ಸಾರಾಂಶ
ಪಟ್ಟಣ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಹಾಗೂ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮಹಿಳಾ ಘಟಕದಿಂದ ಮಂಗಳವಾರ ತಹಸೀಲ್ದಾರ್ ವೈ.ರವಿ ಹಾಗೂ ಪಾವಗಡ ವೃತ್ತ ಇನ್ಸ್‌ಪೆಕ್ಟರ್ ಸುರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಪಾವಗಡ ಪಟ್ಟಣ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ಸರಣಿ ಕಳ್ಳತನ ಹಾಗೂ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮಾನವ ಹಕ್ಕುಗಳ ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಮಹಿಳಾ ಘಟಕದಿಂದ ಮಂಗಳವಾರ ತಹಸೀಲ್ದಾರ್ ವೈ.ರವಿ ಹಾಗೂ ಪಾವಗಡ ವೃತ್ತ ಇನ್ಸ್‌ಪೆಕ್ಟರ್ ಸುರೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.ಇತ್ತೀಚೆಗೆ ಯುವಕರು ಹಾಗೂ ಸಾರ್ವಜನಿಕರು ದ್ವಿಚಕ್ರ ವಾಹನ ಚಲಾಯಿಸುವ ವೇಳೆ ಅಪಘಾತಗಳಿಗೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಇದರ ಜತೆಗೆ ಯುವಕರು ಮದ್ಯಪಾನ ಸೇರಿದಂತೆ ಇತರೆ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಸಂಘಟನೆ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿ ಪ್ರತಿ ಸೋಮವಾರ ಅಡ್ಡದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುತ್ತಿದ್ದು ಮಾಹಿತಿ ಇದ್ದರೂ ತಡೆಗಟ್ಟಿ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ಎಪಿಎಂಸಿ ಕಾರ್ಯದರ್ಶಿ ಅಸಕ್ತಿ ವಹಿಸುತ್ತಿಲ್ಲ.ಅಪಘಾತ ಹೆಚ್ಚುತ್ತಿರುವ ಪರಿಣಾಮ ಸೂಕ್ತ ಕ್ರಮ ಕೈಗೊಳ್ಳಬೇಕು. ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಸರಣಿ ಕಳ್ಳತನ ಹೆಚ್ಚಾಗುತ್ತಿದ್ದು ಜನ ಭಯಾಭೀತರಾಗಿದ್ದಾರೆ.ಇದೇ ವೇಳೆ ಸಮಾಜ ಸೇವಕ ಇರ್ಮಾನ್ ಉಲ್ಲಾ, ಪರಮೇಶ್, ಗೋವಿಂದಪ್ಪ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ನಾಗಮಣಿ, ಶಶಿಕಲಾ, ನೇತ್ರಾವತಿ, ಶೃತಿ ಕೀರ್ತಿ, ರಮ್ಯಾ, ಶೋಭರಾಣಿ, ನಾಗಲಕ್ಷ್ಮಿ, ನೇತ್ರ ಇತರರಿದ್ದರು.