ಸಾರಾಂಶ
ನಗರದಲ್ಲಿ ರೋಟರಿ ಕ್ಲಬ್ ಬೀದರ್ ಹಾಗೂ ಇನ್ನರ್ ವ್ಹೀಲ್ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ, ಬೀದರ್
2024-25ನೇ ಸಾಲಿಗೆ ರೋಟರಿ ಕ್ಲಬ್ ಬೀದರ್ ನೂತನ ಅಧ್ಯಕ್ಷರಾಗಿ ಸೋಮಶೇಖರ ಪಾಟೀಲ್, ಕಾರ್ಯದರ್ಶಿಯಾಗಿ ಕೃಪಾಸಿಂಧು ಪಾಟೀಲ್, ಇನ್ನರ್ ವ್ಹೀಲ್ ಕ್ಲಬ್ ನೂತನ ಅಧ್ಯಕ್ಷೆಯಾಗಿ ಕವಿತಾ ಪ್ರಭ ಹಾಗೂ ಕಾರ್ಯದರ್ಶಿಯಾಗಿ ಶೀಲಾ ಮಾಳಗೆ ಅಧಿಕಾರ ಸ್ವೀಕರಿಸಿದರು.ಇದೇ ವೇಳೆ ಕೇಕ್ ಕತ್ತರಿಸಿ ರೋಟೆರಿಯನ್‌ಗಳಾದ ವೇಣುಗೋಪಾಲ್ ಲೋಯ ಹಾಗೂ ಸಂತೋಷಕುಮಾರ ತಾಳಂಪಳ್ಳಿ ಅವರ ಜನ್ಮದಿನ ಆಚರಿಸಲಾಯಿತು.
ತಾಳಂಪಳ್ಳಿ ಅವರು ವಿಕಲಚೇತನರಿಗೆ ತ್ರಿಚಕ್ರ ಸೈಕಲ್, ಬೈಸಿಕಲ್, ವಯೋವೃದ್ಧರಿಗೆ ಸೊಂಟದ ಬೆಲ್ಟ್, ಕತ್ತಿನ ಬೆಲ್ಟ್, ವಾಕಿಂಗ್ ಸ್ಟಿಕ್, ಅಡ್ಜಸ್ಟೇಬಲ್ ವಾಕರ್ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಿತರಿಸಿದರು.ಈ ವೇಳೆ ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಸಿ.ಎ. ಸಾಧುಗೋಪಾಲಕೃಷ್ಣ, ನಿಕಟಪೂರ್ವ ಗವರ್ನರ್ ಚಿನ್ನಪ್ಪ ರೆಡ್ಡಿ, ಕಲ್ಯಾಣ ವಿಭಾಗದ ಅಸಿಸ್ಟಂಟ್ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಪದಗ್ರಹಣ ಅಧಿಕಾರಿಗಳಾದ ಅನೀಲಕುಮಾರ ಔರಾದೆ, ಸುರೇಖಾ ಶೇರಿಕಾರ್, ರೋಟರಿ ಕ್ಲಬ್ ಬೀದರ್ ನಿಕಟಪೂರ್ವ ಅಧ್ಯಕ್ಷ ಚಂದ್ರಕಾಂತ ಕಾಡಾದಿ, ಇನ್ನರ್ ವ್ಹೀಲ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಅನಿತಾ ಚಿಂತಾಮಣಿ, ರೋಟೆರಿಯನ್‌ಗಳಾದ ಹಾವಶೆಟ್ಟಿ ಪಾಟೀಲ್, ರವೀಂದ್ರ ಮೂಲಗೆ, ಸುರೇಖಾ ಶೇರಿಕಾರ್, ಶಿವಶಂಕರ ಕಾಮಶೆಟ್ಟಿ ಮತ್ತಿತರರು ಇದ್ದರು.