ಸಾರಾಂಶ
ಕನ್ನಡಪ್ರಭ ವಾರ್ತೆ ಗಂಗಾವತಿ
ಇಲ್ಲಿಯ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಕಳೆದ ಮೂರು ದಿನಗಳಿಂದ ಜರುಗಿದ ಶ್ರೀರಾಘವೇಂದ್ರಸ್ವಾಮಿಗಳ 353ನೇ ಆರಾಧನಾ ಮಹೋತ್ಸವ ಸಂಪನ್ನಗೊಂಡಿತು. ಮೂರು ದಿನಗಳಿಂದ ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಶ್ರದ್ಧಾಭಕ್ತಿಯಿಂದ ಜರುಗಿತು.ರಥೋತ್ಸವ:ಶ್ರೀರಾಘವೇಂದ್ರಸ್ವಾಮಿಗಳ ಉತ್ತರಾರಾಧನೆ ನಿಮಿತ್ತ ರಥೋತ್ಸವ ಜರುಗಿತು. ಶ್ರೀಮಠದಿಂದ ಪ್ರಾರಂಭಗೊಂಡ ರಥೋತ್ಸವ ಬಸವಣ್ಣ ವೃತ್ತದಿಂದ ಸುಂಕದ ಕಟ್ಟೆ ಪ್ರಾಣದೇವರ ದೇಗುಲದವರೆಗೂ ಜರುಗಿತು. ವೇದಘೋಷ, ಭಜನೆ, ನೃತ್ಯದೊಂದಿಗೆ ಗಮನ ಸೆಳೆದೆರು. ಈ ಸಂದರ್ಭ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ರಾಮಕೃಷ್ಣ ಜಾಹಗೀರದಾರ, ನವಲಿ ಗುರುರಾಜರಾವ, ವ್ಯವಸ್ಥಾಪಕ ಸಾಮವೇದ ಗುರುರಾಜಚಾರ, ಅಪ್ಪಣ್ಣ ದೇಶಪಾಂಡೆ, ಪ್ರಹ್ಲಾದರಾವ ಹೇರೂರು, ನಗರಸಭಾ ಸದಸ್ಯ ವಾಸುದೇವ ನವಲಿ, ಶ್ಯಾಮಚಾರ ಜೋಶಿ, ಎಚ್.ಕೆ. ಗೋಪಾಲಕೃಷ್ಣ, ವಾಮನಮೂರ್ತಿ, ದಾಸನಾಳ ಶ್ರೀನಿವಾಸ, ಹೇರೂರು ಶ್ರೀನಿವಾಸ, ಮುಕ್ತೆದಾರ ಜಗನ್ನಾಥ, ನ್ಯಾಯವಾದಿ ಅಯೋದ್ಯ ಹನುಮಂತರಾವ, ಗುರುರಾಜ ಅಯೋದ್ಯ, ಲಕ್ಷ್ಮೀಕಾಂತ ಹೇರೂರು, ಸ್ವಾಮಿರಾವ ಹೇರೂರು, ಸುಧೀರ್ ನವಲಿ, ಸತೀಶ ದಂಡಿನ್, ನೀಲಕಂಠ ನಾಗಶೆಟ್ಟಿ, ರಾಜೇಂದ್ರ ನಾಯಕ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಪಲ್ಲಕ್ಕಿ ಉತ್ಸವದೊಂದಿಗೆ ಆರಾಧನೆ ಸಂಪನ್ನ:ಉತ್ತರಾರಾಧನೆಯ ದಿನ ಗುರುವಾರ ಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವ ಎಳೆಯುವ ಮೂಲಕ ಕಾರಟಗಿಯ ಶ್ರೀ ಗುರುರಾಯರ ಮಠದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ರಾಯರ ಮೂರು ದಿನಗಳ ಆರಾಧನೆ ಮಹೋತ್ಸವ ಸಂಪನ್ನಗೊಂಡಿತು.ಶ್ರೀ ಗುರು ರಾಘವೇಂದ್ರಸ್ವಾಮಿಗಳ ಬೃಂದಾವನಕ್ಕೆ ಬೆಳಗ್ಗೆ ಸುಪ್ರಬಾತ ಮತ್ತು ನಿರ್ಮಾಲ್ಯದಿಂದ ದಿನದ ವಿವಿಧ ಪೂಜೆ ವಿಧಿವಿಧಾನಗಳು ಪ್ರಾರಂಭವಾಗಿ, ಅಷ್ಟೋತ್ತರ ಸಹಿತ ಪಂಚಾಮೃತಾಭಿಷೇಕ ನಡೆಯಿತು. ನಂತರ ರಾಯರ ಮೂರ್ತಿಯನ್ನಿಟ್ಟುಕೊಂಡು ಪಟ್ಟಣದ ಐತಿಹಾಸಿಕ ವೆಂಕಟೇಶ್ವರ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ಜೂರಟಗಿ ಮತ್ತು ಕಾರಟಗಿ ಮಹಿಳೆಯರು ಪರಿಮಳ ಭಜನಾ ಮಂಡಳಿಯಿಂದ ಲೋಕಾಟ ಮತ್ತು ರಾಯರ ಭಜನೆ ಮಾಡಿದರು. ನಂತರ ಶ್ರೀಮಠದ ಪ್ರಾಂಗಣದಲ್ಲಿ ರಥೋತ್ಸವ ನಡೆಯಿತು.ಈ ವೇಳೆ ಬ್ರಾಹ್ಮಣ ಸಮಾಜದ ಹಿರಿಯರಾದ ಕೃಷ್ಣಾಚಾರ್ಯ ಇನಾಂದಾರ, ಪ್ರಹ್ಲಾದ್ ಜೋಷಿ, ರಾಮಕೃಷ್ಣ ಕುಲಕರ್ಣಿ, ಗೋಪಾಲರಾವ್ ಕೊಳಬಾಳ, ರಾಘವೇಂದ್ರರಾವ್ ಕುಲಕರ್ಣಿ, ಸತ್ಯನಾರಾಯಣ ಕುಲಕರ್ಣಿ, ನಾಗರಾಜ ಕುಲಕರ್ಣಿ, ವಿಠ್ಠಲರಾವ್ ಕೊಳ್ಳಿ, ಸಾಗರ ಕುಲಕರ್ಣಿ, ಮಧು ಜೋಷಿ, ನರಸಿಂಹ್ ಇನಾಂದಾರ, ಲತಾ ಜೋಷಿ, ವನಮಾಲ ದೇಸಾಯಿ, ಪ್ರತಿಭಾ ಚನ್ನಳ್ಳಿ, ಗೌರಿ ಕುಲಕರ್ಣಿ, ವಂದನಾ ಕುಲಕರ್ಣಿ ಸೇರಿದಂತೆ ಇತರರು ಇದ್ದರು.