ಸಾರಾಂಶ
ತಾಲೂಕಿನ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗುರುವಾರ ಶಿರಸ್ತೇದಾರ ಎ.ಎಚ್.ಬಳೂರಗಿ ಅವರಿಗೆ ಮನವಿ ಸಲ್ಲಿಸಿದರು.
ಬಸವನಬಾಗೇವಾಡಿ: ತಾಲೂಕಿನ ಸರ್ಕಾರಿ ಕಚೇರಿಗಳ ಕೆಲಸದ ಸಮಯ ಬದಲಾವಣೆ ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಗುರುವಾರ ಶಿರಸ್ತೇದಾರ ಎ.ಎಚ್.ಬಳೂರಗಿ ಅವರಿಗೆ ಮನವಿ ಸಲ್ಲಿಸಿದರು.
ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮುಂಬರುವ ದಿನಗಳಲ್ಲಿ ತಾಪಮಾನ 50 ಡಿಗ್ರಿ ತಲುಪುವ ಸಾಧ್ಯತೆ ಇದೆ. ಸಾರ್ವಜನಿಕರು ಮಧ್ಯಾಹ್ನದ ಅವಧಿಯಲ್ಲಿ ಕಚೇರಿಗಳಿಗೆ ಬರಲು ಹಾಗೂ ಸರ್ಕಾರಿ ನೌಕರರು ಮಧ್ಯಾಹ್ನದ ಅವಧಿಯಲ್ಲಿ ಕರ್ತವ್ಯ ನಿರ್ವಹಿಸುವದು ಕಷ್ಟವಾಗುವುದು. ಕಾರಣ ಏ.1 ರಿಂದ ಮೇ.31ರ ವರೆಗೆ ಕಚೇರಿಯ ಸಮಯವನ್ನು ಬೆಳಗ್ಗೆ 7.30ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಬದಲಾವಣೆ ಮಾಡಿ ಸರ್ಕಾರ ಆದೇಶ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮಂಗಾನವರ, ಮನೋಜಕುಮಾರ ಪಾಟೀಲ, ಸಿದ್ದು ಉಕ್ಕಲಿ, ಸಂತೋಷ ಕುಂಟೋಜಿ, ಎಸ್.ಡಿ.ದೊಡಮನಿ, ಗುರುರಾಜ ದಡಗಿ, ಪಿ.ಟಿ.ಲಮಾಣಿ, ಶಂಕರ ತಳವಾರ, ವಿ.ಜಿ.ನಿಂಬಾಳ, ಬಿ.ಜಿ.ದಾನಿ, ಆರ್.ಪಿ.ಮಠ, ಎ.ಜೆ.ಪಾಟೀಲ, ಎಸ್.ಎಂ.ಇಬ್ರಾಹಿಂಪುರ, ಶರಣಮ್ಮ ನಾಗರಾಳ, ಸುಧಾ ಪಟ್ನದ, ಎ.ಟಿ.ತೆನಹಳ್ಳಿ ಇತರರು ಇದ್ದರು.