರಾಜ್ಯದ ಪ್ರಮುಖ ಕೈಗಾರಿಕಾ ಹಬ್‌ ಆಗುವುದರಲ್ಲಿ ಸಂಶಯ ಇಲ್ಲ ಎಂದು ಶಾಸಕ ನಂಜೇಗೌಡ ಹೇಳಿದರು.

ಅವರು ತಾಲೂಕಿನ ಶಿವಾರಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಕರಿನಾಯಕನಹಳ್ಳಿ ಗ್ರಾಮದಲ್ಲಿ ಹೋಂಡಾ ಬೈಕ್‌ ಕಂಪನಿ ತನ್ನ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಗ್ರಾಮದಲ್ಲಿ ನಿರ್ಮಿಸಲಾದ ಒಳಚರಂಡಿ ಸಂಸ್ಕರಣಾ ಘಟಕ ಹಾಗೂ ಶಿವಾರಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಇನ್ನೊಂದು ಕೈಗಾರಿಕಾ ವಲಯ

ಈಗಾಗಲೇ ತಾಲೂಕಿನ ಎರಡು ಕೈಗಾರಿಕಾ ಪ್ರಾಗಾಂಣದಲ್ಲಿ ಮೂನ್ನೂರು ಕ್ಕೂ ಹೆಚ್ಚು ಕೈಗಾರಿಕೆ ಸ್ಥಾಪನೆಯಾಗಿದೆ.ಈಗ ಕೆಡಿಬಿ ಸಂಸ್ಥೆಯು ತಾಲೂಕಿನಲ್ಲಿ 1600 ಎಕರೆ ಜಮೀನನ್ನು ಕೈಗಾರಿಕಾ ವಲಯ ಸೃಷ್ಟಿಸಲು ಮುಂದಾಗಿದೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ತಾಲೂಕಿಗೆ ಬಂದಿರುವ ಕೈಗಾರಿಕ ಸಂಸ್ಥೆಗಳ ಸಹ ತಮ್ಮ ಹೊಣೆಗಾರಿಕೆಯನ್ನು ಉತ್ತಮವಾಗಿ ನಿರ್ವಹಿಸುತ್ತಿದೆ ಎಂದರು.

ಕೋಟ್ಯಂತರ ರು.ಗಳ ಬಂಡವಾಳ ಹಾಕಿರುವ ಕೈಗಾರಿಕೆಗಳನ್ನು ಉಳಿಸಿಕೊಳ್ಳಲು ಬೇಕಾದ ಸಹಕಾರ ನೀಡಲಾಗುತ್ತಿದೆ. ಕೈಗಾರಿಕೆಗಳಿಗೆ ಸಹಕಾರ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಕೈಗಾರಿಕಾ ವಲಯ ಇರುವ ಡಾಬಸ್‌ ಪೇಟೆಯಿಂದ ಮಾಲೂರು ಕೈಗಾರಿಕಾ ಪ್ರದೇಶಗಳ ಮೂಲಕ ತಮಿಳು ನಾಡನ್ನು ಸಂಪರ್ಕಕ್ಕಾಗಿ ನಾಲ್ಕು ಪಥದ ರಸ್ತೆ ನಿರ್ಮಾಣವಾಗಲಿದೆ ಎಂದರು.

₹ 3190 ಕೋಟಿ ಮಂಜೂರು

ಈ ಯೋಜನೆಯಡಿ ಮಾಲೂರು ಪಟ್ಟಣದಲ್ಲಿ 3.5 ಕಿ.ಮೀ.ಸೇರಿದಂತೆ ಕರಿನಾಯಕಹಳ್ಳಿ ಯಿಂದ ಪಟ್ಟಣದ ಹೊಸೂರು ರಸ್ತೆಯ ಕೈಗಾರಿಕಾ ಪ್ರದೇಶದ ನಾಲ್ಕು ಕಡೆ ಮೇಲ್ಸೇತುವೆ ನಿರ್ಮಾಣವಾಗಲಿದೆ. ಭೂಮಿ ವಶ ಸೇರಿದಂತೆ ತಾಲೂಕಿನಲ್ಲಿ ಈ ಯೋಜನೆಯಡಿ ನಡೆಯುವ ಕಾಮಗಾರಿಗೆ ಸರ್ಕಾರವು 3190 ಕೋಟಿ ರು.ಮಂಜೂರು ಮಾಡಲಿದೆ ಎಂದರು.

ಹೋಂಡ ಕಂಪನಿ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಯಾಗಿ 25 ವರ್ಷವಾಗಿದೆ. ಯಾವುದೇ ರಾಜ್ಯ ಸರ್ಕಾರ ಮಾಡಲಾಗದ ಜನೋಪಯೋಗಿ ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ಹಮ್ಮಿಕೊಂಡಿದೆ. ಸಾವಿರಾರು ಸಂಖ್ಯೆಯಲ್ಲಿ ಉದೋಗ್ಯ ಸೃಷಿಸುತ್ತಿರುವ ಹೋಂಡಾ ಕಂಪನಿ ಕಾರ್ಮಿಕರೇ ಹೆಚ್ಚಾಗಿರುವ ಕರಿನಾಯಕನಹಳ್ಳಿ ಗ್ರಾಮದಲ್ಲಿ ಒಳ ಚರಂಡಿ ನೀರು ಸಂಸ್ಕರಣ ಘಟಕ ಸ್ಥಾಪಿಸುತ್ತಿರುವುದು ಕೈಗಾರಿಕಾ ಕಂಪನಿಗಳಲ್ಲೇ ಮಾದರಿಯಾಗಿದೆ ಎಂದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಶ್‌ ಗೌಡ, ಪಂಚಾಯ್ತಿ ಅಧ್ಯಕ್ಷ ಮುನೇಗೌಡ, ಹೋಂಡ ಕಂಪನಿಯ ಆಡಳಿತ ಮಂಡಳಿಯ ಅಧಿಕಾರಿಗಳು ಇನ್ನಿತರರು ಇದ್ದರು.