ವಿದೇಶಿ ಶಕ್ತಿಗಳ ಸಹಾಯದಿಂದ ದೇಶ ವಿರೋಧಿ ಚಟುವಟಿಕೆ

| Published : Nov 12 2025, 02:15 AM IST

ವಿದೇಶಿ ಶಕ್ತಿಗಳ ಸಹಾಯದಿಂದ ದೇಶ ವಿರೋಧಿ ಚಟುವಟಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯಲ್ಲಿ ಕಾರು ಬ್ಲಾಸ್ಟ್ ಮಾಡಿದವರನ್ನು ಸರ್ಕಾರ‌ ಬಂಧಿಸುತ್ತಿದೆ. ಇದರಲ್ಲಿ ಒಂದು ಸಮಾಜದ ಪ್ರಮುಖರ ಪಾತ್ರ ಇರುವ ಶಂಕೆ ಇದೆ. ದೇಶದ್ರೋಹಿ ಕಾರ್ಯಗಳಿಗೆ ಪ್ರಯತ್ನಗಳು ನಡೆದಾಗ ಈ ಬಗ್ಗೆ ಗೊತ್ತಿರುವ ಆಯಾ ಸಮಾಜದ ಪ್ರಮುಖರು ಪೊಲೀಸರಿಗೆ ಮಾಹಿತಿ ನೀಡಬೇಕು.

ಧಾರವಾಡ:

ವಿದೇಶಿ ಶಕ್ತಿಗಳ ಸಹಾಯದಿಂದ ಭಾರತದಲ್ಲಿ ದೇಶ ವಿರೋಧಿ ಚಟುವಟಿಕೆಗಳು ನಡೆಯುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ದೆಹಲಿಯಲ್ಲಿ ಕಾರು ಸ್ಫೋಟ ಸಂಬಂಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರು ಬ್ಲಾಸ್ಟ್ ಮಾಡಿದವರನ್ನು ಸರ್ಕಾರ‌ ಬಂಧಿಸುತ್ತಿದೆ. ಇದರಲ್ಲಿ ಒಂದು ಸಮಾಜದ ಪ್ರಮುಖರ ಪಾತ್ರ ಇರುವ ಶಂಕೆ ಇದೆ. ದೇಶದ್ರೋಹಿ ಕಾರ್ಯಗಳಿಗೆ ಪ್ರಯತ್ನಗಳು ನಡೆದಾಗ ಈ ಬಗ್ಗೆ ಗೊತ್ತಿರುವ ಆಯಾ ಸಮಾಜದ ಪ್ರಮುಖರು ಪೊಲೀಸರಿಗೆ ಮಾಹಿತಿ ನೀಡಬೇಕು. ದೇಶ ವಿರೋಧಿ ಕೆಲಸ ಮಾಡುವವರನ್ನು ಹಿಡಿದು ಕೊಡುವ ಜವಾಬ್ದಾರಿ ಕೂಡ ಅವರ ಮೇಲಿರುತ್ತದೆ ಎಂದರು.

ಇದೊಂದು ವ್ಯವಸ್ಥಿತ ಸಂಚು:

ಯಾರು ದಾರಿ ತಪ್ಪಿದ್ದಾರೆ ಮತ್ತು ಯಾರು ದಾರಿ‌ ತಪ್ಪಿಸುತ್ತಿದ್ದಾರೆ ಎಂದು‌ ಗೊತ್ತಿದೆ. ಗುಜರಾತ್, ‌ಕಾಶ್ಮೀರ್‌ ಮತ್ತು ದೆಹಲಿಯಲ್ಲಿ ಈ ರೀತಿ ಅಹಿತಕರ ಘಟನೆಗಳಾಗುತ್ತಿವೆ. ಇದು‌ ವ್ಯವಸ್ಥಿತ ಸಂಚು. ಆದ್ದರಿಂದ ನಮ್ಮ ದೇಶದ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕಿದೆ. ಕೇವಲ ಎಬಿ‌ಸಿಡಿ ಕಲಿಸಿದರೆ ವ್ಯಕ್ತಿತ್ವ‌ ನಿರ್ಮಾಣ ಆಗುವುದಿಲ್ಲ. ಪ್ರತಿಯೊಬ್ಬರಿಗೂ ಗೌರವ ನೀಡುವುದು, ಎಲ್ಲ ಧರ್ಮಗಳ ಬಗ್ಗೆಯೂ ಗೌರವ ಇಟ್ಟಿಕೊಳ್ಳುವುದು ಸಹ ಮುಖ್ಯ. ನಮ್ಮ ರಾಷ್ಟ್ರ, ರಾಜ್ಯ ಮತ್ತು ತಮ್ಮೂರುಗಳ ಬಗ್ಗೆ ಪ್ರೀತಿ‌-ಪ್ರೇಮ ಬೆಳೆಸುವುದನ್ನು ಶಿಕ್ಷಣದ ಮೂಲಕ ಕಲಿಸಬೇಕು. ದೇಶ ಭಕ್ತಿ ಹೆಚ್ಚು ಮಾಡುವಂತಹ ಪಾಠಗಳನ್ನು ಪಠ್ಯದಲ್ಲಿ ಅಳವಡಿಸಬೇಕು. ಈ‌ ರೀತಿ ತಪ್ಪು ಆದಾಗ ತಕ್ಷಣ ಅವರ ಮೇಲೆ ಕ್ರಮ ಆಗಬೇಕು ಎಂದರು.ಪರಪ್ಪನ ಅಗ್ರಹಾರದಲ್ಲಿ ನಡೆದಿರುವ ತಪ್ಪುಗಳ ಬಗ್ಗೆ ಹೊರ ಜಗತ್ತಿಗೆ ತೋರಿಸಿದವರ ಮೇಲೆ ಕ್ರಮಕೈಗೊಳ್ಳುವುದು ಯಾವ ನ್ಯಾಯ? ಆಡಳಿತದಲ್ಲಿ ನಡೆಯತ್ತಿರುವ ಭ್ರಷ್ಟಾಚಾರ ಹೊರ ತಂದ ವ್ಯಕ್ತಿಗೆ ಕಿರುಕುಳ ನೀಡುವುದು ಸರಿಯಲ್ಲ. ಸಾಮಾನ್ಯವಾಗಿ ಕಾರಾಗೃಹಗಳಲ್ಲಿ ಏನೆಲ್ಲಾ ವಸ್ತುಗಳು ಹೋಗುತ್ತಿದ್ದು, ಈ ಬಗ್ಗೆ ಪೊಲೀಸ್‌ ಇಲಾಖೆ ಕ್ರಮಕೈಗೊಳ್ಳಬೇಕು. ಅದನ್ನು ಬಿಟ್ಟು ವೀಡಿಯೋ ಹರಿಬಿಟ್ಟವನ ಮೇಲೆ ಕ್ರಮ ಅಗತ್ಯ ಇರಲಿಲ್ಲ. ಬದಲಿಗೆ ಆತನನ್ನು ಸನ್ಮಾನ ಮಾಡಬೇಕು.

ಅರವಿಂದ ಬೆಲ್ಲದ, ವಿಧಾನಸಭಾ ವಿಪಕ್ಷ ಉಪನಾಯಕ