ಗ್ರಾಮದ ಅಕ್ರಮ ಮದ್ಯ ಮಾರಾಟಗಾರರು ಎಂದಿನಂತೆ ತಮ್ಮ ದಿನನಿತ್ಯದ ವ್ಯಾಪಾರ ಮುಂದುವರಿಸಿದ್ದು, ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ರೋಣ: ತಾಲೂಕಿನ ಮಾಡಲಗೇರಿ ಗ್ರಾಮಸ್ಥರು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ಅಬಕಾರಿ ನಿರೀಕ್ಷಕಿ ಶ್ರೀದೇವಿ ಕೊಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಕೆಲವು ದಿನಗಳ ಹಿಂದೆ ಗ್ರಾಮದ ಪುರುಷರು ಹಾಗೂ ಮಹಿಳೆಯರು ರೋಣ ತಾಲೂಕಿನ ಅಬಕಾರಿ ಕಚೇರಿ ಹಾಗೂ ತಹಸೀಲ್ದಾರ್ ಕಾರ್ಯಾಲಯ, ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಿ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದರಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರು.

ಮನವಿ ಸ್ವೀಕರಿಸಿದ ಮರುದಿನ ಗ್ರಾಮದ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ್ದ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡದಂತೆ ತಾಕೀತು ಮಾಡಿದ್ದರು. ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಗ್ರಾಮದ ಅಕ್ರಮ ಮದ್ಯ ಮಾರಾಟಗಾರರು ಎಂದಿನಂತೆ ತಮ್ಮ ದಿನನಿತ್ಯದ ವ್ಯಾಪಾರ ಮುಂದುವರಿಸಿದ್ದು, ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಗ್ರಾಮದ ಪ್ರಮುಖರಾದ ಮಹಾದೇವಪ್ಪ ಭಾವಿ, ಬಸನಗೌಡ ಬಾಳನಗೌಡ್ರ, ಶಿವಾನಂದ ಭಾವಿ, ಶಂಕರಗೌಡ ಹಿರೇಸಕ್ಕರಗೌಡ್ರ, ಹನುಮವ್ವ ಭೀಮನಗೌಡ್ರ, ಶಂಕ್ರವ್ವ ಶಿರಗುಂಪಿ, ರತ್ನವ್ವ ಮಂಡಸೊಪ್ಪಿ, ಯಲ್ಲವ್ವ ರಾಯನಗೌಡ್ರ, ಶಂಕ್ರವ್ವ ರಾಯನಗೌಡ್ರ, ಭೀಮವ್ವ ಭಾವಿ, ಶೇಖವ್ವ ಪಾಟೀಲ, ಶಿವಗಂಗವ್ವ ಭೀಮನಗೌಡ್ರ, ಶಂಕ್ರವ್ವ ಹಿರೇಸಕ್ಕರಗೌಡ್ರ, ಲಲಿತಾ ಹಿರೇಸಕ್ಕರಗೌಡ್ರ, ಶಂಕ್ರವ್ವ ಬಾಲನಗೌಡ್ರ ಸೇರಿದಂತೆ ಇತರರು ಇದ್ದರು. ಇಂದು ಗುರುವಂದನಾ ಕಾರ್ಯಕ್ರಮ

ನರಗುಂದ: ತಾಲೂಕಿನ ಶಿರೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2002ನೇ ಸಾಲಿನಲ್ಲಿ ಎಸ್ಎಸ್ಎಲ್‌ಸಿ ವ್ಯಾಸಂಗ ಮುಗಿಸಿದ ವಿದ್ಯಾರ್ಥಿಗಳು ಜ. 10ರಂದು ಬೆಳಗ್ಗೆ 9 ಗಂಟೆಗೆ ಗುರುವಂದನಾ ಕಾರ್ಯಕ್ರಮ ಆಯೋಜಿಸಿದ್ದಾರೆ.ಸಾನ್ನಿಧ್ಯವನ್ನು ಭೈರನಹಟ್ಟಿಯ ಶಾಂತಲಿಂಗ ಶ್ರೀಗಳು ಹಾಗೂ ಅಭಿನವ ಯಚ್ಚರ ಶ್ರೀಗಳು ವಹಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ ವಿ.ಕೆ. ಮರಿಗುದ್ದಿ, ಎಚ್.ವೈ. ಯಂಡಿಗೇರಿ, ವಿ.ಸಿ. ಸಾಲಿಮಠ, ಎಸ್.ಪಿ. ಬೀಡಿಕರ, ಎಸ್.ಎನ್. ತಿರಕನಗೌಡ್ರ, ಆರ್.ಎಲ್. ಪಾಟೀಲ, ಉಪನ್ಯಾಸಕ ಪ್ರಭಾಕರ ಉಳ್ಳಾಗಡ್ಡಿ ಹಾಗೂ ನಿವೃತ್ತ ಶಿಕ್ಷಕರು, ಶಿಕ್ಷಕಿಯರು ಭಾಗವಹಿಸುವರೆಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.