ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು
ಸರ್ಕಾರ ಆದೇಶದನ್ವಯ ಕಳೆದ ಎರಡು ವರ್ಷಗಳ ಹಿಂದೆಯೇ ಆಡಿ ಮತ್ತು ಹಟ್ಟಿ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗಿದೆ. ಅದರಂತೆ ಇದೇ ಗ್ರಾಮ ಪಂಚಾಯಿತಿಯ ವಡ್ಡರಹಟ್ಟಿ ಗ್ರಾಮವನ್ನು ಸಹ ಕಂದಾಯ ಗ್ರಾಮವನ್ನಾಗಿ ಘೋಷಿಸಲಾಗಿದೆ. ಆದರೆ ಗ್ರಾಮಸ್ಥರ ವಿರೋಧ ಇರುವುದ ರಿಂದ ಮುಂದಿನ ದಿನಗಳಲ್ಲಿ ಕೈಬಿಡಲಾಗುವುದು, ದಾಖಲೆಗಳ ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿ ಸತ್ಯನಾರಾಯಣ ತಿಳಿಸಿದರು.ಅವರು ಸಮೀಪದ ಅರಹತೊಳಲು ಗ್ರಾಮ ಪಂಚಾಯಿತಿ ಎದುರು ಗ್ರಾಮಸ್ಥರು ವಡ್ಡರಹಟ್ಟಿ ಕಂದಾಯ ಗ್ರಾಮವನ್ನು ಕೈಬಿಡುವಂತೆ ಒತ್ತಾಯಿತಿ ಹಮ್ಮಿಕೊಂಡಿದ್ದ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು.
ಸಕಾಲದಲ್ಲಿ ಸಾಲ ಸೌಲಭ್ಯಗಳು ದೊರೆಯದಿದ್ದಾಗ ಆತ್ಮಹತ್ಯೆಯಂಥ ಪ್ರಕರಣಗಳು, ಉದ್ಭವಿಸುವ ಸಂಭವವಿದೆ. ಗ್ರಾಮಸ್ಥರು ಗ್ರಾಮಕ್ಕೆ ಒಂದು ಸರ್ಕಾರಿ ಪ್ರೌಢಶಾಲೆ ಬೇಕು ಎನ್ನುವ ಉದ್ದೇಶದಿಂದ ದೇವಸ್ಥಾನದ ಜಮೀನನ್ನು ಶಾಲೆಗೆಂದು ದಾನವಾಗಿ ನೀಡಿ, ಅದರಂತೆ ಊರಿನ ಎಲ್ಲಾ ಹಿರಿಯರ ಪ್ರಯತ್ನದ ಫಲವಾಗಿ ಪ್ರೌಢಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಹೀಗಿರುವಾಗ ಹೊಸ ಕಂದಾಯ ಗ್ರಾಮವನ್ನಾಗಿ ಮಾಡಿದರೆ ಮೂಲ ಕಂದಾಯ ಗ್ರಾಮದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದರು.ಅರಹತೊಳಲು ಗ್ರಾಮದಲ್ಲಿ 11 ಎಕರೆ 34 ಗುಂಟೆ ದನಗಳ ಮುಪ್ಪತ್ತು ಇದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಏಕೈಕ ಗೋಮಾಳವಾಗಿರುತ್ತದೆ. ಇದೂ ಕೂಡ ಮೂಲ ಕಂದಾಯ ಗ್ರಾಮದಿಂದ ಬಿಟ್ಟು ಹೋಗುವುದು. ಗ್ರಾಮದಲ್ಲಿ ಇರುವ ಸಾವಿರಾರು ದನಕರುಗಳು ಮೇಯಲು ಇರುವುದು ಇದೊಂದು ಸ್ಥಳ ಮಾತ್ರ. ಸುಮಾರು 3800 ಜನಸಂಖ್ಯೆಯನ್ನು ಹೊಂದಿರುವ ಅರಹತೊಳಲು ಗ್ರಾಮಕ್ಕೆ ಸ್ಮಶಾನದ ಅವಶ್ಯಕತೆಯನ್ನು ಮನಗಂಡ ಸರ್ಕಾರದಿಂದ 3 ಎಕರೆ ಭೂಮಿ ಮೂಲ ಕಂದಾಯ ಗ್ರಾಮಕ್ಕೆ ಮಂಜೂರಾಗಿರುತ್ತದೆ. ಆದರೆ ಹೊಸ ಕಂದಾಯ ಗ್ರಾಮ ರಚನೆಯಾದರೆ ಇದೂ ಕೂಡ ಕೈಬಿಟ್ಟು ಹೋಗುವುದು ಎಂದರು.
