ವಿದ್ಯುತ್ ಖಾಸಗೀಕರಣ ವಿರೋಧಿಸಿ ಭಾರತೀಯ ಕೃಷಿ ಕಾರ್ಮಿಕರ ರೈತ ಸಂಘಟನೆ ವತಿಯಿಂದ ಹಿರೇಕೆರೂರ ತಹಸೀಲ್ದಾರ್ ಎಂ. ರೇಣುಕಾ ಅವರಿಗೆ ಮನವಿ ಸಲ್ಲಿಸಲಾಯಿತು.
ಹಿರೇಕೆರೂರು: ವಿದ್ಯುತ್ ಖಾಸಗೀಕರಣ ವಿರೋಧಿಸಿ ಭಾರತೀಯ ಕೃಷಿ ಕಾರ್ಮಿಕರ ರೈತ ಸಂಘಟನೆ ವತಿಯಿಂದ ಹಿರೇಕೆರೂರ ತಹಸೀಲ್ದಾರ್ ಎಂ. ರೇಣುಕಾ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಭಾರತೀಯ ಕೃಷಿ ಕಾರ್ಮಿಕರ ರೈತ ಸಂಘಟನೆ ರಾಜ್ಯ ಕಾರ್ಯದರ್ಶಿ ರಾಜಶೇಖರ ದೂದಿಹಳ್ಳಿ ಮಾತನಾಡಿ, ವಿದ್ಯುತ್ ಖಾಸಗೀಕರಣವಾದರೆ ರೈತರಿಗೆ ನೀರಾವರಿ ಮಾಡುವುದು ಕಷ್ಟವಾಗುತ್ತದೆ. ಮನೆಗೆ ವಿದ್ಯುತ್ ತೆಗೆದುಕೊಳ್ಳುವುದು ಸಹ ಕಷ್ಟವಾಗುತ್ತದೆ. ವಿದ್ಯುತ್ ಪಡೆಯಬೇಕೆಂದರೆ ಅಡ್ವಾನ್ಸ್ ಹಣ ಕಟ್ಟಬೇಕಾಗುತ್ತದೆ. ಹಣ ಮುಗಿದ ತಕ್ಷಣ ನಮ್ಮ ಮನೆಯ ದೀಪಗಳು, ಹೊಲದಲ್ಲಿ ಬೋರ್‌ವಲ್‌ಗಳು ಬಂದ್ ಆಗುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣವಾಗಬಾರದು. ಟಾಟಾ ಪವರ್ ಕಂಪನಿ ಲಿಮಿಟೆಡ್ ನವರು ವಿದ್ಯುತ್ ಸರಬರಾಜು ಮಾಡಲು ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು. ಸರ್ಕಾರ ರೈತರ ಮನವಿಯನ್ನು ನಿರ್ಲಕ್ಷಿಸಿದರೆ ರಾಜ್ಯ ರೈತ ಸಂಘಗಳ ಸಮಿತಿಯ ನೇತೃತ್ವದಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ, ಮಲ್ಲನಗೌಡ ಪಾಟೀಲ, ಶಿವಾನಂದ ಜಾಡರ, ಮರಿಗೌಡ ಮರಿಗೌಡ್ರ, ಜಾಪರ್ ಹಿತ್ತಲಮನಿ, ಶಿವನಗೌಡ ಪಾಟೀಲ್, ವಿಜಯಕುಮಾರ ಕೋಣನತಲ್ಲಿ, ಹನುಮಂತಪ್ಪ ಶಿರಗಂಭಿ, ಬಸವರಾಜ ಬಣಕಾರ, ಕುಮಾರ ಗವಿಯಪ್ಪನವರ, ದೇವೇಂದ್ರಪ್ಪ ಜಾಡರ, ಶಿದ್ದನಗೌಡ ಕರೇಗೌಡ್ರ, ಸಾವಿತ್ರಾ ಜಾಡರ್, ವಿಜಯ ಮುದಿಗೌಡ್ರ, ಪ್ರವೀಣ ಬಣಕಾರ, ಎಫ್.ಆರ್. ಪಾಟೀಲ್, ಹನುಮಂತಪ್ಪ ನಡುವಿನಮನಿ ಹಾಗೂ ರೈತ ಮುಖಂಡರು ಇದ್ದರು.