ಬಸ್ ಡಿಪೋ ಆರಂಭಕ್ಕೆ ರೈತ ಸಂಘ ಸಚಿವರಿಗೆ ಮನವಿ

| Published : Oct 10 2024, 02:23 AM IST

ಸಾರಾಂಶ

Appeal to Farmer Union Minister for starting bus depot

ಹಿರಿಯೂರು: ನೂತನವಾಗಿ ನಿರ್ಮಾಣಗೊಂಡಿರುವ ಕೆಎಸ್ ಆರ್ ಟಿಸಿ ಬಸ್ ಡಿಪೋವನ್ನು ಶೀಘ್ರ ಉದ್ಘಾಟನೆ ಮಾಡಿ ತಾಲೂಕಿನ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಿ ಎಂದು ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಮನವಿ ಮಾಡಿದರು.

ಈಗಾಗಲೇ ಕೆಎಸ್ ಆರ್ ಟಿ ಸಿ ಬಸ್ ಡಿಪೋ ಕಾಮಗಾರಿ ಮುಗಿದಿದ್ದು ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಗ್ರಾಮಾoತರ ಸಾರಿಗೆ ವ್ಯವಸ್ಥೆ ಕಲ್ಪಿಸಿ ಹಿರಿಯೂರಿನಿಂದ ರಾಜ್ಯ ಹಾಗೂ ಅಂತರ ರಾಜ್ಯಕ್ಕೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ರೈತ ಮುಖಂಡರು ಸಚಿವರನ್ನು ಒತ್ತಾಯಿಸಿದರು. ರೈತರ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಡಿಪೋ ಕಾಮಗಾರಿ ಮುಗಿದಿದ್ದು ಪೆಟ್ರೋಲ್ ಬಂಕ್ ಕಾಮಗಾರಿ ನಡೆಯುತ್ತಿದೆ ಎಂದು ಉತ್ತರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ ಸಿ. ಹೊರಕೇರಪ್ಪ, ತಾಲೂಕು ಅಧ್ಯಕ್ಷ ಬಿಒ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಂ ಲಕ್ಷ್ಮೀಕಾಂತ್, ತಾಲೂಕು ಉಪಾಧ್ಯಕ್ಷ ಮೇಟಿಕುರ್ಕೆ ತಿಪ್ಪೇಸ್ವಾಮಿ , ತಾಲೂಕು ಯುವ ಘಟಕದ ಅಧ್ಯಕ್ಷ ಯಳನಾಡು ಚೇತನ್ ಹಾಜರಿದ್ದರು.

-----

ಫೋಟೊ: ತಾಲೂಕಿನಲ್ಲಿ ನಿರ್ಮಾಣಗೊಂಡಿರುವ ಬಸ್ ಡಿಪೋವನ್ನು ಶೀಘ್ರ ಉದ್ಘಾಟಿಸಿ ಎಂದು ಸಾರಿಗೆ ಸಚಿವರಿಗೆ ರೈತ ಸಂಘದವರು ಮನವಿ ಮಾಡಿದರು.