ರಾಮನಾಥಪುರ: ಶಾಲಾ ಕಾಲೇಜುಗಳಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳವರ ನೆನಪಿನಲ್ಲಿ ವಚನ ಗಾಯನ ಸ್ವರ್ಧೆ, ವಚನ ಪುಸ್ತಕಗಳ ಉಚಿತವಾಗಿ ವಿತರಣೆ, ಶಿವಾನುಭವ ಗೋಷ್ಠಿಗಳ ಮೂಲಕ ಶರಣ ತತ್ವಗಳನ್ನು ಸಮಾಜದಲ್ಲಿ ಬಿತ್ತುವ ಪ್ರಯತ್ನವನ್ನು ಹಾಸನ ಜಿಲ್ಲೆಯ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗ 20 ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದಕ್ಕೆ ಹಿರಿಯ ಸಾಹಿತಿಗಳಾದ ಸೀಬಹಳ್ಳಿ ಸೋಮಶೇಖರ್ ಶ್ಲಾಘಿಸಿದರು.ರಾಮನಾಥಪುರದ ಶ್ರೀ ವಿದ್ಯಾನಿಕೇತನ ಶಾಲೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗ. ಹಾಸನ ಜಿಲ್ಲೆಯಲ್ಲಿ 2006ರಿಂದ ಪ್ರಾರಂಭವಾಗಿದ್ದು ತನ್ನ ಚಟುವಟಿಕೆಗಳಿಂದ ಅದರ ಅಸ್ಮಿತೆಯ ಛಾಪು ಮೂಡಿಸಿದೆ. ಈ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಶರಣ ಎಂ. ಎನ್ ಕುಮಾರಸ್ವಾಮಿಯವರ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಶರಣ ಸಂಸ್ಕೃತಿಯ ಪ್ರಸಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಹಾಸನ ಜಿಲ್ಲೆಯ ನೂರಾರು ಶಾಲೆ ಕಾಲೇಜುಗಳ ಆಡಳಿತ ವರ್ಗದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅವರು, ಯಾವುದೇ ಕಾರ್ಯಕ್ರಮವನ್ನು ಲೀಲಾಜಾಲವಾಗಿ, ತುಂಬಾ ವ್ಯವಸ್ಥಿತವಾಗಿ ಮಾಡುವುದರಲ್ಲಿ ಸಿದ್ಧ ಹಸ್ತರು ಎಂದರು.ವಿದ್ಯಾನಿಕೇತನ ಶಾಲೆ ಸಂಸ್ಥಾಪಕ ಅಧ್ಯಕ್ಷರು ವಿರೂಪಾಕ್ಷ, ಹಾಸನ ಜಿಲ್ಲಾ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗದ ಅಧ್ಯಕ್ಷರು ಎಂ. ಎನ್. ಕುಮಾರಸ್ವಾಮಿ, ಉಪಾಧ್ಯಕ್ಷರು ಹಾಸನ ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಸುತ್ತೂರು ಬಿ. ಆರ್. ಪಂಚಾಕ್ಷರಿ, ಬಳಗದ ಯುವ ಘಟಕದ ಅಧ್ಯಕ್ಷರು ಆರ್. ಕೆ. ಶ್ರೀನಿವಾಸ್, ಸದಸ್ಯರಾರ ಐ.ಬಿ. ಕುಮಾರ್, ಮುಖ್ಯ ಶಿಕ್ಷಕರು ರಾಜಣ್ಣ ಮುಂತಾದವರು ಭಾಗವಹಿಸಿದ್ದರು.
ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗದ ಕಾರ್ಯಕ್ಕೆ ಶ್ಲಾಘನೆ
ರಾಮನಾಥಪುರದ ಶ್ರೀ ವಿದ್ಯಾನಿಕೇತನ ಶಾಲೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಭಕ್ತ ಬಳಗ. ಹಾಸನ ಜಿಲ್ಲೆಯಲ್ಲಿ 2006ರಿಂದ ಪ್ರಾರಂಭವಾಗಿದ್ದು ತನ್ನ ಚಟುವಟಿಕೆಗಳಿಂದ ಅದರ ಅಸ್ಮಿತೆಯ ಛಾಪು ಮೂಡಿಸಿದೆ. ಈ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಶರಣ ಎಂ. ಎನ್ ಕುಮಾರಸ್ವಾಮಿಯವರ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಶರಣ ಸಂಸ್ಕೃತಿಯ ಪ್ರಸಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಹಾಸನ ಜಿಲ್ಲೆಯ ನೂರಾರು ಶಾಲೆ ಕಾಲೇಜುಗಳ ಆಡಳಿತ ವರ್ಗದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಅವರು, ಯಾವುದೇ ಕಾರ್ಯಕ್ರಮವನ್ನು ಲೀಲಾಜಾಲವಾಗಿ, ತುಂಬಾ ವ್ಯವಸ್ಥಿತವಾಗಿ ಮಾಡುವುದರಲ್ಲಿ ಸಿದ್ಧ ಹಸ್ತರು ಎಂದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.