20ರಿಂದ ಚನ್ನಗಿರಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

| Published : Aug 14 2024, 12:46 AM IST

20ರಿಂದ ಚನ್ನಗಿರಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ಮಠದ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದ 242ನೇ ವರ್ಷದ ಆರಾಧನಾ ಮಹೋತ್ಸವ ಆ.20ರಿಂದ 23ರವರೆಗೆ ನಡೆಯಲಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್‌ ಅಧ್ಯಕ್ಷ ಪ.ನ. ಕೃಷ್ಣ ಉಪಾಧ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಮಠದ ಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಸನ್ನಿಧಾನದ 242ನೇ ವರ್ಷದ ಆರಾಧನಾ ಮಹೋತ್ಸವ ಆ.20ರಿಂದ 23ರವರೆಗೆ ನಡೆಯಲಿದೆ ಎಂದು ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಟ್ರಸ್ಟ್‌ ಅಧ್ಯಕ್ಷ ಪ.ನ. ಕೃಷ್ಣ ಉಪಾಧ್ಯ ತಿಳಿಸಿದ್ದಾರೆ.

ಆ.20ರಂದು ರಾಯರ ಪೂರ್ವರಾಧನೆ ನಡೆಯಲಿದೆ. 21ರಂದು ಮಧ್ಯಾರಾಧನೆ, ಕ್ಷೀರಾಭಿಷೇಕ, ಸಂಜೆ 7.30ರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಆ.22ರಂದು ಹೋಮ. ರಥಪುಣ್ಯಾಹ, ದಿಗ್ಬಲಿ ಕಾರ್ಯಕ್ರಮ, ಮಹಾ ಮಂಗಳಾರತಿ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಶ್ರೀ ರಾಯರ ಮಹಾ ರಥೋತ್ಸವ ನಡೆಯುವುದು. ಆಗಸ್ಟ್ 23ರಂದು ಶ್ರೀ ಸುಜ್ಞಾನೇಂದ್ರತೀರ್ಥರ ಆರಾಧನೆ ನಡೆಯುವುದು.

ಆರಾಧನಾ ಕಾಲದ ನಾಲ್ಕು ದಿನಗಳಂದು ಶ್ರೀ ಮಠದಲ್ಲಿ ಭಕ್ತರಿಗೆ ಶ್ರೀ ರಾಯರ ಪಾದಪೂಜೆ ಮಾಡಲು ಅವಕಾಶಗಳಿವೆ. ಈ ಸೇವೆಯು ಬೆಳಗ್ಗೆ 7ರಿಂದ 9.30 ರವರೆಗೆ ನಡೆಯುವುದು. ಶ್ರೀ ಮಠದಲ್ಲಿ ಬೆಳಗ್ಗೆ 10ರಿಂದ ಗುರುರಾಯರಿಗೆ ಕನಕಾಭಿಷೇಕ ಸೇವೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.

- - - (-ಸಾಂದರ್ಭಿಕ ಚಿತ್ರ)