7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಮನವಿ

| Published : Jul 14 2024, 01:34 AM IST

ಸಾರಾಂಶ

7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸುವಂತೆ ಆಗ್ರಹಿಸಿ ರಾಜ್ಯ ಹಿರಿಯ ನಾಗರಿಕರ ಸಂಘದ ತಾಲೂಕು ಘಟಕದಿಂದ ಖಾನಾಫುರ ತಹಸೀಲ್ದಾರ್‌ರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಖಾನಾಪುರ

ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 7ನೇ ವೇತನ ಆಯೋಗದ ಶಿಫಾರಸ್‌ನ್ನು ಕೂಡಲೇ ಜಾರಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘದ ತಾಲೂಕು ಘಟಕದಿಂದ ಶುಕ್ರವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್‌ರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವಿ.ಎಂ.ಬನೋಶಿ, ಈಗಾಗಲೇ ಸರ್ಕಾರ ವೇತನ ಆಯೋಗದ ವರದಿ ಜಾರಿಗೊಳಿಸುವುದಾಗಿ ರಾಜ್ಯ ನೌಕರರ ಸಂಘಕ್ಕೆ ಭರವಸೆ ನೀಡಿದ್ದಾರೆ. ಆದರೆ, ಇದುವರೆಗೆ ಜಾರಿ ಮಾಡಿಲ್ಲ. ಇದರಿಂದ ನೌಕರರು ಹಾಗೂ ಪಿಂಚಣಿದಾರರು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ 2024ರ ಏಪ್ರಿಲ್ 1ರಿಂದ ಪೂರ್ವಾನ್ವಯವಾಗುವಂತೆ ಶಿಫಾರಸ್‌ನ್ನು ಜಾರಿಗೊಳಿಸಬೇಕೆಂದು ಕೋರಿದರು.

ಸಂಘದ ಕಾರ್ಯದರ್ಶಿ ಸಿ.ಎಸ್.ಪವಾರ, ಪದಾಧಿಕಾರಿಗಳಾದ ಅಬಾಸಾಹೇಬ ದಳವಿ, ಎಂ.ಜಿ.ಬೆನಕಟ್ಟಿ, ಪ್ರಕಾಶ ಕಾದ್ರೋಳ್ಳಿ, ಉಮಾ ಅಂಗಡಿ, ಉಮಾಕಾಂತ ವಾಘಧರೆ, ಎ.ಆರ್.ಬಾಳಗಪ್ಪನವರ ಮತ್ತಿತರರು ಉಪಸ್ಥಿತರಿದ್ದರು.