ಅರಹತೊಳಲು ಕಂದಾಯ ಗ್ರಾಮದಲ್ಲಿ ಇರುವ ದೊಡ್ಡ ಜಲಮೂಲ ಎಂದರೆ ಬೆಳಲಕಟ್ಟಿಕೆರೆ, 45 ಎಕರೆ 25 ಗುಂಟೆ ವಿಸ್ತೀರ್ಣವನ್ನು ಹೊಂದಿದೆ. ಕೆರೆಯಿಂದ ಸುಮಾರು 850 ಹರೆ ಭೂಮಿಗೆ ನೀರಿನ ಆಧಾರವಾಗಿದೆ. ಮೂಲ ಕಂದಾಯ ಗ್ರಾಮವಾದ ಅರತೊಳಲು ಅಸ್ತಿತ್ವಕ್ಕೆ ಪೆಟ್ಟು ಬೀಳುತ್ತದೆ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ರವಿಕುಮಾರ್, ರಾಜೇಶ್ ಪಟೇಲ್, ಎ.ಆರ್, ಬಸವರಾಜ್, ಎ.ಸಿ. ಚಂದ್ರಶೇಖರ್, ಸಿ.ಪಿ. ಚಂದ್ರಶೇಖರ್, ಎ.ಪಿ. ಮಲ್ಲೇಶಪ್ಪ, ಪಾಲಾಕ್ಷಪ್ಪ, ರಾಜಶೇಖರಪ್ಪ, ಛೇರ್ಮನ್ ಮಂಜುನಾಥ, ವೀರಭದ್ರಪ್ಪ, ಕೆ.ಆರ್. ಶ್ರೀಧರ್, ಆರ್. ಸಂದೀಪ್, ಎಲ್.ಎಸ್.ರವಿಕುಮಾರ್, ಎ.ಬಿ. ಮಲ್ಲೇಶಪ್ಪ. ಎ.ಎಂ. ಹಾಲೇಶ್. ಎ.ಎಂ. ಮಲ್ಲಿಕಾರ್ಜುನ್, ಎಸ್.ಗಿರೀಶ್, ಎಮ್.ರಾಘವೇಂದ್ರ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರ ಹಾಜರಿದ್ದರು.
ಕಂದಾಯಾಧಿಕಾರಿಗಳೇ ಅರಹತೊಳಲಿಗೆ ಕಂಟಕಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡದೇ ಎಲ್ಲೊ ಕುಳಿತು ಗ್ರಾಮದ ಕಂಟಕವಾಗುತ್ತಿದ್ದಾರೆ. ಅರಹತೊಳಲು ಗ್ರಾಮದ ವ್ಯಾಪ್ತಿಯಲ್ಲಿರುವ 1518 ಎಕರೆ ಕೃಷಿಭೂಮಿಯ ಮಾಲೀಕರು ಸದರಿ ಗ್ರಾಮದವರೇ ಆಗಿರುತ್ತಾರೆ. ಕಂದಾಯ ಗ್ರಾಮ ವಿಭಜನೆಯಿಂದ ಈ ರೈತರಿಗೆ ತೊಂದರೆಯಾಗುವುದು. ಈಗಾಗಲೇ ದಾಖಲೆಗಳನ್ನು ಪಡೆದುಕೊಂಡಿರುವ, ಹಕ್ಕು ಬದಲಾವಣೆ ಪಡೆದಿರುವ ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯ ಪಡೆದಿರುವ ರೈತರು ತಮ್ಮ ಸಾಲವನ್ನು ರಿನಿವಲ್ ಮತ್ತು ಬಗ್ಗೆ ದಾಖಲಾತಿಗಳ ಗೊಂದಲ ಸೃಷ್ಟಿಯಾಗುವುದು ಎಂದು ಗ್ರಾಮಸ್ಥರು ಆರೋಪಿಸಿದರು.